ಬಂಡಿಗಣಿ 29:ಕಷ್ಟಕಾಲದಲ್ಲಿ ಬಂದು ಬಳಗ ಆಸ್ತಿ ಅಂತಸ್ತು ಅಧಿಕಾರ ಕಾಪಾಡುವದಿಲ್ಲ ಭಕ್ತಿ ದಾನ ಧರ್ಮ ನಮ್ಮಲ್ಲಿದ್ದರೆ ದೇವರ ರಕ್ಷಣೆ ಮಾಡುವನು. ರಾಜಕಾರಣಿಗಳು, ಮಠಾದೀಶರು ಸನ್ಮಾರ್ಗ ಹಿಡಿದು ಸತ್ಯವನ್ನೇ ಹೇಳಿ ಜಗತ್ತು ಉದ್ದಾರ ಮಾಡಬೇಕಾಗಿದೆ ಎಂದು ಬಂಡಿಗಣಿಯ ಚಕ್ರವರ್ತಿ ದಾನೇಶ್ವರ ಶ್ರೀಗಳು ಹೇಳಿದರು. ಅವರು ನಂದಗಾಂವ ಗ್ರಾಮದ ಬಂಡಿಗಣಿ ಶಾಖಾ ಮಠದಲ್ಲಿ ನಡೆದ ಪಾರಮಾರ್ಥಿಕ ಸಪ್ತಾಹ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಧರ್ಮವಂತರು ಧರಣಿಗೆ ಬಂದು ಉಪದೇಶ ಮಾಡುವಾಗ ನಡೆ ನುಡಿ ತಿಳಿದು ಅವರ ಮಾರ್ಗದರ್ಶನದಲ್ಲಿ ನಡೆದರೆ ಮಾನವ ಜನ್ಮವು ಉದ್ದಾರವಾಗುತ್ತದೆ . ಅಕ್ಕಮಹಾದೇವಿ, ಮಲ್ಲಮ್ಮ ನಂತಹ ಭಕ್ತಿ ಮಾಡಿ ಮುಕ್ತಿ ಪಡೆದುಕೊಳ್ಳಬೇಕು. ಎಲ್ಲ ಮಠಗಳಲ್ಲಿ ಬಬಲಾದಿ, ಇಂಚಗೇರಿ ಮಠ ಶ್ರೇಷ್ಠತೆಯನ್ನು ಪಡೆದುಕೊಂಡಿವೆ. ಉನ್ನತ ಸ್ಥಾನಕ್ಕೆರಬೇಕಾದರೆ ಸಮರ್ಥ ಗುರುವಿನ ಆಶೀರ್ವಾದಬೇಕು. ಅಪಘಾನಿಸ್ಥಾನದಲ್ಲಿ ಉಗ್ರಗಾಮಿಗಳು ಜನರ ಜೀವ ಹತ್ಯೆ ಮಾಡುವುದು ಪಾಪಧಾಯಕವಾಗಿದೆ.
ದೇಶದ ಮೇಲೆ ಅನ್ಯಾಯ ನಡೆದರೆ ಬಂಡಿಗಣಿ ಮಠದ ಭಕ್ತರು ದೇಶ ಕಾಯಲು ಸೈನಿಕರಾಗಿ ಸಹಾಯ ಮಾಡೋಣ. ದಾನ ಮಾಡುವಾಗ ತಿಳಿದು ಯೋಗ್ಯರಿಗೆ ಮಾಡಿದರೆ ಮಾತ್ರ ಪುಣ್ಯ ಪ್ರಾಪ್ತಿ , ದುಷ್ಟರಿಗೆ, ಕುಡುಕರಿಗೆ ದಾನ ಮಾಡಿದರೆ ಪ್ರಯೋಜನವಿಲ್ಲ.ಶ್ರೀ ಕೃಷ್ಣ ಪರಮಾತ್ಮ ಭಕ್ತರಿಗೆ ಧ್ಯಾನ ದಾನ ಮಾಡಿರೆಂದು ಹೇಳುತ್ತಿದ್ದರು. ಹಿಂದೂ ಮುಸ್ಲಿಂ ಒಂದಾಗಿ ಸಹಬಾಳ್ವೆಯಿಂದ ಬದುಕಬೇಕು. ದೇವರು ಜಾತಿಗೆ ಒಲಿಯದೇ ನೀತಿ ಭಕ್ತಿಗೆ ಒಲಿಯುವನೆಂದು ಹೇಳಿದರು. ಸಿದ್ದು ಕೊಣ್ಣೂರ ಮಾತನಾಡಿ ಧಾರ್ಮಿಕ ಕಾರ್ಯ, ಭಕ್ತರಿಗೆ ಪವಾಡ ಮಾಡಿ ಉದ್ದಾರ ಮಾಡುವ ಭೂಮಿಯ ಮೇಲೆ ನಡೆದಾಡುವ ದೇವರು ದಾನೇಶ್ವರ ಶ್ರೀಗಳು ಎಂದರು. ಮಾಜಿ ಜಿ,ಪಂ, ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ ಮಾತನಾಡಿ ದೇಶದಲ್ಲಿ ಪುಣ್ಯ ಪುರುಷರು ಇರುವದರಿಂದ ನಾವೆಲ್ಲಾ ಸುಭಿಕ್ಷೆಯಾಗಿದ್ದೆವೆ.ಮಹಾತ್ಮರ ಮಾರ್ಗದರ್ಶನದಲ್ಲಿ ಸಾಗೋಣ ಎಂದು ಹೇಳಿದರು. ದಾನೇಶ್ವರ ಶ್ರೀಗಳಿಗೆ ನಂದಗಾಂವ ಸದ್ಭಕ್ತರಿಂದ ಹೂವಿನ ಅಲಂಕಾರ ನಡೆಯಿತು. ಕಾರ್ಯಕ್ರಮದಲ್ಲಿ ವಿಜಯ ವೇದಾಂಗ ಶ್ರೀಗಳು. ನಬಿಸಾಬ ಮುಲ್ಲಾ. ರಾಜು ಬಾರಕೋಲ. ಸದಾಶಿವ ಹೊಸೂರ. ಶಿವನಗೌಡ ಪಾಟೀಲ. ವೆಂಕಣ್ಣ ಗೊಬ್ಬರ. ನಿಂಗಪ್ಪಗೌಡ ನಾಡಗೌಡ. ಕರೆಪ್ಪ ದಡ್ಡಿಮನಿ.ನಾಗೇಶ ಗಸ್ತಿ.ಶಂಕರ ದೊಡಮನಿ ಸೇರಿದಂತೆ ಅನೇಕರಿದ್ದರು.
___________

Social Plugin