*ಗ್ರಂಥಾಲಯಗಳ ಸದ್ಬಳಕೆಯನ್ನು ವಿದ್ಯಾರ್ಥಿಗಳು ಮಾಡಿಕೊಳ್ಳಬೇಕು*
 ಗ್ರಂಥಗಳು ಗ್ರಂಥಾಲಯದ ನಿಜವಾದ ಅಸ್ತಿಗಳು. ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಗ್ರಂಥಾಲಯದಲ್ಲಿ ಹೆಚ್ಚು ಹೊತ್ತು ಕಳೆದಷ್ಟು ಅವರ ಜ್ಞಾನ ಹೆಚ್ಚಾಗುತ್ತದೆ. ಗ್ರಂಥಾಲಯಗಳ ಸದ್ಬಳಕೆಯನ್ನು ವಿದ್ಯಾರ್ಥಿಗಳು ಮಾಡಿಕೊಳ್ಳಬೇಕು ಎಂದು ಸ್ಥಳೀಯ ಎಸ್‌ಟಿಸಿ ಕಾಲೇಜಿನ ಪ್ರಾಚಾರ್ಯ ಡಾ.ಜಿ.ಆರ್. ಜುನ್ನಾಯ್ಕರ್ ತಿಳಿಸಿದರು.

ಅವರು ಗುರುವಾರ ಸ್ಥಳೀಯ ಎಸ್‌ಟಿಸಿ ಕಾಲೇಜಿನಲ್ಲಿ ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್.ರಂಗನಾಥರ ಜಯಂತ್ಯುತ್ಸವದ ನಿಮಿತ್ತವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಗ್ರಂಥಪಾಲಕ ಪ್ರೊ.ವೈ.ಬಿ. ಕೊರಡೂರ ಮಾತನಾಡಿ, ಮೂಲತಃ ಗಣಿತಜ್ಞರಾಗಿದ್ದ ಎಸ್.ಆರ್. ರಂಗನಾಥರು ಮುಂದೆ ಗ್ರಂಥಪಾಲಕರಾಗಿ ಶ್ರೇಷ್ಠ ಸೇವೆಯನ್ನು ಸಲ್ಲಿಸಿದರು. ೬೦ ಕ್ಕೂ ಹೆಚ್ಚು ಗ್ರಂಥಗಳನ್ನು ಬರೆಯುವುದರ ಜೊತೆಗೆ ಗ್ರಂಥಾಲಯ ಕುರಿತು ೨೫೦೦ ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಿದ್ದಾರೆ. ಗ್ರಂಥಾಲಯಗಳ ಕುರಿತು ಅವರು ಸಾಕಷ್ಟು ಪರಿಶ್ರಮ ಪಟ್ಟಿದ್ದರು.ಇವರು ಗ್ರಂಥಾಲಯಗಳ ಅಭಿವೃದ್ಧಿಗೆ ಸಲ್ಲಿಸಿದ ಸೇವೆಯನ್ನು ಗಮನಿಸಿದ ಕೇಂದ್ರ ಸರ್ಕಾರ ೨೦೦೭ ರಲ್ಲಿ ಇವರ ಜಯಂತ್ಯುತ್ಸವವನ್ನು ಗ್ರಂಥಪಾಲಕರ ದಿನಾಚರಣೆಯನ್ನಾಗಿ ಆಚರಣೆ ಮಾಡುತ್ತದೆ. ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಗ್ರಂಥಾಲಯದಲ್ಲಿರುವ ವೈವಿಧ್ಯಮಯವಾದ ಗ್ರಂಥಗಳ ಸದ್ಬಳಕೆ ಮಾಡಿಕೊಂಡು ಉತ್ತಮ ಜ್ಞಾನವನ್ನು ಪಡೆದುಕೊಳ್ಳಬೇಕು ಎಂದು ಪ್ರೊ.ವೈ.ಬಿ.ಕೊರಡೂರ ಹೇಳಿದರು.

ವರದಿ
ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು
ಬಾಗಲಕೋಟೆ