*ಪ್ರತಿಭಾವಂತರಿಗೆ ಉತ್ತಮ ಅವಕಾಶಗಳು ನಿಶ್ಚಿತ*
ಪ್ರತಿಭೆಗೆ ಯಾವುದೇ ಅಡ್ಡಿ ಆಗಲಾರದು, ಅದು ಎಲ್ಲೇ ಇರಲಿಬೆಳಕಿಗೆ ಬಂದೇ ಬರುತ್ತದೆ. ಪ್ರತಿಭಾವಂತರಿಗೆ ಉತ್ತಮ ಅವಕಾಶಗಳು ಸಿಕ್ಕೆ ಸುಗುತ್ತವೆ ಎಂದು ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಎಂ. ನೇಮಗೌಡ ಹೇಳಿದರು.
ಅವರು ಗುರುವಾರ ಆಸಂಗಿಯಲ್ಲಿ ಇತ್ತೀಚಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಆಸಂಗಿಯ ಸರಕಾರಿ ಪ್ರೌಢಶಾಲೆಯ ವಿಧ್ಯಾರ್ಥಿನಿ ಮಂಜುಳಾ ಭಜಂತ್ರಿ ೬೨೫ಕ್ಕೆ ೬೧೯ ಅಂಕ ಪಡೆದುಕೊಂಡು ರಬಕವಿ-ಬನಹಟ್ಟಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಕೊಂಡ ಹಿನ್ನಲೆಯಲ್ಲಿ ತಾಲೂಕು ಶಿಕ್ಷಣ ಇಲಾಖೆ ಅಧಿಕಾರಿಗಳು ಅವರ ಮನೆಗೆ ತೆರಳಿ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ನಮ್ಮ ಸರಕಾರಿ ಶಾಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿನಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ವಿದ್ಯಾರ್ಥಿನಿ ಮುಂದೆಯೂ ಕೂಡಾ ಇಂತಹಸಾಧನೆಯನ್ನು ಮಾಡಲಿ ಅವಳ ಉನ್ನತ ಶಿಕ್ಷಣಕ್ಕೆ ತಾಲೂಕು ಶಿಕ್ಷಣ ಇಲಾಖೆ ಎಲ್ಲ ರೀತಿಯಿಂದಲೂ ಸಹಾಯ ಹಸ್ತ ನೀಡಲಿದೆ ಎಂದು ತಿಳಿಸಿದರು.
ವರದಿ
ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು
ಬಾಗಲಕೋಟೆ

Social Plugin