ತೇರದಾಳ ಸಮೀಪದ ಹಳಿಂಗಳಿ ಗ್ರಾಮದ ಯುವ ಮುಖಂಡರಾದ ರಾಜು ನೇಮಿನಾಥ ನಂದೆಪ್ಪನವರ, ಹಾಗೂ ಗ್ರಾಮ ಪಂಚಾಯತ ಉಪಾಧ್ಯಕ್ಷ ಪ್ರದೀಪ ನಂದೆಪ್ಪನವರ ಅವಳಿ ಸಹೋದರರಿಗೆ ಹನಗಂಡಿ ಗ್ರಾಮದ ಅಭಿಮಾನಿ ಬಳಗದವರು ಮೈಸೂರು ಪೇಟಾ ತೊಡಿಸಿ ಸತ್ಕರಿಸಿದರು.
ಅವಳಿ ಸಹೋದರರಿಗೆ ಪೇಟಾ ತೊಡಿಸಿ ಸತ್ಕರಿಸಿದ ಅಭಿಮಾನಿಗಳು
ತೇರದಾಳ : ಭದ್ರಗಿರಿ ಬೆಟ್ಟಕ್ಕಾಗಿ ದಿಟ್ಟ ಹೋರಾಟವನ್ನು ಮಾಡಿ ನಮ್ಮೂರಿನ ಜಾಗ ನಮಗೆ ಬೇಕೆಂದು ಕಹಳೆ ಮೊಳಗಿಸಿ, ಜನರಲ್ಲಿ ಹೋರಾಟದ ಕಿಚ್ಚನ್ನು ಮೂಡಿಸಿ, ಗ್ರಾಮದ ಹಿತರಕ್ಷಣೆಗಾಗಿ ಜನಧ್ವನಿಯಾಗಿ ಕಳೆದ 13 ದಿನಗಳಿಂದ ಸೆರೆವಾಸ ಅನುಭವಿಸಿ ಮಂಗಳವಾರ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ ಗ್ರಾಮದ ಯುವ ಮುಖಂಡರಾದ ರಾಜು ನೇಮಿನಾಥ ನಂದೆಪ್ಪನವರ, ಹಾಗೂ ಗ್ರಾಮ ಪಂಚಾಯತ ಉಪಾಧ್ಯಕ್ಷ ಪ್ರದೀಪ ನಂದೆಪ್ಪನವರ ಅವಳಿ ಸಹೋದರರಿಗೆ ಹನಗಂಡಿ ಗ್ರಾಮದ ಅಭಿಮಾನಿ ಬಳಗದವರು ಮೈಸೂರು ಪೇಟಾ ತೊಡಿಸಿ ಸತ್ಕರಿಸಿದ ಪ್ರಸಂಗ ಇಂದು ಹಳಿಂಗಳಿ ಗ್ರಾಮದಲ್ಲಿ ಜರುಗಿತು.
ಹನಗಂಡಿ ಗ್ರಾಮ ಪಂಚಾಯತ ಸದಸ್ಯರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಅಭಿಮಾನಿಗಳು ಗ್ರಾಮದ ಚಾವಡಿ ಕಟ್ಟೆಯ ಮೇಲೆ ರಾಜು ನಂದೆಪ್ಪನವರ ಹಾಗೂ ಪ್ರದೀಪ ನಂದೆಪ್ಪನವರ ಅವಳಿ ಸಹೋದರಿಗೆ ಶಾಲು ಹೊದಿಸಿ ಮೈಸೂರು ಪೇಟಾ ತೊಡಿಸಿ ರಾಜು ಹುಲಿಗೆ ಜಯವಾಗಲಿಯಂದು ಜೈಕಾರಗಳೊಂದಿಗೆ ಸತ್ಕರಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಪ್ರತಿನಿತ್ಯ ನೆರೆಯ ಗ್ರಾಮಗಳ ನೂರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕರ ಬಿಡುಗಡೆಯ ಸಂಭ್ರಮವನ್ನು ಹಂಚಿಕೊಳ್ಳಲು ಆಗಮಿಸುತ್ತಿದ್ದಾರೆ. ಈ ಸಂಧರ್ಭದಲ್ಲಿ ಅಭಿಮಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದ ಸಹೋದರರು ಅಭಿಮಾನಿಗಳ ಪ್ರೀತಿ ವಾತ್ಸಲ್ಯಕ್ಕೆ ಶಿರಬಾಗಿ ನಮಸ್ಕರಿಸುವುದಾಗಿ ತಿಳಿಸಿದ ಅವರು ಅಭಿಮಾನಿಗಳ ಹಿತರಕ್ಷಣೆಗಾಗಿ ಸದಾ ಭದ್ಧರಾಗಿರುವುದಾಗಿ ತಿಳಿಸಿದರು.
ಭೇಟಿಗೆ ಆಗಮಿಸುತ್ತಿರುವ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕರೊಂದಿಗೆ ಸ್ಮರಣಿಕೆಯಾಗಿ ಭಾವಚಿತ್ರಗಳನ್ನು ತೆಗೆದುಕೊಳ್ಳುತ್ತಿರುವುದು ವಿಶೇಷವಾಗಿದೆ.
Social Plugin