ಬಂಡಿಗಣಿ 19:ಗುರು ತಾಯಿ ತಂದೆಯರಿಗೆ ಶಿರಬಾಗಿ ನಡೆಯಬೇಕು. ಮಹಾತ್ಮರ ದರ್ಶನದಿಂದ ಪಾಪ ನಾಶವಾಗುವದು.ಹಗಲಗಳ್ಳ ಶರಣರಾಗದೆ ಸತ್ಯ ಶರಣಾಗಿರಿ ನಂದಿಕೇಶ್ವರ ದೇವಸ್ಥಾನದಲ್ಲಿ ಪುಣ್ಯ ಪುರುಷರು ತಪಸ್ಸು ಮಾಡಿದ ಪುಣ್ಯದ ಜಾಗೃತ ಸ್ಥಳವೆಂದು ಬಂಡಿಗಣಿಯ ದಾನೇಶ್ವರ ಶ್ರೀಗಳು ಹೇಳಿದರು. ಅವರು ಜಮಖಂಡಿ ನಗರದಲ್ಲಿರುವ ನಂದಿಕೇಶ್ವರ ದೇವರ ನೈವೇದ್ಯ ಹಾಗೂ ಸಪ್ತಾಹ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಪತ್ರಕರ್ತರು ಚಿತ್ರಗುಪ್ತ ಲೇಖಕರಿದ್ದಂತೆ ಹಣದ ಆಸೆ ಮಾಡದೆ ಯಾವ ಸಂಬಂಧ ಹಿಡಿಯದೆ ಸತ್ಯ ಸಂಗತಿಯನ್ನು ಸಮಾಜಕ್ಕೆ ತಿಳಿಸುವ ಕಾರ್ಯ ಮಾಡಿದವರು ತಮಗೂ ಸುಖವಾಗಿ ಸಮಾಜಕ್ಕೆ ಒಳ್ಳೆ ಕೊಡುಗೆ ನೀಡಿದಂತಾಗುತ್ತದೆ.ಮಾಹಾತ್ಮರ ನಿಂದೆಮಹಾಪಾಪವಾದದ್ದು.ರಾಮಾವತಾರದಲ್ಲಿ ಯಜ್ಞಯಾಗಾದಿಗಳಿಗೆ ದುಷ್ಟ ಜನ ಅಡೆತಡೆ ಮಾಡಿ ಪಾಪಕ್ಕೆ ಗುರಿಯಾಗಿದ್ದಾರೆ.
 ಕಲಿಯುಗದಲ್ಲಿ ಕೂಡಾ ದುಷ್ಟ ಜನಾ ಇದ್ದಾರೆ. ಮನೆ ಮನೆಗೆ ಪಾಂಡವರಾಗಿ ಧರ್ಮ ಸ್ಥಾಪನೆಗೆ ಎಲ್ಲರೂ ಸಹಕಾರ ನೀಡಬೇಕು. ಧರ್ಮದ ಗುರು ಉಪದೇಶ ನೀಡುವಾಗ ತಿಳಿದು ಕೊಂಡು ಅವರ ಪ್ರೀತಿಗೆ ಪಾತ್ರರಾಗಬೇಕು.ದೇಹದಲ್ಲಿ ಶಕ್ತಿಯಿದ್ದಾಗಲೇ ಭಕ್ತಿ ದಾನ ಧರ್ಮ ಮಾಡಿ ಪುಣ್ಯ ಪಡೆದುಕೊಳ್ಳಿರಿ.ಕಾಕವಿದ್ಯೆ ನಂಬದೆ ಬೂದಿ ಬಂಡಾರ ದೇವರನ್ನು ನಂಬಿ ನಡೆಯಿರಿ.ಕೊರೋನಾ ಭಯದಿಂದ ಪರಿಹಾರಕ್ಕಾಗಿ ಬಬಲಾದಿ ಮಠಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ. ಕಷ್ಟ ಸುಖವಿದ್ದರೂ ದೇವರನ್ನು ಮರೆಯದೆ ಸದಾಕಾಲ ಸ್ಮರಿಸಬೇಕು.ಸದಾಶಿವರು 12 ವರ್ಷದ ಹುಡುಗಿಯನ್ನು ಬದಲಾವಣೆ ಮಾಡಿ ಗಂಡು ಮಗುವನ್ನಾಗಿ ಮಾಡಿದ ಪವಾಡ ಪುರುಷ ಮುಂದಿನದು ಸಾರಿ ಹೇಳಿದ ತ್ರಿಕಾಲ ಜ್ಞಾನಿಗಳು ಎಂದು ಹೇಳಿದರು.ದೇಶವನ್ನು ರಕ್ಷಣೆ ಮಾಡುವ ಸೈನಿಕರು ಸತ್ಯ ನಿಷ್ಠೆಯಿಂದ ದೇಶದ ಮೇಲೆ ಅನ್ಯಾಯವಾಗದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು. ವಿಜಯ ವೇದಾಂಗ ಶ್ರೀಗಳು ಮಾತನಾಡಿ ಭಕ್ತರನ್ನು ಉದ್ದಾರ ಮಾಡಿ ಮುಕ್ತಿ ಕೊಡಲಿಕ್ಕೆ ಅವತಾರಿಕರು ಭೂಮಿಗೆ ಬಂದಿರುತ್ತಾರೆ.ತಿಳಿದುಕೊಂಡು ಉದ್ದಾರವಾಗಬೇಕೆಂದು ಹೇಳಿದರು.
 ಮಲ್ಲಿಕಾರ್ಜುನ ಮಠ ನ್ಯಾಯವಾದಿ ಮಾತನಾಡಿ ನಾಸ್ತಿಕರ ಶಕ್ತಿಗಿಂತ ದೈವಿಶಕ್ತಿ ಅಪಾರವಾದದ್ದು. ಸದ್ಗುಣವಿದ್ದವರಿಗೆ ದೈವಬಲವಿರುತ್ತದೆ. ಎಲ್ಲಾ ಮಠಗಳು ಕೈ ಒಡ್ದುತ್ತವೆ ಆದರೆ ದಾನೇಶ್ವರ ಶ್ರೀಗಳು ಭಕ್ತರಿಗೆ ಕೊಟ್ಟು ಉದ್ದಾರಮಾಡುವ ಶ್ರೇಷ್ಠ ಮಠವೆಂದು ಹೇಳಿದರು. ಇದೆ ಸಂದರ್ಭದಲ್ಲಿ ಜಮಖಂಡಿ ಭಕ್ತರು ದಾನೇಶ್ವರ ಶ್ರೀಗಳಿಗೆ ಸನ್ಮಾನಿಸಿ ಸತ್ಕರಿಸಿ, ಸಹಸ್ರಾರು ಮುತ್ತೈದೆಯರಿಗೆ ಉಡಿ ತುಂಬಿ ಸರ್ವರಿಗೂ ಊಟದ ವ್ಯವಸ್ಥೆ ಬಂಡಿಗಣಿ ಮಠದಿಂದ ನಡೆಯಿತು.ವಿಜಯಕುಮಾರ ಕಂಬಿ. ಡಾ ಭರತ ಲೋನಾರೆ. ಕರೆಪ್ಪ ದಡ್ಡಿಮನಿ ಸೇರಿದಂತೆ ಅನೇಕರಿದ್ದರು.