*ಪುನರ್ವಸತಿಯೂ ಇಲ್ಲ, ಪರಿಹಾರವೂ ಇಲ್ಲಸರ್ಕಾರದ ವಿರುದ್ಧ ಸಂತ್ರಸ್ಥರು ಗರಂ*
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಅಸ್ಕಿ ಗ್ರಾಮವು ಕೃಷ್ಣಾ ನದಿಯ ಆಲಮಟ್ಟಿ ಜಲಾಶಯದ ಹಿನ್ನೀರಿಗೆ ಬಾದಿತ ಗ್ರಾಮವೆಂದು ೨೦೦೯ ರಲ್ಲಿಯೇ ಘೋಷಣೆ ಮಾಡಿದ್ದಾಗ್ಯೂ ಇಲ್ಲಿಯವರೆಗೂ ಜಮೀನಿನ ಮನೆಗಳಿಗ ಪರಿಹಾರ ನೀಡಿಲ್ಲ ಹಾಗು ಗ್ರಾಮವನ್ನು ಸಂಪೂರ್ಣವಾಗಿ ಪುನರ್ವಸತಿ ಕಲ್ಪಿಸದ ಕಾರಣ ಇದೇ ಗ್ರಾಮದಲ್ಲಿ ಮುರಿದ ಮನೆಗಳನ್ನು ದುರಸ್ಥಿ ಮಾಡಿಕೊಳ್ಳುತ್ತ ಬದುಕು ಸಾಗಿಸುತ್ತಿದ್ದಾರೆ.
೨೦೧೯ ರಲ್ಲಿ ಪ್ರವಾಹಕ್ಕೆ ತುತ್ತಾದ ಸಂದರ್ಭದಲ್ಲಿ ಪ್ರತಿ ಮನೆಗೆ ೧೦ ಸಾವಿರ ರೂ.ಗಳ ಪರಿಹಾರ ಒದಗಿಸಿತ್ತು. ಇದೀಗ ಮತ್ತೇ ಪ್ರವಾಹಕ್ಕೆ ಸಿಲುಕಿ ನರಳಿದ್ದ ನೂರಾರು ಕುಟುಂಬಗಳಿಗೆ ತಾತ್ಕಾಲಿಕ ಪರಿಹಾರ ನೀಡಲಾಗುವದಿಲ್ಲವೆಂದು ನೋಡಲ್ ಅಧಿಕಾರಿಯವರ ನೋಟಿಸ್‌ನಿಂದ ಗರಂ ಆದ ಸಂತ್ರಸ್ಥ ಕುಟುಂಬಗಳು ಸರ್ಕಾರದ ವಿರುದ್ಧ ಹರಿಹಾಯ್ದರು.
ತಹಶೀಲ್ದಾರ ಸಂಜಯ ಇಂಗಳೆಯವರಿಗೆ ಮನವಿ ಪತ್ರ ಅರ್ಪಿಸಿದ ಕಾಂಗ್ರೆಸ್ ಕಿಸಾನ್ ರಾಜ್ಯ ಸಂಚಾಲಕ ಡಾ. ಪದ್ಮಜೀತ ನಾಡಗೌಡ ಪಾಟೀಲ ಮಾತನಾಡಿ, ಬಂಗಾರದಂತ ಬೆಳೆ ಬೆಳೆದಿರುವದೆಲ್ಲ ನೀರು ಪಾಲಾಗಿದೆ. ಸರ್ಕಾರದ ದಿವ್ಯ ನಿರ್ಲಕ್ಷö್ಯದಿಂದ ಅಸ್ಕಿ ಗ್ರಾಮದ ನೂರಾರು ರೈತರು ಪ್ರತಿ ವರ್ಷ ಹಾನಿ ಅನುಭವಿಸುವಲ್ಲಿ ಕಾರಣವಾಗಿದ್ದು, ಶಾಶ್ವತ ಸ್ಥಳಾಂತರ ಹಾಗು ಪರಿಹಾರ ವಿತರಣೆಯಲ್ಲಿ ಮೀನಾಮೇಷ ಎನಿಸುತ್ತಿರುವ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಇದೀಗ ಹೊಸ ತಗಾದೆ ತೆಗೆದು ವಿಶೇಷ ಭೂಸ್ವಾಧೀನ ಅಧಿಕಾರಿಗಳಿಂದ ಅಸ್ಕಿ ಗ್ರಾಮವು ಮುಳುಗಡೆ ಗ್ರಾಮವೆಂದು ಘೋಷಿಸಲ್ಪಟ್ಟಿದ್ದರಿಂದ ಅಸ್ಕಿ ಗ್ರಾಮದ ಸರ್ವೇ ಕಾರ್ಯವನ್ನು ಕೈಬಿಡಲಾಗಿದೆ ಎಂದು ಅವೈಜ್ಞಾನಿಕ ಹೇಳಿಕೆ ನೀಡಿದ್ದು ಸರಿಯಲ್ಲ.
ತಕ್ಷಣವೇ ಸರ್ವೇ ಕಾರ್ಯ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು ಹಾಗು ಶಾಶ್ವತ ಪುನರ್ವಸತಿಗೆ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕೆಂದರು.
ವರದಿ
ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು
ಬಾಗಲಕೋಟೆ

Social Plugin