ಹಳ್ಳೂರ 22 :ಗ್ರಾಮದ ಶಿವಶಂಕರ ನಗರದಿಂದ ಬಬಲಾದಿ ಸದಾಶಿವ ದೇವರ ದರ್ಶನಕ್ಕೆ ಕಾಲ್ನಡಿಗೆ ಮೂಲಕ ಹೊರಟು ಹಳ್ಳೂರದದಿಂದ ಬಬಲಾದಿಯವರಿಗೆ 18 ಗಂಟೆಯಲ್ಲಿ ಪಾದಯಾತ್ರೆ ಮೂಲಕ ಹೋಗಿ ತ್ರಿಕಾಲ ಜ್ಞಾನಿ,ಬಬಲಾದಿ ಸದಾಶಿವರ ದೇವರ ದರ್ಶನ ಪಡೆದುಕೊಂಡು .ನಂತರ ದೇವಸ್ಥಾನದ ಪೀಠಾಧ್ಯಕ್ಷರಾದ ಶಿದ್ದಾರಾಮೇಶ್ವರ ಶ್ರೀಗಳ ದರ್ಶನ ಪಡೆದು ದೇವಸ್ಥಾನದಲ್ಲಿ ಮುಕ್ಕಾಮ್ ಮಾಡಿದರು.ರಾಜ್ಯದಲ್ಲಿ ಕಳೆದ ವರ್ಷದಿಂದ ಕೊರೋನಾ ಹೆಚ್ಚಾಗಿರುವದರಿಂದ ಬಬಲಾದಿಗೆ ಬಂದು ಭಕ್ತಿಯಿಂದ ನಡೆದುಕೊಂಡರೆ ಕೊರೋನಾ ಬರುದಿಲ್ಲ ನಂಬಿಕೆಯಿಂದ ಹಾಗೂ ಸುಖ ಶಾಂತಿ ನೆಮ್ಮದಿಗಾಗಿ ಭಕ್ತರು ದಿನಾಲೂ ಬಬಲಾದಿ ಮಠಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ . ಸದಾಶಿವರು ಅನೇಕ ವರ್ಷಗಳ ಹಿಂದೆ ಕೊರೋನಾ ರೋಗವು ಬರುತ್ತಿದೆ ಅಂಥ ಹೇಳಿದ್ದ ವಾಕ್ಯಈಗ ನಿಜವಾಗುತ್ತಿದೆ. ಪಾದಯಾತ್ರೆ ಮೂಲಕ ಹೋದವರು.ಮಲ್ಲಿಕಾರ್ಜುನ ಕಾಪಸಿ. ಶ್ರೀಶೈಲ ಮಾಲಗಾರ. ಶಂಕರ ಮಾಲಗಾರ. ಲಕ್ಷ್ಮಣ ಬಡಿಗೇರ. ರಾಮಪ್ಪ ಕೌಜಲಗಿ. ಅಡಿವೆಪ್ಪ ಸವದಿ. ಬಸು ಕಂಬಾರ.ಶ್ರೀಶೈಲ ಕಂಬಾರ ಇದ್ದರು.

Social Plugin