ತೇರದಾಳ ಸಮೀಪದ ಹಳಿಂಗಳಿ ಗ್ರಾಮದಲ್ಲಿ 24 ಘಂಟೆ ನೀರು ಪೂರೈಸುವ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಕಾರ್ಯಾತ್ಮಕ ನಳ ಜೋಡಣೆ ಕಾಮಗಾರಿಗೆ ಶಾಸಕ ಸಿದ್ದು ಸವದಿ ಚಾಲನೆ ನೀಡಿದರು.

ಜೀವ ಜಲದ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಸಿದ್ದು ಸವದಿ

ತೇರದಾಳ : ಸಮೀಪದ ಹಳಿಂಗಳಿ ಗ್ರಾಮದಲ್ಲಿ ಇಂದು ತೇರದಾಳ ಶಾಸಕ ಹಾಗೂ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕಷರಾದ ಶ್ರೀ ಸಿದ್ದು ಸವದಿಯವರು ರಾಷ್ಟ್ರೀಯ ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ನಳ ಜೋಡಣೆ ಕಾಮಗಾರಿಗೆ ಚಾಲನೆ ನೀಡಿದರು.

   ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಜಮಖಂಡಿ, ರಬಕವಿ ಬನಹಟ್ಟಿ ತಾಲೂಕಿನಹಳಿಂಗಳಿ ಗ್ರಾಮದ 1709 ಮನೆಗಳಿಗೆ ದಿನದ 24 ಘಂಟೆ ನೀರು ಪೂರೈಸುವ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಕಾರ್ಯಾತ್ಮಕ ನಳ ಜೋಡಣೆ ಕಾಮಗಾರಿಯ ಉದ್ಘಾಟಣಾ ಸಮಾರಂಭವನ್ನು ಗ್ರಾಮದ ಶ್ರೀ ರಾಮಲಿಂಗೇಶ್ವರ ಆವರಣದಲ್ಲಿ ಆಯೋಜಿಸಲಾಗಿತ್ತು.

   ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಸಿದ್ದು ಸವದಿ ಕೇಂದ್ರ ಪುರಸ್ಕøತ ರಾಷ್ಟ್ರೀಯ ಜಲ ಜೀವನ್ ಮಿಷನ್ ಅಡಿಯಲ್ಲಿ ದೇಶದ ಪ್ರತಿ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರನ್ನು ದಿನದ 24 ಘಂಟೆ ಪೂರೈಸುವ ಮಹತ್ವಾಕಾಂಕ್ಷಿ ಯೋಜನೆಯಡಿಯಲ್ಲಿ ಇಂದು ಹಳಿಂಗಳಿ ಗ್ರಾಮದ 1709 ಮನೆಗಳಿಗೆ ನಿರಂತರ ಕುಡಿಯುವ ನೀರನ್ನು ಪೂರೈಸಲು ಅಂದಾಜು  216.31 ಲಕ್ಷಗಳ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇಸಿದ್ದು, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಗ್ರಾಮದ ಪ್ರತಿ ಮನೆಗೆ ನಲ್ಲಿ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗುವುದೆಂದು ಭರವಸೆ ನೀಡಿದ ಅವರು ನೀರು ನಮ್ಮ ಬದುಕಿನ ಜೀವ ಜಲ ಪೋಲಾಗದಂತೆ ಅಗತ್ಯಕ್ಕೆ ಅನುಗುಣವಾಗಿ ನೀರನ್ನು ಬಳಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ನೀರನ್ನು ಮಿತವಾಗಿ ಬಳಸಿ ಗ್ರಾಮ ನೈರ್ಮಲ್ಯವನ್ನು ಕಾಪಾಡುವದರೊಂದಿಗೆ ಸ್ವಚ್ಚ ಭಾರತ ಕಲ್ಪಣೆಯನ್ನು ಸಕಾರಗೊಳಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದ್ದು ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿ ಜೀವ ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆಯಂದು ತಿಳಿಸಿದರು.

  ಈ ಸಂಧರ್ಭದಲ್ಲಿ ಮಾತನಾಡಿದ ರಬಕವಿ ಬನಹಟ್ಟಿ ತಾಲೂಕಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂಜಯ ಹಿಪ್ಪರಗಿ ನಮ್ಮ ದೇಶದ 75 ನೇ ಸ್ವಾತಂತ್ರ್ಯೋತ್ಸವ ಸಂಭ್ರಮದ ಸವಿನೆನಪಿಗಾಗಿ ಕೇಂದ್ರ ಸರಕಾರ ಪ್ರತಿ ಗ್ರಾಮ ಪಂಚಾಯತಿಗೆ 25 ಲಕ್ಷಗಳ ವಿಶೇಷ ಅನುದಾನವನ್ನು ನೀಡಿದ್ದು ಸದ್ವಿನಿಯೋಗಗೊಳಿಸಿಕೊಳ್ಳಲು ಸೂಚಿಸಿದರು.

   ಸಮಾರಂಭದಲ್ಲಿ ಪಾಲ್ಗೊಂಡ ಗ್ರಾಮಸ್ಥರು ನೆರೆ ಪರಿಹಾರ ವಿತರಣೆಯಲ್ಲಿ ತಾರತಮ್ಯವಾಗಿದ್ದು ಕೂಡಲೇ ಸರಿಪಡಿಸಬೇಕೆಂದು ಮನವಿ ಮಾಡಿಕೊಂಡರು, ಗ್ರಾಮಸ್ಥರ ಮನವಿಯನ್ನು ಆಲಿಸಿದ ಶಾಸಕರು ನೆರೆ ಹಾವಳಿಗೆ ಒಳಗಾಗಿರುವ ಮನೆಗಳಲ್ಲಿ ಇನ್ನೂ ಯಾವುದಾರು ಮನೆಗಳು ಸಮೀಕ್ಷೆಯಿಂದ ಹೊರಗುಳಿದಿದ್ದರೆ ಸಂಬಂಧಿಸಿದ ಪ್ರಾಧಿಕಾರದೊಂದಿಗೆ ಚರ್ಚಿಸಿ ಕ್ರಮವಹಿಸುವುದಾಗಿ ಭರವಸೆ ನೀಡಿದರು.

   ಸಮಾರಂಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ಶೋಭಾ ಶಾಂತಿನಾಥ ಖೇಬೋಜಿ, ಉಪಾಧ್ಯಕ್ಷ ಪ್ರದೀಪ ನಂದೆಪ್ಪನವರ ಸೇರಿದಂತೆ ಸರ್ವ ಸದಸ್ಯರು ಹಾಗೂ ಮಾಜಿ ಜಿ.ಪಂ ಸದಸ್ಯ ದೇವಲ ದೇಸಾಯಿ, ಮಾಜಿ ತಾಪಂ ಸದಸ್ಯರಾದ ಬಿ.ಬಿ ವೆಂಕಟಾಪೂರ, ಗಂಗಪ್ಪ ಗನವಾಡಿ, ಮಾಜಿ ಗ್ರಾ ಪಂ ಅಧ್ಯಕ್ಷರಾದ ಪರಪ್ಪ ಹಿಪ್ಪರಗಿ, ರಾಜು ನಂದೆಪ್ಪನವರ, ಕಿರಣ ದೇಸಾಯಿ, ಅಭಯಕುಮಾರ ದೇಸಾಯಿ, ಮಾಧವರಾಯ ಪಾಟೀಲ, ಧನಪಾಲ ಯಲ್ಲಟ್ಟಿ, ಜಿನ್ನಪ್ಪ ದಡ್ಡಿ, ಲಕ್ಕಪ್ಪ ಪಾಟೀಲ, ಮಹಾವೀರ ಪಾಟೀಲ, ಭರಮುಗೌಡ ಪಾಟೀಲ, ಕಲ್ಯಾಣಕುಮಾರ ಯಲ್ಲಟ್ಟಿ, ಆಧಿನಾಥ ಕುಳ್ಳಿ, ಅಪ್ಪು ಭೂಪಾಲ ಪಾಟೀಲ, ಈರಣ್ಣ ತೇಲಿ, ನಂದೆಪ್ಪ ವೆಂಕಟಾಪೂರ,ಬಾಳಾಸಾಬ ದೇಸಾಯಿ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

     ಸಮಾರಂಭದಲ್ಲಿ ಶಾಸಕರಿಗೆ ಹಾಗೂ ಗ್ರಾಮ ಪಂಚಾಯತ ಚುನಾಯಿತ ಸದಸ್ಯರಿಗೆ ಸತ್ಕರಿಸಲಾಯಿತು.

   ಜಮಖಂಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಅಭಿಯಂತರರಾದ ಸುರೇಶ ಎಸ್,ಪಂಚಾಳ, ಗ್ರಾಂ ಪಂ ಅಭಿವೃದ್ಧಿ ಅಧಿಕಾರಿ ತೇಜಶ್ವಿನಿ ಮರೆಗುದ್ದಿ, ಸಿಬ್ಬಂದಿಗಳಾದ ಜಿ.ಸಿ ಮುದಕನ್ನವರ, ಬಾಹುಬಲಿ ಔಜಕ್ಕನವರ, ಮಹಮ್ಮದ ಲಾಡಖಾನ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.