*ಅಪ್ರಾಪ್ತ ಯುವತಿ ಕೊಲೆ ಖಂಡಿಸಿ ಕರವೇ ಬೃಹತ್ ಹೋರಾಟ*
ರಾಜ್ಯದಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಕೊಲೆ ಅತ್ಯಾಚಾರ ಕಿರುಕುಳ ಹೆಚ್ಚುತ್ತಿವೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಈಚೆಗೆ ನಡೆದ ಲಕ್ಷ್ಮಿ ರುದ್ರಣ್ಣವರ ೧೬ ವರ್ಷದ ಯುವತಿಗೆ ಪ್ರೀತಿ ಮಾಡಲು ನಿರಾಕರಿಸಿದಕ್ಕೆ ಮಾರಕ ಅಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಅಮೀರ ಲಾಲಸಾಬ ಜಮಾದರ, ಆರೋಪಿಗೆ ಕಾನೂನಿನ ಕಠಿಣ ಕ್ರಮ ಪೋಸ್ಕೋ ಕಾಯ್ದೆ, ಕಿಡ್ನಾಪ್ ಕೇಸ್, ಕೊಲೆ ಮಾಡಿದ ಪ್ರಕರಣ ದಾಖಲಿಸಿ ಈತನಿಗೆ ಕಠಿಣವಾದ ಶಿಕ್ಷೆ ನೀಡಬೇಕೆಂದು ಕರವೇ ಸಂಘಟನೆಯಿಂದ ಬನಹಟ್ಟಿ ಗಾಂದಿ ಸರ್ಕಲದಿಂದ ಮುಖ್ಯ ರಸ್ತೆಯ ಮುಖಾಂತರ ಪಾದಯಾತ್ರೆ ಮೂಲಕ ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಸಂಜಯ ಇಂಗಳೆ ರವರಿಗೆ ಮನವಿ ನೀಡಲಾಯಿತು.
ಬಡ ಅಪ್ರಾಪ್ತ ಬಾಲಕಿಯರು ಅತ್ಯಾಚಾರ ಕಿರುಕುಳ ಸಾಕಷ್ಟು ಪ್ರಕರಣಗಳನ್ನು ತಡೆಯಬೇಕೆಂದು ಗೃಹ ಮಂತ್ರಿಗಳಿಗೆ ತಹಶೀಲ್ದಾರ್ ಮೂಲಕ ರಬಕವಿ-ಬನಹಟ್ಟಿ ಕರವೇ ಮನವಿ ಸಲ್ಲಿಸಲಾಯಿತು.
ಕರವೇ ತಾಲೂಕಾಧ್ಯಕ್ಷ ಮಾಳು ದುರ್ಗನ್ನವರ, ಅನುರಾಧಾ ಶಿರಗುಪ್ಪಿ, ರಾಜು ಫನಿಬಂದ, ಶಿರಾಜ ಪೆಂಡಾರಿ, ಮಹ್ಮದಹುಸೇನ ಲೆಂಗ್ರೆ, ದಾದಾಪೀರ ಸಿವಳ್ಳಿ, ಬಸೀರ ಜಮಾದರ ಸೇರಿದಂತೆ ಅನೇಕರಿದ್ದರು.
ವರದಿ
ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು
ಬಾಗಲಕೋಟೆ
ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು
ಬಾಗಲಕೋಟೆ

Social Plugin