ಬಂಡಿಗಣಿ 28:ಸದಾಕಾಲ ಸತ್ಯದ ಕಾಯಕದ ಜೊತೆಗೆ ದೇವರ ಧ್ಯಾನದಲ್ಲಿ ಕಾಲ ಕಳೆಯಬೇಕು ದಿನಕ್ಕೆ 21,600 ಶ್ವಾಸ ಬಿಡದೆ ಧ್ಯಾನ ಮಾಡಬೇಕು. ಸತ್ಕರ್ಮ ಮಾಡಿ ಜಗತ್ತು ಕಲ್ಯಾಣ ಮಾಡಬೇಕಾಗಿದೆ ಎಂದು ಬಂಡಿಗಣಿಯ ಚಕ್ರವರ್ತಿ ಶ್ರೀ ದಾನೇಶ್ವರ ಶ್ರೀಗಳು ಹೇಳಿದರು. ಅವರು ರಾಮದುರ್ಗ ತಾಲೂಕಿನ ಶಿರಸಂಗಿ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ದೇವಿಯ ಉಡಿತುಂಬುವುವದು ಹಾಗೂ ಸಪ್ತಾಹ ಕಾರ್ಯಕ್ರಮ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ದಾರ, ಚೀಟಿ, ನಿಂಬೆಕಾಯಿ ಎಲ್ಲವು ಸುಳ್ಳು ಅದಾವು ದೇವರು ಒಬ್ಬನೇ ಸತ್ಯ ಇದ್ದಾನೆ ಕಾಳಿಕಾದೇವಿಯನ್ನು ಪೂರ್ಣ ನಂಬಿ ನಡೆಯಿರಿ. ಓಂ ನಮ ಶಿವಾಯ, ರಾಮ ಕೃಷ್ಣ ಹರಿ ಈ ಶ್ರೇಷ್ಠ ನಾಮವು ಮಾನವನನ್ನು ಆತ್ಮಜ್ಞಾನಿಯನ್ನಾಗಿ ಮಾಡುತ್ತದೆ. ಹಳ್ಳಿ, ಪ್ಯಾಟಿ, ಪಟ್ಟಣ ಎಲ್ಲ ಕಡೆ ಸಪ್ತಾಹ ನಡೆಯಬೇಕು ಊರಊರಿಗೆ ದಾಸೋಹ ಅನುಭವ ನಡೆಯಬೇಕು. ಮಹಾತ್ಮರು ಹೇಳುವ ಮಾತು ಸರಿಯಾಗಿ ಲಕ್ಷವಿಟ್ಟು ಕೇಳಿ ಮನಸ್ಸಿನಲ್ಲಿ ಇಟ್ಟುಕೊಂಡರೆ ಭಕ್ತಿ ಎಂಬ ಬೀಜ ಉತ್ಪತ್ತಿ ಆಗುತ್ತದೆ. ಮನುಷ್ಯನಿಗೆ ಅಹಂಕಾರ ಬರಬಾರದು ಮನಸಿಟ್ಟು ಭಕ್ತಿ ಮಾಡಿದರೆ ದೇವರು ಒಲಿಯುವನು. ಸಂಸಾರ ಮಾಡುತ್ತಾ ಪಾರಮಾರ್ಥ ಮಾಡಬೇಕು ಸ್ವಪ್ನ,ಸುಸ್ವಪ್ನ, ಜಾಗೃತದಲ್ಲಿ ದೇವರನ್ನು ಕಾಣಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಹಸ್ರಾರು ಮುತ್ತೈದೆಯರಿಗೆ ಉಡಿ ತುಂಬಿ ಬಂಡಿಗಣಿ ಮಠದಿಂದ ಸರ್ವರಿಗೂ ಊಟದ ವ್ಯವಸ್ಥೆ ಮಾಡಲಾಯಿತು. ಇದೆ ಸಂದರ್ಭದಲ್ಲಿ ಕಾಳಿಕಾದೇವಿ ದೇವಸ್ಥಾನ ಕಮಿಟಿಯಿಂದ ಚಕ್ರವರ್ತಿ ದಾನೇಶ್ವರ ಶ್ರೀಗಳನ್ನು ಸನ್ಮಾನಿಸಿ ಸತ್ಕರಿಸಿದರು.ದೇವಸ್ಥಾನದ ಧರ್ಮಧಿಕಾರಿಯಾದ ಇಂದ್ರಾಚಾರ್ಯ ಗಂಗಯ್ಯನವರ. ಶಿವಾಜಿ ಶಿಂದೆ. ಕರೆಪ್ಪ ದಡ್ಡಿಮನಿ, ಹಾಗೂ ಅರ್ಚಕರು ಬಂಡಿಗಣಿ ಮಠದ ಸದ್ಭಕ್ತರಿದ್ದರು.
________
ಜಾಹೀರಾತು 👇