*ಗಣೇಶ ಮೂರ್ತಿ, ದೇವಸ್ಥಾನ ಸ್ಥಾಪನೆ*
ನಾವೆಲ್ಲ ನಮ್ಮ ಪರಂಪರೆಯ ಪ್ರತಿನಿಧಿಗಳು, ಅದನ್ನು ಮುಂದಿನ ಪೀಳಿಗೆಗೆ ಕೊಂಡೊಯುವದು ನಮ್ಮೆಲ್ಲರ ಜವಾಬ್ದಾರಿ ಎಂದುಶ್ರೀಶೈಲ ಪೀಠದ ಜಗದ್ಗುರು ಡಾ. ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಕಾಲತಿಪ್ಪಿ ಗ್ರಾಮದ ಗೌಡರ ತೋಟದ ಶಾಲೆ ಪ್ಲಾಟ್‌ನಲ್ಲಿ ಗಣೇಶ ಮೂರ್ತಿ ಹಾಗು ದೇವಸ್ಥಾನ ಪ್ರತಿಷ್ಠಾನಗೊಳಿಸಿ ಮಾತನಾಡಿದ ಅವರು, ಗಣೇಶನನ್ನು ಪೂಜಿಸುವದರಿಂದ ಸಂತೋಷ ಹಾಗು ಸಮೃದ್ಧಿ ಬರುತ್ತದೆ ಎಂದು ನಂಬಲಾಗಿದೆ.

 ಅದೇ ಸಮಯದಲ್ಲಿ ಬುದ್ದಿವಂತಿಕೆಯೂ ಹೆಚ್ಚಾಗುತ್ತದೆ. ಗಣೇಶನ ಆರಾಧನೆಯು ಮನುಷ್ಯನ ಆಸೆಗಳನ್ನು ಈಡೇರಿಸುತ್ತದೆ. ಅವನನ್ನು ಪೂಜಿಸುವ ಮೂಲಕ ಕೆಲಸವೂ ಪುನರಾರಂಭಗವಾಗುತ್ತದೆ ಎಂದು ಸ್ವಾಮೀಜಿ ಹೇಳಿದರು.

ಶಹಾಪುರದ ಭಾಧ್ಯಾಪುರ ಸಿದ್ಧವಟಧಾಮ ಸಚ್ಚಿದಾನಂದ ಸ್ವಾಮೀಜಿ, ಬನಹಟ್ಟಿಯ ಹಿರೇಮಠದ ಶರಣಬಸವ ಶಿವಾಚಾರ್ಯರು, ಹುಬ್ಬಳ್ಳಿಯ ಸಿದ್ಧಾರೂಢಮಠದ ಕಂಬಳಿತಾತಾ, ತೇರದಾಳದ ಬಾಲಗಂಗಾಧರ ಮರಿದೇವರು, ತೇರದಾಳದ ಮಲ್ಲಯ್ಯ ಮಠದ ಸೇರಿದಂತೆ ಅನೇಕ ಸ್ವಾಮೀಜಿಗಳು ಪಾಲ್ಗೊಂಡಿದ್ದರು.

ಲಕ್ಕಪ್ಪ ಪಾಟೀಲ, ಸುರೇಶ ಜಗದಾಳ, ಕುಬೇರ ನಾಯಕ, ಬಸಪ್ಪ ಪಾಟೀಲ, ಪ್ರಕಾಶ ಲತ್ತಿ, ಶ್ರೀಶೈಲ ಪಾಟೀಲ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.


ವರದಿ
ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು
ಬಾಗಲಕೋಟೆ