ತೇರದಾಳದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಭಾಜಪ ಮುಖಂಡರು ಮಾತನಾಡಿದರು.
ಸಿದ್ದು ಸವದಿಯವರಿಗೆ ಸಚಿವ ಸ್ಥಾನ ನೀಡಲು ಒತ್ತಾಯ
ತೇರದಾಳ : ಜಮಖಂಡಿ ಮತಕ್ಷೇತ್ರದಿಂದ ಒಂದು ಸಾರಿ ಹಾಗೂ ತೇರದಾಳ ಮತಕ್ಷೇತ್ರದಿಂದ ಎರಡು ಸಾರಿ ಆಯ್ಕೆಯಾಗಿರುವ ಸಿದ್ದು ಸವದಿಯವರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಭಾಜಪ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಸರಕಾರವನ್ನು ಒತ್ತಾಯಿಸಿದರು.
ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನದ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಹಿಂದಿನ ಚುನಾವಣೆಯಲ್ಲಿ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತೇರದಾಳ ಮತಕ್ಷೇತ್ರದಿಂದ ಸ್ಪರ್ಧಿಸಲು ಕೇಳಿದಾಗ ಸಿದ್ದು ಸವದಿಯವರು ಕ್ಷೇತ್ರವನ್ನೇ ಬಿಟ್ಟು ಕೊಡಲು ತಯಾರಾಗಿದ್ದರು ಅಂತಹ ಉದಾರ ಮನಸ್ಸಿನವರಿದ್ದಾರೆ. ಪಕ್ಷಕ್ಕೆ ದ್ರೋಹ ಮಾಡದೇ ಆರ್ ಎಸ್ ಎಸ್ ನ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ. ಈ ಹಿಂದೆ ಸರಕಾರದ ಮುಖ್ಯ ಸಚೇತಕರಾಗಿ ಕೆಲಸ ಮಾಡಿದ್ದಾರೆ. ಕೋವಿಡ್ ಹಾಗೂ ನೆರೆ ಹಾವಳಿ ಸಂದರ್ಭದಲ್ಲಿಯೂ ಸಹ ಜನರ ಕಷ್ಟಕ್ಕೆ ಸ್ಫಂಧಿಸಿದ್ದಾರೆ. ಪಕ್ಷದ ಎಲ್ಲ ಕಾರ್ಯಕರ್ತರನ್ನು ಸಮಾನ ದೃಷ್ಟಿಯಿಂದ ಕಾಣುತ್ತಾರೆ. ಮತಕ್ಷೇತ್ರದಲ್ಲಿ ಎಲ್ಲ ಜನರ ನಾಡಿ ಮಿಡಿತ ಸಿದ್ದು ಸವದಿಯವರು ಆಗಿದ್ದಾರೆ. ಈ ಸಲದ ಬಸವರಾಜ ಬೊಮ್ಮಾಯಿ ಅವರ ಆಡಳಿತದ ಸಚಿವ ಸಂಪುಟದಲ್ಲಿ ಸಿದ್ದು ಸವದಿಯವರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಪಟ್ಟಣದ ಮುಖಂಡರು ಹಾಗೂ ಕಾರ್ಯಕರ್ತರ ಸರಕಾರವನ್ನು ಒತ್ತಾಯಿಸಿದರು.
ನಗರ ಘಟಕ ಅಧ್ಯಕ್ಷ ಮಹಾವೀರ ಕೊಕಟನೂರ, ರಮೇಶ ಧರೆನ್ನವರ, ಸದಾಶಿವ ಹೊಸಮನಿ, ಜಿನ್ನಪ್ಪ ಸವದತ್ತಿ, ಶಂಕರ ಕುಂಬಾರ, ಸಿದ್ದು ಅಮ್ಮಣಗಿ, ಅಲ್ಲಪ್ಪ ಬಾಬಗೊಂಡ, ನಾಗಪ್ಪ ದೊಡಮನಿ, ಆಕಾಶ ತೇಲಿ, ವರ್ಧಮಾನ ಕಡಹಟ್ಟಿ, ಅಜೀತ ಮಗದುಮ್ಮ ಸೇರಿದಂತೆ ಪುರಸಭೆ ಭಾಜಪ ಸದಸ್ಯರು ಹಾಗೂ ಕಾರ್ಯಕರ್ತರು ಇದ್ದರು.
Social Plugin