ಖ್ಯಾತ ಗವಾಹಿ ಸಹೋದರರಿಗೆ ಸನ್ಮಾನ...
ಶೇಗುಣಸಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಕ್ಷೇತ್ರ ನಂದಗಾಂವ ಗ್ರಾಮದ ಭೂ ಕೈಲಾಸ ಮಂದಿರಕ್ಕೆ ಬೆಂಗಳೂರಿನ ಆಕಾಶವಾಣಿ ಮತ್ತು ದೂರದರ್ಶನದ ಶಾಸ್ತ್ರೀಯ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತದ ಖ್ಯಾತ ಗಾಯಕರಾದ ಪಂಡಿತ್ ಅಮರೇಶ್ವರ ಗವಾಯಿಗಳು ಭೇಟಿ ನೀಡಿದರು.ಭೂ ಕೈಲಾಸ ಮಂದಿರದ ಪರಿಸರ ಹಾಗೂ ಸೌಂದರ್ಯವನ್ನು ನೋಡಿ ಬೆರಗಾಗಿ ಉದ್ಗಾರ ತೆಗೆದು ಮುಕ್ತ ಮನಸ್ಸಿನಿಂದ ಹೊಗಳಿದರು.ಇಂಚಗೇರಿ ಅಧ್ಯಾತ್ಮ ಸಂಪ್ರದಾಯ ಈ ನಾಡಿನಲ್ಲಿ ಭಕ್ತಿ, ವೈರಾಗ್ಯ,ಧ್ಯಾನ ಮತ್ತು ನೀತಿಯ ಪಾಠವನ್ನು ಪ್ರತಿ ಮನೆ ಮನೆಗೆ ತಿಳಿಸಿರುವುದು ಈ ಸಂಪ್ರದಾಯದ ಗುರು ಪರಂಪರೆಯ ಸದ್ಗುರುಗಳ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಕಳಕಳಿಯನ್ನು ತೋರಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭೂ ಕೈಲಾಸ ಮಂದಿರದ ಒಡೆಯರಾದ ಶ್ರೀ ಮಹಾದೇವ ಮಹಾರಾಜರು, ರಾಯಚೂರು ಜಿಲ್ಲೆಯ ಲಿಂಗಸೂಗೂರಿನ ಅಮರೇಶ್ವರ ಶಾಸ್ತ್ರಿಜೀಯವರು, ಬೆಂಗಳೂರು ಆಕಾಶವಾಣಿಯ ಖ್ಯಾತ ತಬಲಾ ವಾದಕರಾದ ಪಂಡಿತ್ ಹನುಮಂತರಾಯರು ಹಾಗೂ ಆಶ್ರಮದ ಭಕ್ತರು ಉಪಸ್ಥಿತರಿದ್ದರು.

Social Plugin