ಸ್ವಾತಂತ್ರ್ಯ ಸಂಗ್ರಾಮದ ಸೇನಾನಿ, ಸರ್ವೋದಯದ ಹರಿಕಾರ, ಇಂಚಗೇರಿ ಮಠದ ಕೀರ್ತಿಯನ್ನು ಉತ್ತುಗಂಕ್ಕೆರಿಸಿದ ರೂವಾರಿ ಶ್ರೀ ಮಹಾದೇವರು.
ವರದಿ: ಸಂಗಮೇಶ ಅ. ಹಿರೇಮಠ.
ಮುಗಳಖೋಡ: ವಿಮಲ ಪರಬ್ರಹ್ಮ ಸ್ವರೂಪವಾದ ಚೈತನ್ಯ ಶಕ್ತಿ ಇಡೀ ವಿಶ್ವದ ಜೀವಗಳ ಅಂತರಂಗದಲ್ಲಿ ರಾರಾಜಿಸುತ್ತಿದೆ ಅದುವೇ ಪರಮಾತ್ಮ ತನ್ನನ್ನು ತಾನು ಅರಿತರೇ ತಾನೇ ದೇವರು ನೋಡಾ ಕೂಡಲಸಂಗಮ ಎಂಬಂತೆ, ಧ್ಯಾನದಿಂದ ಮನಶ್ಶುದ್ಧಿ, ಮನಶ್ಶುದ್ಧಿಯಿಂದ ಚಿತ್‍ಶುದ್ಧಿಯಾದಾಗ ಮನುಷ್ಯನೇ ಮಹಾತ್ಮನಾಗುತ್ತಾನೆ, ಮನಸ್ಸನ್ನು ಗೆದ್ದವನು ವಿಶ್ವವನ್ನೇ ಗೆಲ್ಲಬಲ್ಲಾ ಎಂದು ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದ ಶ್ರೀ ಸಂಗಮೇಶ್ವರ ಜ್ಞಾನ ಯೋಗಾಶ್ರಮದ ಪೀಠಾಧಿಪತಿಯಾದ ಪ್ರಭು ಬೆನ್ನಾಳೆ ಮಹಾರಾಜರು ತಮ್ಮ ಅಭಿಮತ ವ್ಯಕ್ತಪಡಿಸಿದರು.
ಅವರು ಮುಗಳಖೋಡ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿದ ಇಂಚಗೇರಿ ಮಠದಲ್ಲಿ ಶ್ರೀ ಸದ್ಗುರು ಮಾದವಾನಂದರ ಮೂರ್ತಿ (ಪ್ರಾಣ) ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆರ್ಶಿವಚನ ನೀಡುತ್ತಾ, ಕರ್ನಾಟಕದ ಏಕೀಕರಣದ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಜಯಪುರ ಜಿಲ್ಲೆಯ ಸುಕ್ಷೇತ್ರ ಇಂಚಗೇರಿ ಮಠದ ಅಂದಿನ 5 ನೇ ಗುರುಗಳಾಗಿದ್ದ, ಹುಬ್ಬಳ್ಳಿಯ ಮಹಾದೇವಪ್ಪ ಮತ್ತು ಅವರ ತಮ್ಮ ಅಸಂಖ್ಯಾತ ಭಕ್ತರನ್ನು ಆಧ್ಯಾತ್ಮಿಕತೆಗೆ ಅಷ್ಟೆ ಸಿಮೀತವಾಗಿರಿಸಿದೆ ದೇಶ-ಸಮಾಜ, ರೈತ, ನೇಕಾರ, ಜನಸೇವೆ, ನಾಡು-ನುಡಿ ಮತ್ತು ಭಾಷೆ, ಪ್ರಾಂತ ರಚನೆ, ಸ್ವಾತಂತ್ರ್ಯ ಚಳುವಳಿ, ಕರ್ನಾಟಕ ಏಕೀಕರಣಕ್ಕಾಗಿ ಚಳುವಳಿಗಳಲ್ಲಿ ತಮ್ಮನ್ನು ತಾವು, ಭಕ್ತರನ್ನು ದೇಶ ಹಾಗೂ ನಾಡಿನ ಸೇವೆಗೆ ತೊಡಗಿಸಿಕೊಂಡ ಕೀರ್ತಿ ಈ ಮಾದವಾನಂದ ಪ್ರಭೂಜೀಯವರದು ಎಂದು ಸುಕ್ಷೇತ್ರ ಹಿಪ್ಪರಗಿ ಸಂಗಮೇಶ್ವರ ಮಠದ ಈಗಿನ ಗುರುಗಳಾದ ಪ್ರಭೂಜೀ ಮಹಾರಾಜರು ಹೇಳಿದರು.
ಮುಗಳಖೋಡದಲ್ಲಿ ಸುಮಾರು 19-20ನೇ ಶತಮಾನದಲ್ಲಿ ಬಾಹುಸಾಹೇಬ ಮಹಾರಾಜರ ಸಪ್ತಾಹ ಏರ್ಪಡಿಸುತ್ತಾ ಆ ಕಾರ್ಯಕ್ರಮಕ್ಕೆ ಗೀರಿಮಲ್ಲೇಶ್ವರ ಮಹಾರಾಜರು, ಶಿವಪ್ರಭು ಮಹಾರಾಜರು, ಮಾದವಾನಂದ ಪ್ರಭೂಜಿ ಅವರು ಬೇಟಿಕೊಡುತ್ತಿದ್ದರು. ಮುಗಳಖೋಡದಲ್ಲಿ ಚಿಕ್ಕದಾಗಿದ್ದ ಇಂಚಗೇರಿ ಆಶ್ರಮ ಕಾಲ ಗತಿಸಿದಂತೆ ಎಲ್ಲಾ ಸದ್ಗುರುಗಳ ಆರ್ಶಿವಾದದ ಫಲವಾಗಿ ಇಂದು ಸಾವಿರಾರು ಭಕ್ತರನ್ನೊಳಗೊಂಡು 2021ರ ಹೊತ್ತಿಗೆ ದೊಡ್ಡ ಮಠವಾಗಿ ಬೆಳವಣಿಗೆ ಹೊಂದಿ, ಇವತ್ತು ಸಾವಿರಾರು ಪವಾಡ ಗೈದ ಶ್ರೀ ಸದ್ಗುರು ಮಾದವಾನಂದ ಪ್ರಭೂಜಿಯವರ ಮೂರ್ತಿ (ಪ್ರಾಣ) ಪ್ರತಿಷ್ಠಾಪನೆ ಮಾಡಲಾಗಿದೆ. ಭಕ್ತರೆಲ್ಲರು ಶ್ರದ್ಧೆ, ಭಕ್ತಿ, ನಂಬಿಕೆಯಿಂದ ಧಾನ-ಧರ್ಮದಲ್ಲಿ ಪಾಲ್ಗೊಂಡು ಸದ್ಗುರುವಿನ ದ್ಯಾನ ಮಾಡಿದರೆ ಮುಗಳಖೋಡ ಪಟ್ಟಣವು ಉತ್ತುಂಗಕ್ಕೆರಲು ಸಂಶಯವೇ ಇಲ್ಲ ಎಂದು ಹೇಳಿದರು.
ನಂತರ ಹೊಸುರಿನ ಅರವಿಂದ ವಕಿಲರು (ಮಹಾರಾಜರು) ಮಾತನಾಡಿ, ಪಾಪ-ಪ್ಮಣ್ಯಗಳ ಮಿಶ್ರಫಲದಿಂದ ಲಭಿಸಿರುವ ಈ ಮನುಷ್ಯ ಜನ್ಮವು ಪಾವನವಾಗಬೇಕಾದರೆ ಮಾಧವಾನಂದ ಪ್ರಭುಗಳ ದ್ಯಾನ ಮಾರ್ಗ ಒಂದೇ ಮಹತ್ತರವಾದ ಸಾಧನ ಎಂದರು.
ಮೂರ್ತಿ ಪ್ರತಿಷ್ಠಾಪನೆ: ಬುದವಾರ ಸಾಯಂಕಾಲ ಪಟ್ಟಣಕ್ಕೆ ಬಂದ ಮಾದವಾನಂದರ ಮೂರ್ತಿಯನ್ನು ಘಟಪ್ರಭಾದ ಜಿ,ಏ,ಪತ್ತಾರ ಹಾಗೂ ಹಿಪ್ಪರಗಿಯ ಮುರಾರಿ ಅಜ್ಜಕ್ಕನ್ನವರ ಅವರ ಮಾರ್ಗದರ್ಶನದಂತೆ ದಯಾನಂದ ಆಚಾರ್ಯರವರು ಗಣಪತಿ ಹಾಗೂ ನವಗ್ರಹ ಪೂಜಾ ಏರ್ಪಡಿಸಿ ರಾತ್ರಿ 10 ಗಂಟೆಯಿಂದ ಗುರುವಾರ ಬೆಳಗಿನಜಾವ 5 ಗಂಟೆಯವರಿಗೆ ಜಲವಾಸ, ಧಾನ್ಯವಾಸ, ಪುಷ್ಪವಾಸ, ಸೇನವಾಸಗಳ ವಿಧಿವಿದಾನಗಳನ್ನು ನೆರವೇರಿಸಿ ಪಂಚಾಮೃತ ಅಭೀಷೇಕ ಮಾಡಿ 6 ಗಂಟೆಯ ಹೊತ್ತಿಗೆ ನಿಗದಿಪಡಿಸಿದ ಸ್ಥಳದಲ್ಲಿ ಮೂರ್ತಿಗೆ ರುದ್ರಾಭೀಷೇಕದೊಂದಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು.
ಅಲಂಕಾರ: ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿದ ಇಂಚಗೇರಿ ಮಠವನ್ನು ಪುಷ್ಪಗಳಿಂದ ಬಣ್ಣ ಬಣ್ಣದ ವಿದ್ಯುತ್ತ ದೀಪ, ಮಾವಿನ ತೋರಣಗಳಿಂದ ಅಲಂಕಾರಗೊಳಿಸಲಾಗಿತ್ತು. ಪ್ರಾಣ ಪ್ರತಿಷ್ಠಾಪನೆಯ ನಂತರ ಭಜನೆ, ಆಧ್ಯಾತ್ಮಿಕ ಪುರಾಣ, ದಾಸಭೋದ, ಪ್ರವಚನ ಹಾಗೂ ಗುರುಗಳಿಂದ ಭಕ್ತರಿಗೆ ಆರ್ಶೀವಚನ ಕಾರ್ಯಕ್ರಮ ನಡೆಯಿತು. ಎಲ್ಲ ಭಕ್ತರು ಕೋವಿಡ್ 19ರ ಸರ್ಕಾರದ ನಿಯಮಗಳಂತೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿಸಲಾಗಿತ್ತು.
ಈ ಸಂದರ್ಭದಲ್ಲಿ ಹಿಪ್ಪರಗಿ ಶ್ರೀ ಮಠದ ಪ್ರಭೂಜೀ ಮಹಾರಾಜರು, ಹೊಸುರಿನ ಅರವಿಂದ ವಕೀಲರು (ಮಹಾರಾಜರು), ಮುರಾರಿ ಅಜ್ಜಕ್ಕನ್ನವರ, ಘಟಪ್ರಭಾದ ಚಿತ್ರಕಲಾ ಶಿಕ್ಷಕರಾದ ಜಿ.ಏ.ಪತ್ತಾರ, ದಯಾನಂದ ಆಚಾರ್ಯ, ಮಠದ ಅರ್ಚಕ ಶಿವಸಂಗಯ್ಯ ಹಿರೇಮಠ ಮತ್ತು ಮುಗಳಖೋಡ ಪಟ್ಟಣದ ಎಲ್ಲ ಗುರು ಹಿರಿಯರು ಹಾಗೂ ಇಂಚಗೇರಿ ಮಠದ ಸಕಲ ಸದ್ಭಕ್ತರು ಪಾಲ್ಗೊಂಡಿದರು.
Social Plugin