*ಸಂಭ್ರಮದ ನಾಗದೇವತೆಯ ಜಾತ್ರೆ*
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಕೆಎಚ್ ಡಿಸಿ ಕಾಲೊನಿಯಲ್ಲಿ ಶುಕ್ರವಾರ ನಾಗ ಪಂಚಮಿಯ ನಿಮಿತ್ತವಾಗಿ ನಾಗ ದೇವತೆಯ ಜಾತ್ರೆ ಸಂಭ್ರಮ ಸಡಗರದಿಂದ ನಡೆಯಿತು.
ಬೆಳಗ್ಗೆ ನಾಗ ದೇವತೆಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ನಂತರ ದೇವಸ್ಥಾನದ ಮುಂಭಾಗದಲ್ಲಿ ಸುಂದರವಾದ ಹುತ್ತನ್ನು ನಿರ್ಮಾಣ ಮಾಡಲಾಯಿತು. ಮುತ್ತೈದೆಯರು ಹುತ್ತಕ್ಕೆ ಪೂಜೆಯನ್ನು ಸಲ್ಲಿಸಿದರು. ನಂತರ ದೇವಸ್ಥಾನದ ಆವರಣದಲ್ಲಿ ನಾಗ ದೇವತೆಗೆ ಹಾಲು ಎರೆದರು.ನಂತರ ಪ್ರಸಾದ ಸೇವೆಯ ವ್ಯವಸ್ಥೆಯನ್ನು ಮಾಡಲಾಗಿತ್ತು.
ವರದಿ
ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು
ಬಾಗಲಕೋಟೆ

Social Plugin