ಆಗಸ್ಟ್ ಮೊದಲವಾರ ಥಿಯೇಟರ್‌ಗೆ ಬರುತ್ತಿದ್ದಾನೆ ಕಲಿವೀರ.

ರಾಣೇಬೆನ್ನೂರಿನ ಪ್ರತಿಭೆ ಏಕಲವ್ಯ ಮೊದಲಬಾರಿ ನಾಯಕನಾಗಿ ಅಭಿನಯಿಸಿರುವ ‘ಕಲೀವೀರ’ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಇದೇ ಆಗಸ್ಟ್ ೬ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಕೊರೋನಾ ಎರಡನೇ ಅಲೆಯ ಲಾಕ್‌ಡೌನ್ ನಂತರ ರಿಲೀಸ್ ಆಗಲಿರುವ ಮೊದಲ ಸಿನಿಮಾ ಈ ಕಲಿವೀರ. ಈ ಚಿತ್ರ ಉತ್ತರ ಕರ್ನಾಟಕ ಮಂದಿಯಿಂದಲೇ ಸಿದ್ಧವಾಗಿದ್ದು, ಉತ್ತರ ಕರ್ನಾಟಕದ ಸ್ಪೆಶಲ್ ಸಿನಿಮಾ ಎನ್ನಬಹುದು. ಕಲಿವೀರ ಸಿನಿಮಾ ಬಗ್ಗೆ ಹೇಳುವುದಾದರೆ, ನಾಯಕ ಕಲಿ ಆದಿವಾಸಿ ಜನಾಂಗದವ. ತನ್ನ ಸಮುದಾಯಕ್ಕೆ ಆಗುವ ಅನ್ಯಾಯದ ವಿರುದ್ಧ ಸಿಡಿದೆದ್ದು, ದ್ವೇಷ ತೀರಿಸಿಕೊಳ್ಳುವ ರೋಚಕ ಕಥಾ ಹಂದರ ಹೊಂದಿದೆ. ಭಾರತದ ಮೇಲೆ ಶತಮಾನಗಳ ಕಾಲ ನಿರಂತರವಾಗಿ ದೌರ್ಜನ್ಯ, ದಾಳಿ ಮಾಡಿದ ರಾಷ್ಟ್ರೀಯ , ಅಂತರಾಷ್ಟ್ರೀಯ ಕುಖ್ಯಾತಿಯ ಈ ಸಮಾಜದ ದುಷ್ಟ ಶಕ್ತಿಗಳನ್ನು ಮೆಟ್ಟಿನಿಂತು ಆದಿವಾಸಿ ಕಲಿ ವೀರಾವೇಶದಿಂದ ಹೋರಾಡಿ ಅವರನ್ನು ಹೇಗೆ ಮಟ್ಟ ಹಾಕಿ ಕಲಿವೀರನಾಗುತ್ತಾನೆ ಎಂಬುದು ಕಲಿವೀರ ಚಿತ್ರದಲ್ಲಿ ಕಾಣಬಹುದು. 
ಪಕ್ಕಾ ಕಮರ್ಷಿಯಲ್ ಆ್ಯಕ್ಷನ್ ಸಿನಿಮಾ ಈ ಕಲಿವೀರ. ಚಿತ್ರದ ಮೆಕ್ಕಿಂಗ್ ವಿಚಾರದಲ್ಲಿ ಕಾಂಪ್ರಮೈಸ್ ಆಗದ ತಂಡ ಚಿತ್ರವನ್ನು ಕನ್ನಡ, ಹಿಂದಿ, ಮಲಯಾಳಂ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಬಿಡುಗಡೆ ಮಾಡುತ್ತಿದೆ. ಅಂದAಗೆ ಈ ಚಿತ್ರಕ್ಕೆ ಅವಿರಾಮ್ ಆ್ಯಕ್ಷನ್-ಕಟ್ ಹೇಳಿದ್ದು, ಇವರು ಈ ಮೊದಲು ‘ಕನ್ನಡ ದೇಶದೊಳ್’ ಚಿತ್ರ ನಿರ್ದೇಶನ ಮಾಡಿದ್ದರು. ಕಲಿವೀರ ಅವರ ಎರಡನೇ ಪ್ರಯತ್ನ. ರಾಣೇಬೆನ್ನೂರಿನಿಂದ ಕನಸುಗಳನ್ನು ಹೊತ್ತು ಗಾಂಧಿನಗರಕ್ಕೆ ಬಂದಿರುವ ಏಕಲವ್ಯ ಒಬ್ಬ ಅನಾಥ. ಸಿನಿಮಾ ಮಾಡುವ ಇವರ ಕನಸು ಕಲಿವೀರನಿಂದ ಇಡೇರಿದೆ. ಏಕಲವ್ಯ ರಾಣೇಬೆನ್ನೂರನಲ್ಲಿ ಆಟೋ ಓಡಿಸುತ್ತಾ ಯೋಗಾದಲ್ಲಿ ಗೊಲ್ಡ್ ವಿನ್ನರ್ ಆಗಿದ್ದಾರೆ. ಜೊತೆಗೆ ನೀನಾಸಂ ಹಾಗೂ ರಂಗಾಯಣದಲ್ಲಿ ನಟನೆ ಕಲಿತಿದ್ದಾರೆ. ಅಲ್ಲದೆ ಕರಾಟೆ, ಕತ್ತಿ ವರಸೆ, ಕಳರಿ ವಿದ್ಯೆಗಳನ್ನು ತಿಳಿದಿದ್ದು, ಏಕಲವ್ಯನ ಈ ಎಲ್ಲಾ ವಿದ್ದೆಗಳನ್ನು ನಿರ್ದೇಶಕರು ಸಿನಿಮಾದಲ್ಲಿ ಬಳಸಿಕೊಂಡಿದ್ದಾರೆ. 
ಅಂದಹಾಗೆ ಚಿತ್ರದಲ್ಲಿ ಏಕಲವ್ಯಗೆ ನಾಯಕಿಯರಾಗಿ ಪಾವನ ಗೌಡ ಹಾಗೂ ಚಿರಶ್ರೀ ಬಣ್ಣ ಹಚ್ಚಿದ್ದಾರೆ. ಜ್ಯೋತಿ ಆರ್ಟ್ಸ್ ನಿರ್ಮಾಣವಿರುವ ಈ ಚಿತ್ರದ ತಾರಾಗಣದಲ್ಲಿ ಟಿ.ಎಸ್. ನಾಗಾಭರಣ, ನೀನಾಸಂ ಅಶ್ವತ್, ರಾಕ್ಲೆöÊನ್ ಸುಧಾಕರ್, ರಮೇಶ್ ಪಂಡಿತ್ ಮುಂತಾದವರಿದ್ದಾರೆ. ಚಿತ್ರದ ಹಾಡುಗಳಿಗೆ ವಿ. ಮನೋಹರ್ ಸಂಗೀತ ಸಂಯೋಜಿಸಿದ್ದು, ರಾಘವೇಂದ್ರ ಹಿನ್ನೆಲೆ ಸಂಗೀತ ಮಾಡಿದ್ದಾರೆ. ಉಳಿದಂತೆ ಹಾಲೇಶ್ ಎಸ್. ಛಾಯಾಗ್ರಹಣ, ಎ.ಆರ್. ಕೃಷ್ಣ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸವಿದೆ.

ಕ್ರಪೆ ಚಿತ್ರಪಟಗಳು:- ಕೆ.ಎನ್.ನಾಗೇಶ್ ಕುಮಾರ್