ಹಳಿಂಗಳಿ ಗುಡ್ಡದ ಪ್ರದೇಶದಲ್ಲಿ ತಮದಡ್ಡಿ ಗ್ರಾಮಸ್ಥರಿಗೆ ಪುನರ್ ವಸತಿ ಕಲ್ಪಿಸಲು ಸರಕಾರ ನೀಡಿರುವ ೮೯ ಎಕರೆ ೩೪ ಗುಂಟೆ ಜಾಗವನ್ನು ಹಳಿಂಗಳಿ ಗ್ರಾಮಸ್ಥರಿಗೆ ನೀಡಬೇಕು. ತಮದಡ್ಡಿ ಗ್ರಾಮಸ್ಥರಿಗೆ ಬೇರೆ ಜಾಗ ನೀಡಬೇಕೆಂದು ಒತ್ತಾಯಿಸಿ ಹಳಿಂಗಳಿ ಗುಡ್ಡದ ಪ್ರದೇಶದಲ್ಲಿ ಆ. ೪ರಂದು ಧರಣಿ ಕುಳಿತಿದ್ದ ಹಳಿಂಗಳಿ ಗ್ರಾಮದ ಮುಖಂಡ ರಾಜು ನಂದೆಪ್ಪನವರ, ಗ್ರಾಪಂ ಉಪಾಧ್ಯಕ್ಷ ಪ್ರದೀಪ ನಂದೆಪ್ಪನವರ ಸೇರಿದಂತೆ ೪೩ ಜನರ ಮೇಲೆ ಅಧಿಕಾರಿಗಳಿಗೆ ಸೀಮೆ ಎಣ್ಣೆ ಎರುಚಿ ಕೊಲೆ ಮಾಡಲು ಯತ್ನಿಸಿದ ಆರೋಪದಡಿ ಪ್ರಕರಣ ದಾಖಲಾಗಿತ್ತು. ದಿನಾಂಕ ೧೭ರಂದು ಜಾಮೀನಿನ ಮೇಲೆ ಆರೋಪಿತರು ಬಿಡುಗಡೆಯಾದ ಹಿನ್ನೆಲೆಯಲ್ಲಿ ಹಳಿಂಗಳಿ ಗ್ರಾಮಸ್ಥರು ಅದ್ಧೂರಿಯಾಗಿ ಗ್ರಾಮಕ್ಕೆ ಸ್ವಾಗತ ಮಾಡಿಕೊಂಡರು.
Social Plugin