ಅಚಲೇರಿ ಜಿಡಗಾ ಶ್ರೀಗಳ ತುಲಾಬಾರ
ಮುಗಳಖೋಡ: ಶ್ರಾವಣವೆಂದರೆ ಪ್ರಸನ್ನ ಚಿತ್ತದ ಭಕ್ತಿಯ, ಸಾತ್ವಿಕ ಮಾತುಗಳ ಸಂಭ್ರಮದ ಮಾಸ. ಹಿಂದೂಗಳಿಗೆ ಶ್ರಾವಣ ಮಾಸ ಪವಿತ್ರವಾದದು, ವರ್ಷಪೂರ್ತಿ ಇರುವ ಹಲವು ಹಬ್ಬಗಳಲ್ಲಿ ಹೆಚ್ಚಿನ ಹಬ್ಬಗಳು ಈ ತಿಂಗಳಲ್ಲೆ ಆಚರಿಸಲ್ಪಡುತ್ತದೆ ಏನೇ ಮಾಡಿದರು ಶ್ರಾವಣ ಮಾಸದಲ್ಲಿ ಮಾಡಬೇಕು ಓಳ್ಳೆಯ ಫಲ ಸಿಗುತ್ತೆ ಎಂದು ಅಚಲೇರಿ-ಜಿಡಗಾ ಶ್ರೀಗಳಾದ ಷ. ಶಿ. ಬಸವರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಅವರು ಪಟ್ಟಣದಲ್ಲಿ ಖೇತಗೌಡರ ಬಂಧುಗಳು ಹಮ್ಮಿಕೊಂಡಿದ್ದ ಗುರುಗಳಿಗೆ ತುಲಾಬಾರ ಕಾರ್ಯಕ್ರಮದಲ್ಲಿ ತುಲಾಬಾರ ಸ್ವೀಕರಿಸಿ ಆಶೀರ್ವಚನ ನೀಡಿದ ಅವರು ಭೀಮನ ಅಮವಾಸ್ಯೆ ಮುಗಿಯುತ್ತಿದ್ದಂತೆ ಹಬ್ಬಗಳ ಸರಮಾಲೆ ಶುರುವಾಗುತ್ತದೆ. ಮನುಷ್ಯರಷ್ಟೆ ಅಲ್ಲ, ಪ್ರಕೃತಿ ಮಾತೆ ಕೂಡ ಹಬ್ಬದ ಸಂಭ್ರಮಕ್ಕೆ ಅಣಿಯಾಗುತ್ತಾಳೆ. ಹೀಗಾಗಿ ಶ್ರಾವಣ ಮಾಸ ಎಂದರೆ ಎಲ್ಲೆಡೆ ಒಂದು ರೀತಿಯ ಸಂಭ್ರಮ ಈ ತಿಂಗಳಲ್ಲಿ ಪ್ರತಿದಿನವೂ ಪುಣ್ಯದಿನ, ವ್ರತ, ಪೂಜೆ, ಮಂಗಳಗೌರಿ ವ್ರತ, ಶುಕ್ರಗೌರಿ ಪೂಜೆ, ವರಮಹಾಲಕ್ಷ್ಮೀ ವ್ರತ ಹೀಗೆ ಒಂದೆಡೆ ಮನೆಮನೆಗಳಲ್ಲಿ ಹಬ್ಬದ ಸಂಭ್ರಮವಿದ್ದರೆ ಮತ್ತೊಂದೆಡೆ ಪ್ರಕೃತಿ ಮಾತೆಗೂ ಹಬ್ಬದ ಸಂಭ್ರಮ ಎಲ್ಲೆಡೆ ಹಸಿರು ಹೊದಿಕೆಯನ್ನೆ ಹಾಸಿಕೊಂಡಂತೆ ಕಾಣುವ ಪ್ರಕೃತಿ ಮಾತೆ ತನ್ನೊಳಗೆ ಹಬ್ಬವನ್ನು ಸಂಭ್ರಮಿಸುತ್ತಾಳೆ.
ಹೀಗೆ ಕಾಲಕಾಲಕ್ಕೆ ಶ್ರಾವಣಮಾಸದಲ್ಲಿ ಜಾತ್ರೆ, ಪುರಾಣ, ಪ್ರವಚನ ಹಬ್ಬದ ಆಚರಣೆ, ಮನೆಗೆ ಸಾಧು-ಶರಣ, ಸಂತರು, ಸ್ವಾಮಿಜಿಗಳು, ಮಹಾತ್ಮರು, ಗುರುಗಳನ್ನು ಕರೆಸುವದು ನಡೆಯುತ್ತಲೇ ಇರಬೇಕು. ವಿಜ್ಞಾನ ಎಷ್ಟೇ ಮುಂದುವರಿದರೂ ಅದಕ್ಕೆ ಮೂಲಾಧಾರವಾದದ್ದು ಧರ್ಮದ ತಳಹದಿಯೇ ಹೊರತು ವಿಜ್ಞಾನವಲ್ಲ ಎಂದು ಶ್ರಾವಣಮಾಸ ಹಾಗೂ ಧರ್ಮದ ವಿಶೇಷತೆ ತಿಳಿಸಿದರು.
ಗೌಡಪ್ಪ ಖೇತಗೌಡರ ಕುಟುಂಬದವರು ಸೇರಿ ನಾವು ಎಷ್ಟೇ ಎತ್ತರಕ್ಕೆರಿದರು ಗುರುಗಳನ್ನು ಮರೆಯಬಾರದೆಂದು ತಿಳಿದು ಶ್ರಾವಣ ಮಾಸದ ನಿಮಿತ್ಯೆ ಪಟ್ಟಣದ ಸಮಸ್ತ ಭಕ್ತರ ಸಮ್ಮುಖದಲ್ಲಿ ಅಚಲೇರಿ ಜಿಡಗಾ ಮಠದ ಶ್ರೀ ಬಸವರಾಜೇಂದ್ರ ಮಹಾಸ್ವಾಮಿಗಳಿಗೆ ನಾಣ್ಯಗಳಿಂದ ತುಲಾಬಾರ ನೆರವೇರಿಸಿ ಗುರುಗಳಿಗೆ ಪಾದ ಪೂಜೆ ಮಾಡಿ, ಗುರುಗಳನ್ನು ಸನ್ಮಾನಿಸಿ ಗುರುಕಾಣಿಕೆ ನೀಡಿ ತಮ್ಮ ಭಕ್ತಿ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಗೌಡಪ್ಪ ಖೇತಗೌಡರ, ಡಾ.ಸಿ.ಬಿ.ಕುಲಿಗೋಡ, ರಮೇಶ ಖೇತಗೌಡರ, ಅಚಪ್ಪ ಬೆಳಗಲಿ, ಕೃಷ್ಣಾ ನಾಯಕ, ಶಿವಬಸು ಕಾಪ್ಸಿ, ಉಮೇಶ ಹೊಸತೋಟ, ಶ್ರೀಪಾಲ ಕುರಬಳ್ಳಿ, ರವಿ ಖೇತಗೌಡರ, ಹಾಗೂ ಖೇತಗೌಡರ ಬಂಧುಗಳು ಉಪಸ್ಥಿತರಿದ್ದರು.
ಪೋಟೋ ಶೀರ್ಷಿಕೆ: 28ಎಂಜಿಕೆಡಿ1
ಗುರುಗಳ ತುಲಾಬಾರ ನೆರವೇರಿಸುತ್ತಿರುವ ಖೇತಗೌಡರ ಬಂಧುಗಳು.
_________
ಜಾಹೀರಾತು 👇

Social Plugin