ವರದಿ : ಮಲ್ಲಿಕಾರ್ಜುನ ಘೋಸರವಾಡ.
ಘಟಪ್ರಭಾ : ಗೋಕಾಕ ಸಮೀಪದ ಲೋಳಸೂರ ಬ್ಯಾಳಿ ಬಸವನ ದೇವಸ್ಥಾನದ ಬಳಿ ಅತಿ ವೇಗವಾಗಿ ಬರುತ್ತಿದ್ದ ಸ್ವಿಫ್ಟ್ ಕಾರೊಂದು 2 ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ 3 ಜನ ಮೃತಪಟ್ಟ ದುರ್ಘಟನೆ ನಡೆದಿದೆ.
ಗೋಕಾಕದಿಂದ ಹುಣಶ್ಯಾಳದ ಕಡೆ ಹೊರಟಿದ್ದ, ಎರಡು ಬೈಕ್ ಗಳಿಗೆ ಎದುರಿಗೆ ಮೂಡಲಗಿಯಿಂದ ಗೋಕಾಕ ಕಡೆ ಬರುತ್ತಿದ್ದ ಸ್ವೀಪ್ಟ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸೇರಿದಂತೆ ಮೂವರು ದುರ್ಮರಣಕ್ಕಿಡಾಗಿದ್ದಾರೆ.
ಮೃತ ದುರ್ದೈವಿಗಳನ್ನು ಹುಣಶ್ಯಾಳದ ನಾಗಪ್ಪ ಮಗ್ಯಾಪ್ಪಗೋಳ, ಗೋಪಾಲ ಮತ್ನಾಳ ಎಂದು ಗುರುತಿಸಲಾಗಿದ್ದು, ಮೃತ ಮಹಿಳೆಯ ಬಗ್ಗೆ ಇನ್ನಷ್ಟೆ ಮಾಹಿತಿ ಸಿಗಬೇಕಿದೆ.
ಸ್ವಿಫ್ಟ್ ಕಾರಿನ ಚಾಲಕ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುತ್ತಿದ್ದ ಎಂದು ಹೇಳಲಾಗುತ್ತಿದ್ದು, ಘಟನೆ ನಡೆದ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾನೆ. ಇನ್ನೂ, ಸ್ಥಳದಲ್ಲಿಯೇ ಮೂವರ ಕಾಲುಗಳು ತುಂಡುತುಂಡಾಗಿವೆ. ಮೃತರೆಲ್ಲರೂ ಹುಣಶ್ಯಾಳ ಗ್ರಾಮದವರು ಎನ್ನಲಾಗುತ್ತಿದೆ. ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರನ್ನು ಆಸ್ಪತ್ರೆಗೆ ಸೇರಿಸುವ ಮಾರ್ಗಮಧ್ಯೆ ಮೃತರಾಗಿದ್ದಾರೆ.
ಘಟಪ್ರಭಾ ಪೊಲೀಸರು ಪ್ರಾಥಮಿಕ ತನಿಖೆಯನ್ನು ನಡೆಸುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Social Plugin