ವರದಿ : ಮಲ್ಲಿಕಾರ್ಜುನ ಘೋಸರವಾಡ.

ಬೆಳಗಾವಿ:ಜಿಲ್ಲಾ ಮೂಡಲಗಿ ತಾಲೂಕಿನ ರಂಗಾಪೂರ ಗ್ರಾಮದಲ್ಲಿ ದಿನಾಂಕ :1/08/2021ರಂದು ಸಾಯಂಕಾಲ 8ಗಂಟೆಗೆ ಮಹಾದೇವ ಬಾಗೋಜಿ ತೋಟದಲ್ಲಿ ಶ್ರೀ ಮಾಧವಾನಂದ ಪ್ರಭುಜಿಯವರ ಸ್ಮರಣಾರ್ಥ 
ಆಧ್ಯಾತ್ಮ ಸಪ್ತಾಹ ನಡೆಸಲಾಯಿತು.
ಇಂಚಗೇರಿ ಸಂಪ್ರದಾಯದ ನಿಯಮದ ಪ್ರಕಾರ ಭಜನೆ,ಕಾಕಡಾರತಿ, ಪುರಾಣ, ಪ್ರವಚನಗಳು ನಡೆಸಲಾಯಿತು. ಈ ಸಂದರ್ಭದಲ್ಲಿ ರಾಮಣ್ಣ ಮಹಾರಾಜರು ನಾಗನೂರ, ಕೆಂಚಪ್ಪ ಮಹಾರಾಜರು ಮಮದಾಪುರ, ಮಹಾದೇವ ರಂಗಾಪೂರ ಮಹಾರಾಜರು,ವಸಂತ ನಾಗನೂರ ಮಹಾರಾಜರು,ಮುತ್ತಪ್ಪ ಮುನ್ನಾಳ್ ಮಹಾರಾಜರು,ರಮೇಶ್ ಮಹಾರಾಜರು ಹಾಗೂ ಶ್ರೀ ಮಾಧವಾನಂದ ಸದ್ಭಕ್ತ ಮಂಡಳಿ ರಂಗಾಪೂರ ಮತ್ತು ಸುತಮುತಲ್ಲಿ ಭಕ್ತದಿಗಳು ಸೇರಿದರು.
ರಾಮಣ್ಣ ನಾಗನೂರ ಮಹಾರಾಜರು ಮಾತನಾಡಿ ಶ್ರಾವಣಮಾಸದಲ್ಲಿ ನಾಗನೂರಿನ ಮಾಧವಾನಂದ ಆಶ್ರಮದಲ್ಲಿ ದಿನನಿತ್ಯ ಪೂಜೆ-ಪುನಸ್ಕಾರ ಭಜನೆಗಳು ಮತ್ತು ಅನ್ನದಾಸೋಹ ಇರುತ್ತದೆ. ಸರ್ವರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುನೀತರಾದ ಬೇಕೆಂದು ವಿನಂತಿಸಿದರು.

------------
ಮೂಡಲಗಿ ತಾಲೂಕಿನ ರಂಗಾಪುರ ಗ್ರಾಮದಲ್ಲಿರುವ ಶ್ರೀ ಸ. ಸ. ಮಾಧವಾನಂದ ಪ್ರಭುಜಿಯವರ ಸ್ಮರಣಾರ್ಥವಾಗಿ ಇಂಚಿಗೇರಿ ಸಂಪ್ರದಾಯ ದ ಆಧ್ಯಾತ್ಮ ಸಪ್ತಾಹ ಪ್ರತಿ ಸಲದಂತೆ ಈ ಸಲವೂ ಶುಕ್ರವಾರ ದಿನಾಂಕ 06/08/2021 ರಂದು ಸಾಯಂಕಾಲ ಇಂಚಗೇರಿ ಸಂಪ್ರದಾಯದ ಸದ್ಗುರುಗಳೂ ಹಾಗೂ ಶ್ರೀ ಕ್ಷೇತ್ರ ಇಂಚಗೇರಿ ಮಠದ ಟ್ರಸ್ಟ್ ಕಮೀಟಿ ಚೇರಮನರು ಆದ ಶ್ರೀ ಸ.ಸ. ರೇವಣಸಿದ್ದೇಶ್ವರ ಮಹಾರಾಜರು  ಇವರ ಅಮೃತ ಹಸ್ತದಿಂದ ದಾಸಬೋಧ ಹಾಗೂ ವೀಣಾ ಪೂಜೆಯೊಂದಿಗೆ ಪ್ರಾರಂಭವಾಗಿ ಶನಿವಾರ ದಿನಾಂಕ:07/08/2021 ರಂದು ಮಧ್ಯಾಹ್ನ ವಿಮಲ ಬ್ರಹ್ಮ ನಿರೂಪಣೆ ಹಾಗೂ ಪುಷ್ಪವೃಷ್ಟಿಯೊಂದಿಗೆ ಮಂಗಲಗೊಳ್ಳುತ್ತದೆ.
 ಮೇಲ್ಕಂಡ ಸಪ್ತಾಹ ಎರಡೂ ದಿನಗಳಲ್ಲಿ ಇಂಚಿಗೇರಿ ಸಂಪ್ರದಾಯದ ನಿಯಮದ ಪ್ರಕಾರ ನಿತ್ಯನೇಮ, ಭಜನೆ ಕಾಕಡಾರತಿ,ಪುರಾಣ, ಪ್ರವಚನ ಹಾಗೂ ಜಾಗರಣೆಯ ನಿಮಿತ್ಯ  ಮನರಂಜನೆಯ ಕಾರ್ಯಕ್ರಮಗಳು ಜರುಗುತ್ತವೆ. " ಸರ್ವರು ಸತ್ತಾ ದಲ್ಲಿ ಪಾಲ್ಗೊಂಡು ಪುನೀತರಾದ ಬೇಕಾಗಿ ವಿನಂತಿ " ಶ್ರೀ ಮಾಧವಾನಂದ ಸದ್ಭಕ್ತ ಮಂಡಳಿ ರಂಗಪೂರ್ ತಾಲೂಕು: ಮೂಡಲಗಿ.