______________________________________

ತೇರದಾಳದ ಶ್ರೀಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವತಿಯಿಂದ ವೀರ ಯೋಧರಿಗೆ ಹಾಗೂ ಸ್ವಾತಂತ್ರ ಹೋರಾಟಗಾರರಿಗೆ, ಹಿರಿಯ ನಾಗರಿಕರಿಗೆ ಸನ್ಮಾನ ಸಮಾರಂಭದಲ್ಲಿ ವೀರ ಯೋಧರನ್ನು ಸತ್ಕರಿಸಲಾಯಿತು.

ತೇರದಾಳದ ಶ್ರೀಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವತಿಯಿಂದ ವೀರ ಯೋಧರಿಗೆ ಹಾಗೂ ಸ್ವಾತಂತ್ರ ಹೋರಾಟಗಾರರಿಗೆ, ಹಿರಿಯ ನಾಗರಿಕರಿಗೆ ಸನ್ಮಾನ ಸಮಾರಂಭದಲ್ಲಿ ಮಾಜಿ ಸಚಿವೆ ಉಮಾಶ್ರೀ ಮಾತನಾಡಿದರು.

ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಬೇಕಾಗಿದೆ- ಶ್ರೀಮತಿ ಉಮಾಶ್ರೀ

ತೇರದಾಳ : ಮಹಾತ್ಮಾ ಗಾಂಧಿಜಿಯವರ ಕರೆಗೆ ಓಗೊಟ್ಟು ಸ್ವತಂತ್ರ ಹೋರಾಟದಲ್ಲಿ ಧರ್ಮ,ಜ್ಯಾತಿ ಭೇಧವಿಲ್ಲದೆ ಹೋರಾಟ ಮಾಡಿ ಭಾರತವನ್ನು ಕಟ್ಟುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಭಾರತದ ಐಕ್ಯತೆಯನ್ನು ಉಳಿಸಿ ಕಾಪಾಡುವಂತ ಕೆಲಸವನ್ನು ಮಾಡಿದೆ. ಈಗ ಮತ್ತೊಮ್ಮೆ ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಬೇಕಾಗಿದೆ ಎಂದು ಮಾಜಿ ಸಚಿವೆ ಶ್ರೀಮತಿ ಉಮಾಶ್ರೀ ಹೇಳಿದರು.

    ಪಟ್ಟಣದ ಶ್ರೀಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ಯ ಮುನ್ನಾ ದಿನದಂದು ವೀರ ಯೋಧರಿಗೆ ಹಾಗೂ ಸ್ವಾತಂತ್ರ ಹೋರಾಟಗಾರರಿಗೆ, ಹಿರಿಯ ನಾಗರಿಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಅನ್ನುವ ಪ್ರಜಾಪ್ರಭುತ್ವದ ವ್ಯವಸ್ಥೆಗಾಗಿ ಹೋರಾಟ ಮಾಡಿದವರು ಕಾಂಗ್ರೆಸ್ ಪಕ್ಷದವರು. ಡಾ.ಅಂಬೇಡ್ಕರರವರು ರಚಿಸಿದ ಸಂವಿಧಾನ ಇರುವುದರಿಂದ ಇಂದು ಭಾರತದಲ್ಲಿ ಎಲ್ಲ ಧರ್ಮಗಳು ರಕ್ಷಣೆಯಾಗಿವೆ. ಸಂವಿಧಾನವನ್ನು ಎತ್ತಿ ಹಿಡಿಯುವಂತ ಕಾರ್ಯವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಇನ್ನು ಮುಂದಾದರು ಮಾಡುತ್ತದೆ. ಮೊದಲು ದೇಶದ ಸ್ವಾತಂತ್ರಕ್ಕಾಗೀ ಹೋರಾಟ ಮಾಡುತ್ತಿದ್ದೇವು. ಇಂದು ನಮ್ಮ ಸ್ವಾತಂತ್ರಕ್ಕಾಗಿ ಹೋರಾಟ ಮಾಡಬೇಕಾಗಿದೆ. ಎಲ್ಲರೂ ಎಚ್ಚರಾಗಬೇಕು. ಮುಂದಿನ ಬರುವ ದಿನಗಳಲ್ಲಿ ಒಳ್ಳೆಯ ಸರಕಾರವನ್ನು ಆಯ್ಕೆ ಮಾಡಬೇಕು ಎಂದರು. 

  ಯೋಧರಾಗಿ ಸೇವೆ ಸಲ್ಲಿಸುತ್ತಿರುವವರು ಹಾಗೂ ಸೇವೆಯಿಂದ ನಿವೃತ್ತ ಹೊಂದಿದ ತೇರದಾಳ ಮತಕ್ಷೇತ್ರದ ವೀರ ಯೋಧರನ್ನು ವಿರಕ್ತ ಮಠದಿಂದ ವಿವಿಧ ವಾದ್ಯಮೇಳಗಳೊಂದಿಗೆ ಪುಷ್ಪಗಳನ್ನು ಹಾಕುವ ಮೂಲಕ ವೇದಿಕೆಗೆ ಕರೆದುಕೊಂಡು ಬಂದರು. ವೀರ ಯೋಧರನ್ನು, ಹಿರಿಯ ನಾಗರಿಕರನ್ನು ಶಾಲು ಹೊದಿಸಿ ಸನ್ಮಾನಿಸಿದರು.

  ಈ ಸಂದರ್ಭದಲ್ಲಿ ಮಾಜಿ ಪುರಸಭೆ ಅಧ್ಯಕ್ಷರಾದ ಮಲ್ಲಪ್ಪ. ದಾನಿಗೊಂಡ,ಡಾ.ಎ.ಆರ್.ಬೆಳಗಲಿ, ಅಶೋಕ ಅಳಗೊಂಡ, ಸಂಗಮೇಶ ಮಡಿವಾಳ, ಪಿ.ಎಸ್. ಮಾಸ್ತಿ, ಬಸವರಾಜ ಕೊಕಟನೂರ, ಶ್ರೀಮಂತ ಅಂಬಲಿ, ಮಲ್ಲಪ್ಪ ಸಿಂಗಾಡಿ, ನಾಗಪ್ಪ ಹಟ್ಟೆನ್ನವರ, ಪ್ರಭು ಗಸ್ತಿ, ಸದಾಶಿವ ರೆಡ್ಡಿ, ಮುಸ್ತಫಾ ಮೋಮಿನ್, ಲಕ್ಷ್ಮಣ ದೇಸಾರೆಟ್ಟಿ, ಸುರೇಶ ಕಬಾಡಗಿ, ರಾಜೇಸಾಬ ನಗಾರ್ಜಿ, ಪೈಜುಲ್ಲಾ ಇನಾಮದಾರ, ಫಜಲ್ ಅತಾರಾವುತ, ಆಧಿನಾಥ ಸಪ್ತಸಾಗರ, ಶಿವಪ್ಪ ಖವಾಸಿ ಸೇರಿದಂತೆ ಪಕ್ಷದ ಮುಖಂಡರು, ಇನ್ನಿತರರು ಇದ್ದರು.

  ವಿದ್ಯಾ ಭಜಂತ್ರಿ ಹಾಗೂ ಸಂಗಡಿಗರು ವಂದೇ ಮಾತರಂ ಗೀತೆ ಹಾಡುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು. ಯುವ ಧುರೀಣ ಪ್ರವೀಣ ನಾಡಗೌಡ ಸ್ವಾಗತಿಸಿದರು. ಶೆಟ್ಟೆಪ್ಪ ಸುಣಗಾರ ನಿರೂಪಿಸಿ ವಂದಿಸಿದರು.