*ಆರೋಗ್ಯವಂತ ಬದುಕು ಎಲ್ಲರದ್ದಾಗಲಿ*
 ಕೊರೊನಾ ಮಹಾಮಾರಿಯಿಂದ ಇಡೀ ದೇಶವೇ ಆರೋಗ್ಯ, ಆರ್ಥಿಕ ಸೇರಿದಂತೆ ಎಲ್ಲ ರಂಗಗಳಲ್ಲಿಯೂ ತತ್ತರಿಸಿ ಹೋಗಿದೆ. ಜಾಗರೂಕತೆಯಿಂದ ಕೋವಿಡ್-೧೯ ಗೆ ಹೆದರದೆ ಜಾಗೃತಿಯಿಂದ ಎಚ್ಚರಿಕೆ ವಹಿಸುವ ಮೂಲಕ ಆರೋಗ್ಯವಂತ ಬದುಕು ಎಲ್ಲರದ್ದಾಗಬೇಕೆಂದು ವೈದ್ಯಾಧಿಕಾರಿ ಎನ್.ಎಂ. ನದಾಫ್ ಹೇಳಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಸಮುದಾಯ ಆಸ್ಪತ್ರೆಯಲ್ಲಿ ಧ್ವಜಾರೋಹಣಾ ಕಾರ್ಯಕ್ರಮದಲ್ಲಿ ಧ್ವಜವಂದನೆ ನೆರವೇರಿಸಿ ಮಾತನಾಡಿದ ಅವರು, ೭೫ ನೇ ವರ್ಷದ ಅಮೃತ ಮಹೋತ್ಸವದ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವಲ್ಲಿ ಇಡೀ ದೇಶ ಸಾಕ್ಷಿಯಾಗಿದೆ. ೨ ಶತಮಾನದಷ್ಟು ಕಾಲ ನಮ್ಮ ದೇಶವನ್ನಾಳಿದ ಬ್ರಿಟಿಷರ ಆಡಳಿತ ಕೊನೆಯಾದ ದಿನವನ್ನು ಪ್ರತಿ ವರ್ಷ ಸ್ವಾತಂತ್ರ್ಯ ದಿನವ್ನಾಗಿಸಿ ಆಚರಿಸಲಾಗುತ್ತಿದೆ.
 ಬ್ರಿಟಿಷರ ಕಪಿಮುಷ್ಟಿಯಿಂದ ಬಿಡಿಸಲು ಲಕ್ಷಾಂತರ ಹೋರಾಟಗಾರರು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಅಂಥ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳುವ ದಿನ ಇದು ಒಟ್ಟಾರೆ ಭಾರತೀಯರ ಪಾಲಿಗೆ ಇದು ಹೆಮ್ಮೆ ಪಡುವ ದಿನವೆಂದರು.


ಆಸ್ಪತ್ರೆ ಸುಧಾರಣಾ ಸಮಿತಿ ಸದಸ್ಯರಾದ ಶಿವಾನಂದ ಕಾಗಿ, ಶ್ರೀಮತಿ ನಂದಾ ಕೊಕಟನೂರ, ಆನಂದ ಪವಾಡೆ, ಜಿತೇಂದ್ರ ದೇಸಾಯಿ, ಬಿ.ಎಸ್. ಪಟ್ಟಣಶೆಟ್ಟಿ, ವೈದ್ಯಾಧಿಕಾರಿ ವೀರೇಶ ಹುಡೇದಮನಿ, ಅಧೀಕ್ಷಕಿ ಸ್ಮೀತಾ ಕಾಳಗಿ, ಗಂಗಾಧರ ಗೊಬ್ಬಾಣಿ ಸೇರಿದಂತೆ ಅನೇಕರಿದ್ದರು.


ವರದಿ
ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು ಬಾಗಲಕೋಟೆ