ಹಳ್ಳೂರ :19: ಗ್ರಾಮದಲ್ಲಿ ಹಿಂದುಗಳೇ ಮುಂದೆ ನಿಂತು ಆಚರಿಸುವ ಮೂಲಕ ಬಾವೈಕ್ಯ ಮೆರೆಯುತ್ತಿದ್ದಾರೆ.ಪಿರಸಾಬ ದರ್ಗಾ ಪೂಜೆಯನ್ನು ಮುಸ್ಲಿಂರು ಮಾಡಿ ಇನ್ನುಳಿದ ಹಬ್ಬದ ಸಿದ್ಧತೆಯನ್ನು ಹಿಂದುಗಳೇ ನೆರವೇರಿಸುತ್ತಾರೆ. ಭಕ್ತರ ದಂಡು ಹರಿದು ಬರುವುದು ಕಂಡುಬರುತ್ತಿದೆ. ಹಿಂದೂ ಮುಸ್ಲಿಂರ ಬಾವೈಕ್ಯತೆಯ ಹಬ್ಬ ಮೊಹರಂ ಹಬ್ಬವನ್ನು ಎಲ್ಲರೂ ಕೂಡಿಕೊಂಡು ಅತೀ ಸರಳವಾಗಿ ಆಚರಣೆಯನ್ನು ಮಾಡಲಾಯಿತು. ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಬೇಡಿಕೊಳ್ಳುತ್ತಾರೆ. ಬಯಕೆ ಈಡೇರಿಸಿದ್ದಕ್ಕೆ ಹರಕೆ ತೀರಿಸಲು ಬಂದು ಡೋಲಿಮೇಲೆ ಬೆಂಡು ಬೆತ್ತಾಸು ಹಾರಿಸುತ್ತಿದ್ದರು. ಬೇಡಿಕೊಂಡ ಇಷ್ಟಾರ್ಥಗಳನ್ನು ಈಡೇರಿಸುವ ದೈವಿಶಕ್ತಿ ಇಲ್ಲಿದೆ ಎಂದು ಭಕ್ತರು ನಂಬುತ್ತಾರೆ ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.ಬೆದವಿಲ್ಲದೆ ಗ್ರಾಮಸ್ಥರೆಲ್ಲ ಗುರುವಾರದಂದು ಪಿರಸಾಭ ದರ್ಗಾದಿಂದ ಗ್ರಾಮದ ಪ್ರಮುಖ ಬಿದಿಗಳಲ್ಲಿ ಲಾಲಸಾಬ ಮತ್ತು ಡೋಲಿಯನ್ನು ಹೊತ್ತುಕೊಂಡು ಭಕ್ತರು ಬೇದಬಾವವಿಲ್ಲದೆ ಲೇಜಿಮ್ ಆಡುವದು,ಕರ್ಬಲ, ವಿವಿಧ ಕಲಾತಂಡಗಳು ಕುದರಿ ಕುಣಿತ, ಹುಲಿ ವೇಷ ಧರಿಸಿ ಹಾಗೂ ವಿವಿಧ ವಾದ್ಯಮೇಳ, ಆಲಿ ಆಡುವದು ಶ್ರೀ ಬಸವೇಶ್ವರ ದರ್ಶನ ಮಾಡಿಕೊಂಡು ಗ್ರಾಮದ ಅಮಖಾನ ಬಾವಿಗೆ ಹೋಗಿ ಕಾರ್ಯಕ್ರಮ ಮಂಗಲಗೊಳ್ಳುವದು, ಡೋಲಿಯನ್ನು ಹೊತ್ತುಕೊಂಡವರು ಲಾಲಸಾಬ ಮುಜಾವರ ಕಾರ್ಯಕ್ರಮದಲ್ಲಿ ಹಿಂದೂ ಮುಸ್ಲಿಂ ಬಾಂದವರು ಉಪಸ್ಥಿತರಿದ್ದರು.

Social Plugin