ವರದಿ ಮುರಿಗೆಪ್ಪ ಮಾಲಗಾರ

ಬಂಡಿಗಣಿ 18:ಸಾದು ಸಂತರು,ರಾಜಕಾರಣಿಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ನುಡಿದಂತೆ ನಡೆಯಬೇಕು. ಒಬ್ಬರಿಗೊಬ್ಬರು ಸಹಾಯ ಸಹಕಾರ ನೀಡಬೇಕು.ಆಪತಕಾಲದಲ್ಲಿ ಶ್ರೀಮಂತಿಕೆ ಅಧಿಕಾರ ಬಂದು ಬಳಗ ಯಾವದು ಕಾಯುವದಿಲ್ಲ ಧರ್ಮ ನಮ್ಮಲ್ಲಿದ್ದರೆ ದೇವರು ಸದಾಕಾಲ ರಕ್ಷಣೆ ಮಾಡುವನು ಎಂದು ದಾಸೋಹರತ್ನ ಚಕ್ರವರ್ತಿ ದಾನೇಶ್ವರ ಅಪ್ಪಾಜಿಯವರು ಹೇಳಿದರು. ಅವರು ಕೆಸರಗೋಪ್ಪ ಸೀಮಿಲಕ್ಕವ್ವ ದೇವಿಯ ಉಡಿತುಂಬುವ ಹಾಗೂ ನೈವೇದ್ಯ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಸತ್ಪೂರುಶರು ಪ್ರಜೆಗಳಿಗೆ ಆಶೀರ್ವಾದ ಮಾಡುವಾಗ ಒಳ್ಳೆಯವರಿಗೆ ಮಾಡಬೇಕು. ಸಂಗೊಳ್ಳಿ ರಾಯಣ್ಣನಂಥ ಎಲ್ಲರೂ ಧರ್ಮ ವೀರ ಶೂರನಾಗಿ ದೇಶ ಧರ್ಮಕ್ಕಾಗಿ ಹೋರಾಡಬೇಕು.ರಾಯಣ್ಣನಿಗೆ ಮಹಾಲಕ್ಷ್ಮೀ ದೇವಿಯ ಆಶೀರ್ವಾದವಿತ್ತು.ಅಪಘಾನಿಸ್ಥಾನದಲ್ಲಿ ನಡೆದ ಜೀವ ಹತ್ಯೆ ದುರಂತವು ಪಾಪಧಾಯಕವಾದದ್ದು ಹಿಂಸಾಚಾರ ನಡೆಯದಂತೆ ಸರಕಾರ ಕ್ರಮ ಕೈಗೊಳ್ಳಬೇಕು. ಮನಸ್ಸಿನ ಒಳಗೊಂದು ಹೊರಗೊಂದು ಭಾವನೆ ಹೊಂದದೆ ಒಂದೇ ಒಳ್ಳೆ ಮನಸ್ಸನ್ನು ಹೊಂದಿದವರು ದೇವರ ಪ್ರೀತಿಗೆ ಪಾತ್ರರಾಗುವರು. ದೇವರ ಧರ್ಮ ನಂಬಿ ನಡೆದವರು ಸಮಾಜದಲ್ಲಿ ಉನ್ನತಸ್ಥಾನ ಪಡೆದುಕೊಳ್ಳುವರು.ಮಾದವಾನಂದ ರಂಥ ಮಹಾತ್ಮರು ಉಪದೇಶ ಮಾಡುವಾಗ ತಿಳಿದುಕೊಂಡು ಆತ್ಮಜ್ಞಾನಿಗಳಾಗಿ ಮಾನವ ಜನ್ಮವನ್ನು ಉದ್ದಾರ ಮಾಡಿಕೊಳ್ಳಿರಿ ಎಂದು ಹೇಳಿದರು. ಮಹಾಂತೇಶ ಹಿಟ್ಟಿನಮಠ ಮಾಜಿ. ಜಿ. ಪ. ಅಧ್ಯಕ್ಷ ಮಾತನಾಡಿ ನಂಬಿದ ಭಕ್ತರಿಗೆ ಶ್ರೀ ರಕ್ಷೆಯಾಗಿ ರಾಜ್ಯ ಹೊರರಾಜ್ಯಗಳಲ್ಲಿ ಅನ್ನದಾಸೋಹ ಸಪ್ತಾಹ ನಡೆಸಿ ಸಂಸ್ಕಾರ, ಧರ್ಮವನ್ನು ಕಲಿಸಿ ದೇಶವನ್ನು ಉದ್ದಾರ ಮಾಡುವ ಕಲಿಯುಗದಲ್ಲಿ ಏಕೈಕ ಬಂಡಿಗಣಿ ಮಠ ಮಾತ್ರ. ಅಪಘಾನಿಸ್ಥಾನದಲ್ಲಿ ಧರ್ಮವಿಲ್ಲದಕಾರಣ ಹಿಂಸಾಚಾರ ನಡೆಯುತ್ತಿದೆ.

ನಮ್ಮ ದೇಶದಲ್ಲಿ ದಾನೇಶ್ವರರಂಥ ಮಹಾತ್ಮರು ಇರುವದರಿಂದ ನಾವೆಲ್ಲ ಸುಖವಾಗಿದ್ದೇವೆ ಎಂದು ಹೇಳಿದರು. ಇದೇಸಂದರ್ಭದಲ್ಲಿ ಕೆಸರಗೋಪ್ಪ ಭಕ್ತರು ದಾನೇಶ್ವರ ಪೂಜ್ಯರನ್ನು ಸನ್ಮಾನಿಸಿ ಸತ್ಕರಿಸಿದರು. ವಿಜಯ ವೇದಾಂಗ ಶ್ರೀಗಳು.ಪರಪ್ಪ ಬ್ಯಾಕೋಡ. ಭೀಮಪ್ಪ ತಂವಸಿ. ಮಾರುತಿ ತೇಜಪ್ಪಗೋಳ. ಚನ್ನು ದೇಸಾಯಿ. ರಾಜಕುಮಾರ ಸರಿಕರ ಹೆಸ್ಕಾಮ್ ಶಾಖಾಧಿಕಾರಿ. ಭೀಮಪ್ಪ ಸಸಾಲಟ್ಟಿ. ಕರೆಪ್ಪ ದಡ್ಡಿಮನಿ.ಬಸವರಾಜ ಹಿರೇಮಠ ಮಾರುತಿ ದೊಡಮನಿ ಸೇರಿದಂತೆ ಅನೇಕರಿದ್ದರು. ಸಹಸ್ರಾರು ಮುತ್ತೈದೆಯರಿಗೆ ಉಡಿತುಂಬಿ ಸರ್ವರಿಗೂ ಊಟದ ವ್ಯವಸ್ಥೆಯು ಬಂಡಿಗಣಿ ಮಠದಿಂದ ನಡೆಯಿತು.