ಅವರು ಮಂಗಳವಾರದಂದು ತಾಲೂಕಿನ ಹೂಲಿಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನೂತನ ಅಂಗನವಾಡಿ ಕಟ್ಟಡ ಹಾಗೂ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿ ಶೈಕ್ಷಣಿಕ, ಆರೋಗ್ಯ ಹಾಗೂ ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿ ಶಾಸಕರ ಪ್ರಯತ್ನದಿಂದ ಹಲವಾರು ಕಾರ್ಯಗಳನ್ನು ಕ್ಷೇತ್ರದಲ್ಲಿ ಪ್ರಗತಿಯಲ್ಲಿ ಇವೆ ಎಂದರು.
ಇದೇ ಸಂದರ್ಭದಲ್ಲಿ ಕ್ಷೀರಭಾಗ್ಯ ಯೋಜನೆಯಡಿ ಮಕ್ಕಳಿಗೆ ಹಾಲಿನ ಪುಡಿ ಪಾಕೇಟಗಳನ್ನು ವಿತರಿಸಲಾಯಿತು. ಸ್ಮಾರ್ಟ್ ಕ್ಲಾಸ್ ನಡೆಸಲು ನೂತನ ಪ್ರೊಜೆಕ್ಟರ್‍ಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಹೂಲಿಕಟ್ಟಿಯ ಶಿವಲಿಂಗೇಶ್ವರಮಠದ ಶ್ರೀ ಕುಮಾರ ದೇವರು, ಜಿ.ಪಂ ಮಾಜಿ ಸದಸ್ಯರಾದ ಟಿ.ಆರ್.ಕಾಗಲ, ಮಡ್ಡೇಪ್ಪ ತೋಳಿನವರ, ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕ ಎ.ಬಿ.ಮಲ್ಬನ್ನವರ, ಸಿಡಿಪಿಓ ಜಯಶ್ರೀ ಶೀಲವಂತ, ಲೋಕೋಪಯೋಗಿ ಇಲಾಖೆಯ ಎ.ಬಿ.ಶಿಂಗೆ, ಮುಖಂಡರುಗಳಾದ ಅಶೋಕ ಗೋಣಿ, ಶಿವಾನಂದ ಮಮದಾಪೂರ, ಸಲೀಮಸಾಬ ಜಮಾದಾರ, ಕಲ್ಲಪ್ಪ ಗೋಣಿ, ಬಾಳಪ್ಪ ಕಂಕಣವಾಡಿ, ಮಾಯಪ್ಪ ಕೋಣಿ, ಸಿದ್ದಪ್ಪ ಸಿಂಗನ್ನವರ, ಯಲ್ಲವ್ವ ನಾಗನೂರ, ಕಮಲಾ ಹೂಲಿಕಟ್ಟಿ, ಶಿವಲೀಲಾ ಬಡಿಗೇರ ಸೇರಿದಂತೆ ಅನೇಕರು ಇದ್ದರು.

Social Plugin