ಅವರು ಮದರಖಂಡಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆದ ಸಪ್ತಾಹ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಶ್ರಾವಣ ಮಾಸ ತಿಂಗಳ ಅಷ್ಟೇ ಅನ್ನದೆ ವರ್ಷವಿಡಿ ಶ್ರಾವಣವೆಂದು ತಿಳಿದು ಸಂಸಾರ ಮಾಡುತ್ತಾ ಸಾದು ಸಂತರ ಸಂಘದಲ್ಲಿದ್ದು ದಾನ ಧರ್ಮ ಮಾಡಿ ಪುಣ್ಯ ಪಡೆದುಕೊಳ್ಳಿರಿ. ಧರ್ಮವಂತರನ್ನು ದೇವರು ಸದಾಕಾಲ ರಕ್ಷಣೆ ಮಾಡುತ್ತಾರೆ ಎಂದು ಹೇಳಿದರು. ಪ್ರಾರಂಭದಲ್ಲಿ ದೇವಿಯ ವಿಶೇಷ ಪೂಜೆ, ನೈವೇದ್ಯ ನೆರವೇರಿತು. ಅನೇಕ ಬಂಡಿಗಣಿ ಮಠದ ಭಕ್ತರು ತಮಗೆ ಆದ ಅನುಭವವನ್ನು ವೇದಿಕೆಯಲ್ಲಿ ಹಂಚಿಕೊಂಡರು. ಮದರಖಂಡಿ ಭಕ್ತರಿಂದ ದಾನೇಶ್ವರ ಶ್ರೀಗಳಿಗೆ ಸನ್ಮಾನ ನಡೆಯಿತು.ಸಹಸ್ರಾರು ಮುತ್ತೈದೆಯರಿಗೆ ಉಡಿತುಂಬಿ ಸರ್ವರಿಗೂ ಊಟದ ವ್ಯವಸ್ಥೆ ನಡೆಯಿತು.ಮದರಖಂಡಿ ಗ್ರಾಮದ ಗುರು
ಹಿರಿಯರು ಉಪಸ್ಥಿತರಿದ್ದರು.

Social Plugin