ತೇರದಾಳ ಪುರಸಭೆಯ ವಾರ್ಡ ನಂ 3ರ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ರಾಜೇಸಾಬ ನಗಾರ್ಜಿ ತಮ್ಮ ಬೆಂಬಲಿಗರೊಂದಿಗೆ ಇಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು.
ತೇರದಾಳ ವಾರ್ಡ ನಂ3ರ ಚುನಾವಣೆಗೆ 9ಜನರು ನಾಮಪತ್ರ ಸಲ್ಲಿಕೆ
ತೇರದಾಳ : ಪಟ್ಟಣದ ವಾರ್ಡ ನಂ.3ರ ಸದಸ್ಯ ವಿನಾಯಕ ಬಂಕಾಪೂರ ಅವರ ನಿಧನದಿಂದಾಗಿ ತೆರವಾದ ಸದಸ್ಯ ಸ್ಥಾನಕ್ಕೆ ಸೆ.3ರಂದು ಚುನಾವಣೆ ನಡೆಯಲಿದ್ದು ಅದಕ್ಕೆ ಆ.16ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿ ಇಂದು ಸೋಮವಾರ 23 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ಭಾಜಪ, ಕಾಂಗ್ರೆಸ್, ಜೆಡಿಎಸ್ ಬೆಂಬಲಿತ ಹಾಗೂ ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ 9ಜನರು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವಾಗ ರಾಷ್ಟ್ರೀಯ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ಭಾಜಪ ಬೆಂಬಲಿತ ಒಬ್ಬರು, ಕಾಂಗ್ರೆಸ್ ಬೆಂಬಲಿತ ಒಬ್ಬರು, ಜ್ಯಾತ್ಯಾತೀತ ಜನತಾದಳ ಬೆಂಬಲಿತ ಒಬ್ಬರು ಹಾಗೂ ಸ್ವತಂತ್ರ ಅಭ್ಯರ್ಥಿಗಳಾಗಿ ಆರು ಜನರು ನಾಮಪತ್ರ ಸಲ್ಲಿಸಿದರು.
ನಾಮಪತ್ರ ಪರಿಶೀಲನೆ ಆ.24, ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಆ.26. ಸೆ.3ರಂದು ಮತದಾನ ನಡೆಯಲಿದೆ. ಸೆ. 3ರಂದು ಬೆಳಿಗ್ಗೆ 7ಗಂಟೆಯಿಂದ ಸಾಯಂಕಾಲ5 ಗಂಟೆಯವರೆಗೆ ಮತದಾನ ನಡೆಯಲಿದೆ. ಸೆ.6ರಂದು ಮತ ಎಣಿಕೆ ನಡೆಯಲಿದೆ. ಭಾಜಪ ಬೆಂಬಲಿತ ಪುಷ್ಪಲತಾ ವಿನಾಯಕ ಬಂಕಾಪೂರ, ಕಾಂಗ್ರೆಸ್ ಬೆಂಬಲಿತ ರಾಜೇಸಾಬ ನಗಾರ್ಜಿ, ಜ್ಯಾತ್ಯಾತೀತ ಜನತಾದಳ ಬೆಂಬಲಿತ ಯಾಸೀನಸಾಬ ಸಾತಬಚ್ಚೆ ಹಾಗೂ ಸ್ವತಂತ್ರವಾಗಿ 6ಜನರು ನಾಮಪತ್ರ ಸಲ್ಲಿಸಿದರು.
----------------------------


Social Plugin