ವರದಿ ಮುರಿಗೆಪ್ಪ ಮಾಲಗಾರ. ಹಳ್ಳೂರ 29:ಶ್ರೀ ಕೃಷ್ಣ ಜನ್ಮಾಷ್ಠಮಿಯ ನಿಮಿತ್ಯ ಶ್ರೀ ಕೃಷ್ಣನ ವಿವಿಧ ಗುಣವೈಶಿಸ್ಟ್ಯಗಳು ಧರ್ಮ ಸಂಸ್ತಾಪನೆಯ14 ಲೋಕದ ಆರಾದ್ಯ ದೇವ ಭಾಗವನ್ ಕೃಷ್ಣನು. ಅವತಾರ:ಶ್ರೀ ಕೃಷ್ಣನು ವಿಷ್ಣುವಿನ ಎಂಟನೆ ಅವತಾರ ಅವನು ಹದಿನಾರು ಕಲೆ, ಅವತಾರವನ್ನು ಒಳಗೊಂಡ್ಡಿರುವದರಿಂದ ಕೃಷ್ಣನನ್ನು ಪೂರ್ಣಾವತಾರವೆಂದು ಕರೆಯಲಾಗುತ್ತದೆ. ಶ್ರೀ ಕೃಷ್ಣನೊಂದಿಗೆ ಯಮುನಾ ನದಿಯು ಅವಿನಾಭಾವ ಸಂಬಂಧವಿದೆ. ಯಮುನೆಯಲ್ಲಿ ಹೆಚ್ಚು ಕೃಷ್ಣನ ತತ್ವವಿದೆ. ಅವಳ ಬಣ್ಣವು ಶ್ರೀ ಕೃಷ್ಣನಂತೆ ನುಸುಗುಪ್ಪಾಗಿದೆ. ಯಮುನೆಯನ್ನು 'ಕಾಲಿಂದಿ 'ಎಂದು ಕರೆಯುತ್ತಾರೆ. ಕುಂಡಲಿನಿಯಲ್ಲಿ ಸಂಬಂದಿಸಿದ ಚಕ್ರಗಳು :ಕುಂಡಲಿನಿಯ ಅನಾಹುತ ಚಕ್ರವು ಶ್ರೀ ಕೃಷ್ಣನೊಂದಿಗೆ ಸಂಬಂಧ ಹೊಂದಿದೆ. ಶ್ರೀ ಕೃಷ್ಣನನಿಗೆ ಸಂಬಂದಿಸಿದ ದಿನಗಳು ಬುಧವಾರ ಪಾಂಡುರಂಗ ವಿಠ್ಠಲನ ದಿನವಾಗಿದೆ ಕಲಿಯುಗದಲ್ಲಿ ಶ್ರೀ ಕೃಷ್ಣನ ಅವತಾರವೇ ಶ್ರೀ ವಿಠ್ಠಲ. ಶ್ರಾವಣ ಮಾಸ ವರ್ಷದಲ್ಲಿ ಶ್ರೇಷ್ಠ ಮಾಸದಲ್ಲಿ ಕೃಷ್ಣ ಪಕ್ಷದಲ್ಲಿ ಬರುವ ಅಷ್ಟಮಿ ಅಂದರೆ ಗೋಕುಲಷ್ಠಮಿಯ ದಿನವು ಶ್ರೀಕೃಷ್ಣನೊಂದಿಗೆ ಸಂಬಂಧ ಹೊಂದಿದೆ. ಮಾರ್ಗಶಿರ್ಷ ಶುಕ್ಲ ಪಕ್ಷ ಏಕಾದಶಿಯೆಂದು ಬರುವ ಗೀತಾ ಜಯಂತಿ ಕೃಷ್ಣನು ಅರ್ಜುನನಿಗೆ ಶ್ರೀ ಮದ್ ಭಗವದ್ಗೀತೆಯ ಉಪದೇಶ ಮಾಡಿದ ದಿನ. ಭಗವಾನ್ ಕೃಷ್ಣನ ತತ್ವದ ಬಣ್ಣವು ಯೋಗ ಮಾರ್ಗಕ್ಕೆ ಅನುಗುಣವಾಗಿ ಭಿನ್ನವಾಗಿರುತ್ತದೆ. ಭಕ್ತಿ ಮಾರ್ಗದ ಪ್ರಕಾರ ಶ್ರೀ ಕೃಷ್ಣನ ತತ್ತ್ವದ ಬಣ್ಣವು ನಿಲಿಯಾಗಿರುತ್ತದೆ. ಜ್ಞಾನ ಮಾರ್ಗದ ಪ್ರಕಾರ ಹಳದಿಯಾಗಿರುತ್ತದೆ. ಕರ್ಮಮಾರ್ಗದ ಪ್ರಕಾರ ಕೃಷ್ಣನ ತತ್ವದ ಬಣ್ಣ ಹಳದಿ ಕೇಸರಿ ಬಣ್ಣದ್ದಾಗಿದೆ. ಕೃಷ್ಣನಿಗೆ ಪ್ರಿಯವಾದ ನೈವೇದ್ಯ ಬೆಣ್ಣೆ, ಮೊಸರವಲಕ್ಕಿ. ಶಿರಾ ಶ್ರೀ ಕೃಷ್ಣನ ಪ್ರಿಯವಾದ ತಿನಿಸುಗಳು. ಉತ್ತರ ಭಾರತದಲ್ಲಿ ವಿವಿಧ ದೇವಾಲಯಗಳಲ್ಲಿ 56 ಭೋಗಗಳನ್ನು (ವಿವಿಧ ಸಿಹಿತಿಂಡಿಗಳು)ಶ್ರೀ ಕೃಷ್ಣನಿಗೆ ಅರ್ಪಿಸಲಾಗುತ್ತದೆ. ಶ್ರೀ ಕೃಷ್ಣನ ಆಯುಧಗಳು: ಸುದರ್ಶನ ಚಕ್ರ ಮತ್ತು ಪಾಂಚ ಜನ್ಯವೆಂಬ ಶಂಖ ಅವನ ಆಯುಧಗಳು. ಕೊಳಲು ಭಗವಾನ್ ನೆಚ್ಚಿನ ವಾದ್ಯವಾಗಿದೆ. ಶ್ರೀ ಕೃಷ್ಣನ ದೇವಾಲಯಗಳು, ಗೋಕುಲ,ವೃಂದಾವನ, ಮಧುರೆ, ದ್ವಾರಕೆ ಮತ್ತು ಜಗನ್ಮಾಥಪುರಿ ಭಗವಾನ್ ಕೃಷ್ಣನಿಗೆ ಸಂಬಂದಿಸಿದ ದೇವಾಲಯಗಳು. ಅದರಲ್ಲಿ ಕೇರಳದ ಗುರುವಾಯುರ್ ದೇವಸ್ಥಾನ, ಉಡುಪಿಯ ಶ್ರೀ ಕೃಷ್ಣನ ದೇವಸ್ಥಾನ ಇವು ಕೃಷ್ಣನ ಜಾಗೃತ ದೇವಾಲಯಗಳು. ಕೃಷ್ಣನ ವಿವಿಧ ನಾಮಗಳು ಕನ್ಹಯ್ಯ, ಕಾನ್ಹಾ, ಶಾಮ ಸುಂದರ, ಮುರಳೀಧರ, ಗಿರಿದರ, ಕೇಶವ, ಮಾದವ, ಮೋಹನ, ಮನಮೋಹನ, ಬನ್ಸಿವಾಲಾ, ಮಖಾಂಚೋರ, ರಾದೇಶ್ಯಾಮ, ಗೋವಿಂದ, ಗೋಪಾಲ, ಮುರಾರಿ, ಕೃಷ್ಣ, ದೇವಕಿನಂದನ, ಯಶೋದಾನಂದನ, ನಂದನಂದನ, ವಾಸುದೇವ, ದ್ವಾರಕಾದೀಶ, ತ್ರಿಲೋಕನಾಥ, ಬಾಂಕೆಬಿಹಾರಿ, ಚಕ್ರದರ, ನಂದಾಕಿಶೋರ, ಲಡ್ಡುಗೋಪಾಲ, ಮುಂತಾದ ಅನೇಕ ಹೆಸರು ಪಡೆದ 14 ಲೋಕದ ಒಡೆಯ ಶ್ರೀ ಕೃಷ್ಣ ಪರಮಾತ್ಮ. ದೇವಕಿ, ಯಶೋದಾ ಮತ್ತು ನಂದರಾಜರ ಮಗನಾಗಿ ಅವನಿಗೆ ಕ್ರಮವಾಗಿ ದೇವಕಿನಂದನ, ಯಶೋದಾನಂದನ, ಮತ್ತು ನಂದನಂದನ ಎಂಬ ಹೆಸರುಗಳು ಬಂದವು. ವಸುದೇವ ಶ್ರೀ ಕೃಷ್ಣನ ಜನ್ಮ ತಂದೆ ದೇವಕಿ ಜನ್ಮ ನೀಡಿದ ತಾಯಿ, ವಸುದೇವನು ಶ್ರೀ ಕೃಷ್ಣನನ್ನು ಮಥುರೆಯಿಂದ ಗೋಕುಲಕ್ಕೆ ಕರೆದೋಯ್ದಾಗ ನಂದರಾಜ ಮತ್ತು ಯಶೋದೆ ಶ್ರೀ ಕೃಷ್ಣನ ಪಾಲನೆ ಪೋಷಣೆ ಮಾಡಿದರು. ಆದ್ದರಿಂದ ಯಶೋದಾ ಶ್ರೀ ಕೃಷ್ಣನ ಸಾಕು ತಾಯಿ ಮತ್ತು ನಂದರಾಜ ಸಾಕು ತಂದೆಯಾದರು. ಆದ್ದರಿಂದ ಶ್ರೀ ಕೃಷ್ಣನು ವಸುದೇವ, ದೇವಕಿ, ಯಶೋದಾ ಮತ್ತು ನಂದರಾಜರ ಮಗನು ಆಗಿದ್ದನು. ಶ್ರೀ ಕೃಷ್ಣನ ಜನ್ನ ನೀಡಿದ ತಂದೆಯ ಹೆಸರು ವಸುದೇವ, ವಸುದೇವನ ಮಗನಾಗಿ ಅವನನ್ನು ' ವಾಸುದೇವ'ಯೆಂದು ಕರೆಯಲಾಗುತ್ತದೆ. ವಸುದೇವನ ಮಗನಾಗಿವದರಿಂದ 'ವಸುದೇವ ಸುತ' ಎಂದು ಕರೆಯಲಾಗುತ್ತಿದೆ. ಗೋಪಾಲ : ಶ್ರೀ ಕೃಷ್ಣನು ಗೊಲ್ಲನಾಗಿ ಸಹಸ್ರಾರು ಹಸುಗಳನ್ನು ರಕ್ಷಿಸಿದ್ದರಿಂದ ಅವನಿಗೆ ಗೋಪಾಲ ಎಂಬ ಹೆಸರು ಬಂದಿದೆ. ಗೋವಿಂದ ಭಗವಾನ ಶ್ರೀ ಕೃಷ್ಣನನ್ನು ಗೋವಿಂದ ಎಂದು ಕರೆಯಲಾಗುತ್ತಿದೆ ಏಕೆಂದರೆ ಪ್ರತಿಯೊಂದು ಪ್ರಾಣಿಯ ಹೃದಯದಲ್ಲಿ ಕೃಷ್ಣನ ಆನಂದದ ರೂಪದಲ್ಲಿ ವಾಸಿಸುತ್ತಾನೆ. ಹೃಷಿ ಕೇಶ ಶ್ರೀ ಕೃಷ್ಣನು ಎಲ್ಲರ ಇಂದ್ರಿಯಗಳ ಅಂತಿಮ ಮಾರ್ಗದರ್ಶಿ, ಅದಕ್ಕಾಗಿಯೇ ಅವರನ್ನು' ಹೃಷಿಕೇಶ' ಎಂದು ಕರೆಯಲಾಗುತ್ತದೆ. ಶ್ರೀ ಕೃಷ್ಣ ಪರಮಾತ್ಮನು ತನ್ನ ಬಾಯಲ್ಲಿ ಈಡಿ ಬ್ರಹ್ಮಾoಡವನ್ನೇ ತೋರಿಸಿದ ಅಖಿಲಾಂಡ ಕೋಟಿ ಬ್ರಹ್ಮಾoಡ ನಾಯಕ ಶ್ರೀ ಕೃಷ್ಣ ಜನ್ಮಾಷ್ಠಮಿಯ ಶತಕೋಟಿ ನಮಸ್ಕಾರಗಳು. ಲೇಖನ ಮುರಿಗೆಪ್ಪ ಬಸಪ್ಪ ಮಾಲಗಾರ.ಸಮಾಜ ಸೇವಕ, ಸಾ. ಹಳ್ಳೂರ ಮೊಬೈಲ್ 9341928214.