ವರದಿ ಮುರಿಗೆಪ್ಪ ಮಾಲಗಾರ

ಬಂಡಿಗಣಿ 24:ಉತ್ತರ ಕರ್ನಾಟಕದಲ್ಲಿ ಪವಿತ್ರವಾದ ಕೃಷ್ಣಾ ನದಿಯು ಶ್ರೇಷ್ಠತೆಯನ್ನು ಪಡೆದುಕೊಂಡಿದೆ. ಗಂಗಾದೇವಿಯಲ್ಲಿ ಭೇದವಿಲ್ಲ, ಅದರಂತೆ ಮಾನವರೆಲ್ಲ ಜಾತಿ ಭೇದ ಮಾಡದೆ ಅಜಾತರಾಗಿ ಎಲ್ಲರೂ ಒಂದೇ ಎಂದು ತಿಳಿದು ಸಹಬಾಳ್ವೆಯಿಂದ ಬದುಕಿದರೆ ಒಳ್ಳೆಯದು ಎಂದು ಬಂಡಿಗಣಿಯ ಚಕ್ರವರ್ತಿ ದಾನೇಶ್ವರ ಶ್ರೀಗಳು. ಅವರು ಕುಲಹಳ್ಳಿ ಗ್ರಾಮದಲ್ಲಿ ಗಂಗಾದೇವಿ ಉಡಿತುಂಬುವದು ಹಾಗೂ ಸಪ್ತಾಹ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಸಾದು ಸಂತ ಪತಿವ್ರತೆಯರಿಗೆ ನಿಂದಾ ಆಡುವುದು ಮಹಾಪಾಪ. ನಾವು ಮಾಡಿದ ಪಾಪ, ಪುಣ್ಯಕ್ಕೆ ತಕ್ಕಂತೆ ಸುಖ ದುಃಖಗಳು ಒದಗಿಬರುತ್ತವೆ.
 ಗುಣ ನೋಡಿ ಒಳ್ಳೆಯವರ ಸಂಘ ಮಾಡಿ ಸತ್ಕರ್ಮ ಮಾಡಿ ಶ್ರೇಷ್ಠವಾದ ಮಾನವ ಜನ್ಮ ಉದ್ದಾಮಾಡಿಕೊಳ್ಳಿರಿ.ಜ್ಞಾನಿ,ಅಧಿಕಾರಿ, ಹಿರಿಯರಿಗೆ ಶಿರಬಾಗಿ ನಡೆಯುವುದೇ ಮಾನವನಿಗೆ ಒಳ್ಳೆಯ ಸಂಸ್ಕಾರವಾಗಿದೆ.12 ನೇ ಶತಮಾನದ ಅನುಭವ ಕಲಿಯುಗದಲ್ಲಿ ಬಸವ ಗೋಪಾಲ ಮಠದಿಂದ ನಡೆಸಿ ಅಜ್ಞಾನವನ್ನು ಹೋಗಲಾಡಿಸಿ ಜ್ಞಾನಿಗಳನ್ನಾಗಿ ಮಾಡಿ ಜಗತ್ತು ಉದ್ದಾರಮಾಡುವ ಕಾರ್ಯ ಮಾಡುತ್ತಿದೆ. ಪರಮಾತ್ಮನನ್ನು ಪೂರ್ಣ ನಂಬಿ ನಡೆದರೆ ತನ್ನ ಒಡಲೋಳಿಟ್ಟು ಕಾಯುವರು. ಸಂಶಯ ಸಂಸಾರ,ಹಾಗೂ ಭಕ್ತಿ ಹಾಳು ಮಾಡುತ್ತದೆ. ಶುಭ್ರವಾದ ಮನಸ್ಸನ್ನು ಹೊಂದಿದರೆ ಒಳ್ಳೆಯದು.ರಾಜಕಾರಣಿಗಳು, ಅಧಿಕಾರಿಗಳು ಸತ್ಯ, ನಿಷ್ಠೆಯಿಂದ ಕಾರ್ಯಮಾಡಿದರೆ ದೇವರ ಒಲುಮೆಯಾಗಿ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ದೊರೆಯುವದೆಂದು ಹೇಳಿದರು. ದಯಾನಂದ ಸ್ವಾಮಿಗಳು ಮಾತನಾಡಿ ಹಳ್ಳಿ ಹಳ್ಳಿಗೂ ಸಪ್ತಾಹ ದಾಸೋಹ ನಡೆಸಿ ಭಕ್ತರನ್ನು ಉದ್ದಾರಮಾಡುವ ಕಾರ್ಯ ಹಿಂದೆ ಕಲ್ಯಾಣದ ಬಸವಣ್ಣನವರು ಮಾಡುತ್ತಿದ್ದರು ಅವರ ಪ್ರತಿರೂಪವಾದ ಹಿಮಾಲಯದ ಸಾದು ಸಂತರಿಗಿಂತ ಶ್ರೇಷ್ಠರಾದ ದಾನೇಶ್ವರ ಶ್ರೀಗಳು ಮಾಡುತ್ತಿದ್ದಾರೆ. ಗ್ರಾಮ ಪ, ಅಭಿವೃದ್ಧಿ ಅಧಿಕಾರಿ ಸಂಗಮೇಶ ಸೊರಗಾಂವಿ ಮಾತನಾಡಿ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ದೇವರಿಂದ ಧರ್ಮಸ್ಥಳ ಪಾವನವಾದಂತೆ ಬಂಡಿಗಣಿ ದಾನೇಶ್ವರ ಶ್ರೀಗಳಿಂದ ಬಂಡಿಗಣಿ ಸುತ್ತಮುತ್ತಲಿನ ಗ್ರಾಮಗಳು ಪವಿತ್ರವಾಗುತ್ತಿವೆ ಗ್ರಾಮದ ಉದ್ದಾರಕ್ಕೆ ಗ್ರಾಮಸ್ಥರ ಸಹಕಾರ, ಶ್ರೀಗಳ ಆಶೀರ್ವಾದ ಸದಾಕಾಲ ಇರಲಿ ಎಂದು ಹೇಳಿದರು. ಪ್ರಾರಂಭದಲ್ಲಿ ದಾನೇಶ್ವರ ಶ್ರೀಗಳು ಕೃಷ್ಣಾನದಿ ದಡದಲ್ಲಿ ಗಂಗಾದೇವಿ ಪೂಜೆ, ನೈವೇದ್ಯವನ್ನು ನೆರವೇರಿಸಿದರು. ಕುಲಹಳ್ಳಿ ಸದ್ಭಕ್ತರಿಂದ ದಾನೇಶ್ವರ ಶ್ರೀಗಳಿಗೆ ಸನ್ಮಾನ ಹಾಗೂ ಅಲಂಕಾರ ನಡೆದು ಸಹಸ್ರಾರು ಮುತ್ತೈದೆಯರಿಗೆ ಉಡಿತುಂಬಿ ಸರ್ವರಿಗೂ ಊಟದ ವ್ಯವಸ್ಥೆ ನಡೆಯಿತು.ಕಾರ್ಯಕ್ರಮದಲ್ಲಿ ಗ್ರಾಮ ಪ ಅಧ್ಯಕ್ಷ ಸಂಗವ್ವ ಕವಳ್ಳಿ. ಉಪಾಧ್ಯಕ್ಷ ಮಲ್ಲಪ್ಪ ತಂಬಾಕು. ಕಾರ್ಯದರ್ಶಿ ಉಮಾ ಕವಟಗೊಪ್ಪ. ಗ್ರಾಮ ಲೇ ರಾಚಯ್ಯ್ ಮಠಪತಿ.ಗ್ರಾಮ ಸ ವಿಠ್ಠಲ ಸನದಿ.ಇಂಜಿನಿಯರ್ ಶಿವರುದ್ರಪ್ಪ ಕೆ.ಶಿವಪ್ಪ ಬಾಗಲಕೋಟ. ಮಾದೇವ ತಂಬಾಕು. ಮಲ್ಲಪ್ಪ ತವನಿಧಿ. ಸಿದ್ದಪ್ಪ, ಚನ್ನಪ್ಪ ನಿಂಬರಗಿ.ಮಾರುತಿ ದೊಡಮನಿ. ಕರೆಪ್ಪ ದಡ್ಡಿಮನಿ. ಪ್ರಕಾಶ ಹಳೆಮಣಿ ಸೇರಿದಂತೆ ಅನೇಕರಿದ್ದರು.