ಭಕ್ತರಿಗೆ ನೇರ ಪ್ರಸಾರದ ಮೂಲಕ ಶ್ರೀಅಲ್ಲಮಪ್ರಭು ದೇವರ ದರ್ಶನ ಭಾಗ್ಯ

ತೇರದಾಳ : ಬಾಗಲಕೋಟ ಜಿಲ್ಲೆಯ ತೇರದಾಳ ಪಟ್ಟಣದ ಕ್ಷೇತ್ರಾಧಿಪತಿ ಶ್ರೀಅಲ್ಲಮಪ್ರಭು ದೇವರ ಜಾತ್ರೆಯು ಪ್ರತಿ ವರ್ಷದಂತೆ ಈ ವರ್ಷವು ಶ್ರಾವಣ ಮಾಸದ ಕೊನೆಯ ಸೋಮವಾರ ಅಂದರೆ ಸೆ.6ರಂದು ಜರಗುವುದು. ಕೋವಿಡ್-19ರ ಕಾರಣ ಸಾಂಕೇತಿಕವಾಗಿ ಜಾತ್ರೆ ನಡೆಯುವುದು. ಸರಕಾರದ ಮಾರ್ಗಸೂಚಿಯ ಪ್ರಕಾರ ದೇವರ ಸೇವಾ ಕಾರ್ಯಗಳು ಯಥಾಪ್ರಕಾರ ನೆರವೇರಲಿವೆ. ಅಂತರ್ ರಾಜ್ಯ ಹಾಗೂ ದೂರದ ಸದ್ಭಕ್ತರಿಗೆ ಕೋವಿಡ್ ಲಾಕ್‍ಡೌನ್‍ದಿಂದಾಗಿ ದರ್ಶನಕ್ಕೆ ಬರಲು ಸಾಧ್ಯವಾಗುವುದಿಲ್ಲ ಈ ಸಂದರ್ಭದಲ್ಲಿ ಜನದಟ್ಟನೆ ಆಗದೇ ಕಳೆದ ವರ್ಷದ ಹಾಗೇ ಭಕ್ತರಿಗೆ ನೇರ ಪ್ರಸಾರದ ಮೂಲಕ ದರ್ಶನ, ಅಭಿಷೇಕಗಳನ್ನು ಆನ್‍ಲೈನ್ ಮೂಲಕ ತಮ್ಮ ಸ್ವನಿವಾಸದಿಂದ ಮಾಡಿಸಬಹುದು, ದೂರವಾಣಿ ಮೂಲಕ ಅರ್ಚಕರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಲು ದೇವಸ್ಥಾನದ ಅರ್ಚಕರು ಅನುಕೂಲ ಮಾಡಿಕೊಟ್ಟಿದ್ದಾರೆ. 

   ಅರ್ಚಕರನ್ನು ಸಂಪರ್ಕಿಸಲು ಮೊ. 9986460173, ಈಶ್ವರಯ್ಯ ಪರಯ್ಯ ಭಾಂವಿ. 7022150365 ಮುರಗಯ್ಯ. ಎನ್.ಭಾಂವಿ. ಈ ನಂಬರ್‍ಗಳು ಗೂಗಲ್ ಪೇ.ಫೋನ್ ಪೇ ಇದ್ದು, ಭಾರತೀಯ ಸ್ಟೇಟ್ ಬ್ಯಾಂಕಿನ ಉಳಿತಾಯ ಖಾತೆ ಸಂಖ್ಯೆ. 34546933013 ಈಶ್ವರಯ್ಯ ಪರಯ್ಯ ಭಾಂವಿ ಇದಕ್ಕೆ ಜಮೆ ಮಾಡಿ ಅರ್ಚಕರನ್ನು ಸಂಪರ್ಕಿಸಿ ಸೇವಾ ಕಾರ್ಯವನ್ನು ನೆರವೇರಿಸಿಕೊಳ್ಳಬಹುದು ಎಂದು ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ.

👉👉ವಿ.ಸೂ : ಶ್ರಾವಣ ಮಾಸದ ನಾಲ್ಕನೇಯ ಸೋಮವಾರ ಆ.30 ಸೋಮವಾರ ಮತ್ತು ಸೆ.6ರ ಸೋಮವಾರ ನಸುಕಿನ ಜಾವ 4ಗಂಟೆಗೆ ಸ್ವರೂಪ ಸಂದರ್ಶನ ಯೂಟ್ಯೂಬ್ ವಾಹಿನಯಲ್ಲಿ ಅಭಿಷೇಕ, ಊದ ನೀಡುವುದು ನಗಾರಿ ನೇರ ಪ್ರಸಾರದಲ್ಲಿ ವೀಕ್ಷೀಸಿ ಶ್ರೀ ಆಲ್ಲಮಪ್ರಭುವಿನ ದರ್ಶನಾರ್ಶಿವಾದಕ್ಕೆ ಪಾತ್ರರಾಗಬಹುದು. 

  ನೇರಪ್ರಸಾರವನ್ನು ವೀಕ್ಷಿಸಲು ಈ ಕೆಳಗೆ ನೀಡಿರುವ ಸ್ವರೂಪ ಸಂದರ್ಶನ ಯೂಟ್ಯೂಬ್ ಚಾನಲ್ ಸಬ್‍ಸ್ಕ್ರೈಬ್ ಮಾಡಕೊಳ್ಳಿ. 👇