"KGF" ಚಿತ್ರ ಬಿಡುಗಡೆ ದಿನವೇ "ಅಮೃತ ಘಳಿಗೆ " ಎಂಬ ಚಿತ್ರವನ್ನು ಧೈರ್ಯ ಮಾಡಿ ಬಿಡುಗಡೆ ಮಾಡಿದ್ದ ನಿರ್ಮಾಪಕ ನಟ ಎಸ್. ಎನ್.ರಾಜಶೇಖರ್ ಈ ಬಾರಿ ಶ್ರೀ ಬನಶಂಕರಿ ಫಿಲಂಸ್ ಸಂಸ್ಥೆಯಿಂದ "ಧೂo..ಧೂo..ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಟಿ. ಎನ್ ನಾಗೇಶ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು ಈಗಾಗಲೇ ಸೆನ್ಸಾರ್ ಮುಗಿಸಿ ಬಿಡುಗಡೆಗೆ ಸಿದ್ಧವಾಗಿದೆ. ತಾರಾಗಣದಲ್ಲಿ ರಾಜಶೇಖರ್, ಪೂಜಾ , ಭುವನ್,ಸುಚೇಂದ್ರ ಪ್ರಸಾದ್,ರಮೇಶ ಪಂಡಿತ್ ಇದ್ದು, ಸಂಗೀತ - ವೀರ್ ಸಮರ್ಥ್,  ಛಾಯಾಗ್ರಹಣ - ಬೆನಕರಾಜ್, ಸಂಕಲನ - ಲಕ್ಷ್ಮಣರೆಡ್ಡಿ ,  PRO - ನಾಗೇಂದ್ರ, ಈ ಚಿತ್ರವನ್ನು ಕೂಡಾ "KGF 2"  ಬಿಡುಗಡೆಯ ದಿನವೇ ಬಿಡುಗಡೆ ಮಾಡಲು ನಿರ್ಮಾಪಕರು ಧೈರ್ಯ ಮಾಡುವರೇ...? ಕಾದುನೋಡಬೇಕಾಗಿದೆ.