ತೇರದಾಳ ಸಮೀಪದ ಹಳಿಂಗಳಿಯಲ್ಲಿ ಸಂಸದ ಪಿ.ಸಿ ಗದ್ದಿಗೌಡರ ಹಾಗೂ ಶಾಸಕ ಸಿದ್ದು ಕ ಸವದಿಯವರು ಕಾಗವಾಡ ಕಲಾದಗಿ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ವ್ಹಾಯಾ ಹಳಿಂಗಳಿ ರಸ್ತೆ ಸುಧಾರಣೆ ಹಾಗೂ ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಜನಕಲ್ಯಾಣವೇ ನಮ್ಮ ಸರಕಾರದ ಧ್ಯೇಯ : ಸಿದ್ದು ಸವದಿ
ತೇರದಾಳ : ಸಮೀಪದ ಹಳಿಂಗಳಿಯಲ್ಲಿ ಇಂದು ಬಾಗಲಕೋಟ ಲೋಕಸಭೆ ಸದಸ್ಯರಾದ ಪಿ.ಸಿ ಗದ್ದಿಗೌಡರ ಹಾಗೂ ತೇರದಾಳ ಶಾಸಕ ಮತ್ತು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಸಿದ್ದು ಕ ಸವದಿಯವರು ಕಾಗವಾಡ ಕಲಾದಗಿ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ವ್ಹಾಯಾ ಹಳಿಂಗಳಿ ಮೂಲಕ ಬೆಳಗಾವಿ ಜಿಲ್ಲೆ ಶೇಗುಣಶಿ ಸರಹದ್ದಿನ ವರೆಗಿನ ಅಂದಾಜು ವೆಚ್ಚ 322.44 ಲಕ್ಷಗಳ ರಸ್ತೆ ಸುಧಾರಣೆ ಹಾಗೂ ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು ತೇರದಾಳ ಮತಕ್ಷೇತ್ರದಾದ್ಯಂತ ಢವಳೇಶ್ವರ-ಮಾರಾಪುರ, ಢವಳೇಶ್ವರ-ಬೆಳಗಲಿ, ಕುಲಹಳ್ಳಿ-ಬಾವಿಮಡ್ಡಿ ಹಾಗೂ ಹಳಿಂಗಳಿ-ಶೇಗುಣಸಿ ರಸ್ತೆ ಅಭಿವೃದ್ಧಿಗೆ ಅಂದಾಜು 16 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿದ್ದು,ಅಗತ್ಯತೆಗೆ ತಕ್ಕಂತೆ ಇನ್ನೂ ಹೆಚ್ಚಿನ ಅನುದಾನವನ್ನು ಮತಕ್ಷೇತ್ರದ ಅಭಿವೃದ್ದಿಗೆ ಸರಕಾರದಿಂದ ಮಂಜೂರಿಸಲಾಗುವುದೆಂದು ತಿಳಿಸಿದ ಅವರು ಸಾರ್ವಜನಿಕರಿಗೆ ಸುಗಮ ಸಂಚಾರಕ್ಕಾಗಿ ರಸ್ತೆಗಳೆ ಜೀವಾಳವಾಗಿದ್ದು, ಪ್ರಥಮ ಆದ್ಯತೆಯಾಗಿ ಪ್ರತಿ ಹಳ್ಳಿಗಳಲ್ಲಿ ರಸ್ತೆ ಸುಧಾರಣೆಗೆ ಕ್ರಮವಹಿಸಲಾಗಿದೆಯಂದು ತಿಳಿಸಿದ ಅವರು ಜನಕಲ್ಯಾಣವೇ ನಮ್ಮ ಸರಕಾರದ ಮೂಲ ಧ್ಯೇಯವಾಗಿದೆಯೆಂದು ಹೇಳಿದರು.
ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದು, ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರ ಸರ್ವರಂಗಗಳ ಅಭಿವೃದ್ದಿಗೆ ಶ್ರಮಿಸುತ್ತಿದ್ದು, ಅಭಿವೃದ್ಧಿಯೇ ನಮ್ಮ ಆಡಳಿತದ ಮಂತ್ರವಾಗಿದೆಯಂದು ತಿಳಿಸಿದರು.
ಈ ಸಂಧರ್ಭದಲ್ಲಿ ಮಾಜಿ ಜಿ ಪಂ ಸದಸ್ಯ ದೇವಲ ದೇಸಾಯಿ, ಮಾಜಿ ಗ್ರಾ ಪಂ ಅಧ್ಯಕ್ಷ ಪರಪ್ಪ ಹಿಪ್ಪರಗಿ, ಮಾಜಿ ತಾ.ಪಂ ಸದಸ್ಯರಾದ ಭುಜಬಲ್ಲಿ ವೆಂಕಟಾಪೂರ, ಗಂಗಪ್ಪ ಗನವಾಡಿ ಮುಖಂಡರಾದ ಮಾಧವರಾವ ಪಾಟೀಲ,ಈರಣ್ಣತೇಲಿ, ಪರಪ್ಪ ದೇಸಾಯಿ, ಮಹಾವೀರ ಪಾಟೀಲ, ಆಧಿನಾಥ ಕುಳ್ಳಿ, ನಿಂಗಪ್ಪ ಸಂಕಾರ, ಬಸು ಯಾದವಾಡ, ಮಹಾವೀರ ಬಿಲವಡಿ, ಗುತ್ತಿಗೆದಾರ ಬಾಲು ನಂದೆಪ್ಪನವರ, ತಾಲೂಕಾ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರಾದ ಸಂಜಯ ಹಿಪ್ಪರಗಿ ಅಭಿಯಂತತರಾದ ಎಸ್ ವಾಯ್ ಬಿರಾದಾರ ಪಾಟೀಲ, ಪಿಎಸ್‍ಆಯ್ ಆರ್ ವಾಯ್ ಬೀಳಗಿ, ಸ್ಥಳೀಯ ಗ್ರಾಮ ಪಂಚಾಯತ ಕಾರ್ಯದರ್ಶಿ ವ್ಹಿ.ಬಿ ಕಾಂಬಳೆ, ಜಿ.ಸಿ ಮುದಕನ್ನವರ, ಸಿಬ್ಬಂದಿ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.
Social Plugin