*ಬಾಗಲಕೋಟೆ*
 *ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಗಾಣಿಗ ಸಮುದಾಯವನ್ನು ನಿರ್ಲಕ್ಷಿಸಿದರೆ ತಕ್ಕಪಾಠ ನಿಶ್ಚಿತ:: ಗಾಣಿಗ ಸಮುದಾಯದ ಶ್ರೀ ಕಲ್ಲಿನಾಥ ದೇವರು ಜಗದ್ಗುರು ಶ್ರೀ ದಿಗಂಬರೇಶ್ವರ ಸಂಸ್ಥಾನಮಠ ಕೋಲಾರ*

 ಜಮಖಂಡಿ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ದಿವಂಗತ ರಾಮಣ್ಣ ಕಲ್ಲುತಿ ಅವರು ಆದಮೇಲೆ ಇಲ್ಲಿಯವರೆಗೂ ಗಾಣಿಗ ಸಮುದಾಯಕ್ಕೆ ವಿಶೇಷ ಸ್ಥಾನಮಾನ ದೊರಕಿಲ್ಲ ಇದು ನಮಗೆ ಬೇಸರ ಸಂಗತಿ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಗಾಣಿಗ ಸಮುದಾಯದ 34 ಸಾವಿರ ಮತಗಳಿವೆ. ಇಲ್ಲೂ ಸಹ ಗಾಣಿಗ ಸಮುದಾಯ ನಿರ್ಣಾಯಕ ಪಾತ್ರ ವಹಿಸುತ್ತದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ಗಾಣಿಗ ಸಮುದಾಯವನ್ನು ನಿರ್ಲಕ್ಷಿಸಿದರೆ ಮುಂಬರುವ ಚುನಾವಣೆ ನಿಮಗೆ ಕಂಟಕ ವಾಗಬಹುದು ಆ ದೃಷ್ಟಿಯಿಂದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದವರು ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯತಗಳಲ್ಲಿ ಗಾಣಿಗ ಸಮುದಾಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಬೇಕೆಂದು
ಗಾಣಿಗ ಸಮುದಾಯದ ಶ್ರೀ ಕಲ್ಲಿನಾಥ ದೇವರು ಜಗದ್ಗುರು ಶ್ರೀ ದಿಗಂಬರೇಶ್ವರ ಸಂಸ್ಥಾನಮಠ ಕೋಲಾರ ಆಗ್ರಹಿಸಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಜ್ಯೋತಿ ಕ್ರೆಡಿಟ್ ಸೊಸೈಟಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಗಾಣಿಗ ಸಮುದಾಯದ ಶ್ರೇಷ್ಠ ನಾಯಕ ಇಡೀ ರಾಷ್ಟ್ರವೇ ಭಾರತವನ್ನು ನೋಡುವಹಾಗೆ ಮಾಡಿದ ನಾಯಕ ದೇಶದ ಪ್ರಧಾನಮಂತ್ರಿ ಸನ್ಮಾನ್ಯ ನರೇಂದ್ರಮೋದಿಯವರು ದೇಶದ ಜನರಿಗಾಗಿ ಹಗಲಿರುಳು ಉತ್ತಮ ಕೆಲಸ ಮಾಡುತ್ತಿದ್ದಾರೆ. ನಮ್ಮ ಸಮುದಾಯದ ನಾಯಕರು ಎಂದು ಹೇಳಲು ನಮಗೆ ಸಂತೋಷವೆನಿಸುತ್ತದೆ. 

ಗುಜರಾತಿನಲ್ಲಿ ಗಾಣಿಗ ಸಮುದಾಯ ಸ್ವಲ್ಪ ಪ್ರಮಾಣದಲ್ಲಿತ್ತು ಅಂಥ ಸಂದರ್ಭದಲ್ಲಿ ಮೂರು ಬಾರಿ ಗುಜರಾತ ಮುಖ್ಯಮಂತ್ರಿಯಾಗಿ ಅಭೂತ ಸೇವೆಸಲ್ಲಿಸಿದ ನಾಯಕ ನರೇಂದ್ರ ಮೋದಿ ಹಾಗಾಗಿ ತೇರದಾಳ ವಿಧಾನಸಭಾ ಕ್ಷೇತ್ರ ಮತ್ತು ಜಮಖಂಡಿ ಕ್ಷೇತ್ರದಲ್ಲಿ ಗಾಣಿಗ ಸಮುದಾಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಬೇಕೆಂದು ಆಗ್ರಹಿಸಿದರು.

ಗಾಣಿಗ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯೂ ಶೈಕ್ಷಣಿಕ ಮತ್ತು ರಾಜಕೀಯವಾಗಿ ಬಲಾಟೆಯನ್ನು ಹೊಂದಿ ಸಮುದಾಯವನ್ನು ಎತ್ತರ ಮಟ್ಟಕ್ಕೆ ಬೆಳೆಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಹೇಳಿದರು.

ವರದಿ : ಪ್ರಕಾಶ ಕುಂಬಾರ