ತೇರದಾಳ ಪಟ್ಟಣದ ದೇವರಾಜ ನಗರದ ನಾಡಗೌಡರ ಗುಡ್ಡದಲ್ಲಿನ ಜನರಿಗೆ ಮಹೇಶ ಕುಂಚಗನೂರ ಉಚಿತವಾಗಿ ಟ್ರಾಕ್ಟರ್ ಮೂಲಕ ನೀರು ಹಾಕುತ್ತಿರುವುದು.
ಉಚಿತವಾಗಿ ನೀರು ಹಾಕುತ್ತಿರುವ ಮಹೇಶ ಕುಂಚಗನೂರ
ತೇರದಾಳ : ಪಟ್ಟಣದಲ್ಲಿ ಪುರಸಭೆ ವತಿಯಿಂದ ನೀರು ಸರಬರಾಜು ಇಲ್ಲದೆ ಸುಮಾರು 10ರಿಂದ 12ದಿನಗಳಾದವು. ನೀರಿಗಾಗಿ ಪಟ್ಟಣದ ಜನತೆ ಕಷ್ಟ ಪಡುತ್ತಿರುವುದನ್ನು ನೋಡಿ ಸಾಮಾಜಿಕ ಕಾರ್ಯಕರ್ತ ಮಹೇಶ ಕುಂಚಗನೂರ ತನ್ನ ಟ್ರಾಕ್ಟರ್ ಮೂಲಕ ಉಚಿತವಾಗಿ ನೀರು ಹಾಕುತ್ತಿದ್ದಾರೆ.
ಪಟ್ಟಣಕ್ಕೆ ಕೃಷ್ಣಾ ನದಿಯಿಂದ ನೀರು ಸರಬರಾಜು ಆಗುತ್ತಿತ್ತು. ಆದರೆ ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿಯು ತುಂಬಿ ಜಾಕ್‍ವೆಲ್ ಸುತ್ತಲೂ ನೀರು ಬಂದಿರುವುದರಿಂದ ಪಟ್ಟಣಕ್ಕೆ ನೀರು ಸರಬರಾಜು ನಿಂತು ಹೋಗಿದೆ. ಇಂತಹ ಸಂದರ್ಭದಲ್ಲಿ ಜನರು ಒಂದು ಸಾವಿರ ಅಥವಾ 12ನೂರು ರೂ.ಗಳನ್ನು ಕೊಟ್ಟು ಟ್ಯಾಂಕರ್‍ಗಳ ಮೂಲಕ ನೀರನ್ನು ಹಾಕಿಕೊಳ್ಳತ್ತಾರೆ. ಆದರೆ ಬಡವರು, ಕೂಲಿ ಕಾರ್ಮಿಕರು ದೂರದಿಂದ ನೀರನ್ನು ಹೊತ್ತು ತರಬೇಕು. ಅವರು ಕೂಲಿ ಮಾಡಿ ಸಾಯಂಕಾಲ ಮನೆಗೆ ಬಂದರೆ, ರಾತ್ರಿ ನೀರನ್ನು ತಂದು ಅಡುಗೆ ಮಾಡಬೇಕಾಗಿತ್ತು. ಅದನ್ನರಿತ ಸಾಮಾಜಿಕ ಕಾರ್ಯಕರ್ತ ಮಹೇಶ ಕುಂಚಗನೂರ ತನ್ನ ಟ್ರಾಕ್ಟರ್ ಮೂಲಕ ಉಚಿತವಾಗಿ ನೀರು ಹಾಕಿ ಜನರಿಂದ ಮೆಚ್ಚುಗೆಯನ್ನು ಪಡೆದಿದ್ದಾರೆ. ಎರಡು ದಿನಗಳಿಗೊಮ್ಮೆ ಒಂದು ಟ್ಯಾಂಕರ್ ನೀರು ಹಾಕುತ್ತಿದ್ದಾರೆ. ಪಟ್ಟಣದಲ್ಲಿ ಸುಮಾರು 4ವಾರ್ಡಗಳಿಗೆ ನೀರನ್ನು ಹಾಕುತ್ತಿದ್ದಾರೆ. ಪುರಸಭೆ ಅಧಿಕಾರಿಗಳು ಮಾಡಬೇಕಾದ ಕಾರ್ಯವನ್ನು ಕುಂಚಗನೂರ ಮಾಡುತ್ತಿದ್ದಾರೆ.
ಇವರ ಈ ಕಾರ್ಯಕ್ಕೆ ನಿವಾಸಿಗಳಾದ ಹಸನ್ ಖಲೀಪಾ, ಇಸಾಕ ತಹಶೀಲ್ದಾರ, ಯಾಶೀನ ಗಾಡಿಬೋಲೆ, ಹಜರತ ತಾಂಬೋಳಿ, ನಜೀರ ಅತ್ತಾರ, ರಿಯಾಜ ಅತ್ತಾರ, ಆಯಾಬೇರಾ ಅತ್ತಾರ, ಮಹಾಬೂಬಿ ಸಪ್ತಸಾಗರ, ಮೈಹೆರಾಜ ಲಾಡಖಾನ ರಜಾಬಿ ಅತ್ತಾರ, ಜಾಹೀದಾ ಅತ್ತಾರ ಸೇರಿದಂತೆ ಮಹೇಶ ಕುಂಚಗನೂರ ಇವರನ್ನು ಅಭಿನಂದಿಸಿದ್ದಾರೆ.
Social Plugin