ರಬಕವಿ-ಬನಹಟ್ಟಿ ತಾಲೂಕಿಗೆ ಖುಷಿ ಶೇಠ್ ಪ್ರಥಮ 
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಯಲ್ಲಟ್ಟಿಯ ಕೊಣ್ಣೂರ ಆಂಗ್ಲ ಮಾಧ್ಯಮ ಶಾಲೆಯ ಕಮಾರಿ ಖುಷಿ ಶೇಠ್ ೬೧೮ ಅಂಕ ಪಡೆದು ಶೇ.೯೮.೮೮ ಫಲಿತಾಂಶದೊಂದಿಗೆ ರಬಕವಿ-ಬನಹಟ್ಟಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾಳೆ.
ಇಂಗ್ಲೀಷ್-೧೨೦, ಕನ್ನಡ-೯೮, ಹಿಂದಿ-೧೦೦, ಗಣಿತ-೧೦೦, ವಿಜ್ಞಾನ-೧೦೦ ಮತ್ತು ಸಮಾಜ ವಿಜ್ಞಾನ-೧೦೦ ಅಂಕ ಪಡೆದು ವಿಶೇಷತೆ ಮೆರೆದಿದ್ದು, ಇವಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಪ್ರೊ. ಬಿ.ಕೆ. ಕೊಣ್ಣೂರ ಅಭಿನಂದನೆ ಸಲ್ಲಿಸಿದ್ದಾರೆ.
ಇದೇ ಸಂದರ್ಭ ಕೊಣ್ಣೂರ ಶಾಲೆ ಶಿಕ್ಚಕ ವೃಂದದಿಂದ ಶೇಠ್ ಅವರನ್ನು ಸನ್ಮಾನಿಸಲಾಯಿತು.


ವರದಿ ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು
ಬಾಗಲಕೋಟೆ