ಕಾಯಕ ಯೋಗಿ ನೂಲಿ ಚಂದಯ್ಯನವರ 914ನೇ ಜಯಂತೋತ್ಸವ ಆಚರಣೆ,
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯಮಟ್ಟದ ಪುರಸ್ಕಾರ,
ಕೋರಮ ಸಮಾಜಕ್ಕೆ ನಿಗಮ ಮಂಡಳಿ ಸ್ಥಾಪನೆ ಮಾಡುವುದು ಅವಶ್ಯಕವಾಗಿದೆ: ರಾಮಜೀ ಭಜಂತ್ರಿ
ಮುಗಳಖೋಡ: ಅನಾದಿ ಕಾಲದಿಂದಲೂ ತುಳಿತಕ್ಕೆ ಒಳಗಾಗಿರುವ ಕೊರಮ ಸಮಾಜಕ್ಕೆ ಇಗಲೂ ನ್ಯಾಯ ಸಿಗುತ್ತಿಲ್ಲ, ಹಲವಾರು ಸಮಾಜದ ನಿಗಮ ಮಂಡಳಿಗಳು ಸ್ಥಾಪನೆ ಆಗಿದ್ದರೂ ಸಹ ಕೊರಮ ಸಮಾಜವನ್ನು ಕಡೆಗಾಣಿಸಿರುವುದು ವಿಷಾಧನೀಯ ಎಂದು ಕೊರಮ ಸಮಾಜದ ಬೆಳಗಾವಿ ಜಿಲ್ಲಾಧ್ಯಕ್ಷ ರಾಮಜೀ ಭಜಂತ್ರಿ ಹೇಳಿದರು.
ಕೊರಮ ಸಮಾಜದ ವತಿಯಿಂದ ಪಟ್ಟಣದಲ್ಲಿ ಕಾಯಕ ಯೋಗಿ ನೂಲಿ ಚಂದಯ್ಯನವರ 914ನೇ ಜಂಯತ್ಸೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಸಮಾಜ ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸಧೃಡವಾಗಬೇಕಾದರೆ ಶಿಕ್ಷಣ ಅತ್ಯವಶ್ಯಕ ಎಂದರು.
ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದ ಶಿಕ್ಷಕ ರವೀಂದ್ರ ಕಬ್ಬೂರ ಮಾತನಾಡಿ 12ನೇ ಶತಮಾನದ ಎಲ್ಲ ಶರಣರು ದಾಸೋಹ, ಪ್ರಸಾದ ಹಾಗೂ ಸತ್ಯಶುದ್ಧ ಕಾಯಕ ಮಾಡಿ ಎಲ್ಲ ಸಮೂದಾಯಕ್ಕೂ ಸದಾ ಲೇಸನ್ನೇ ಬಯಸಿ ತಮ್ಮ ಜೀವನ ಸಂಕ್ಷ್ಟದಲ್ಲಿದ್ದರು ಕಲ್ಯಾಣದಲ್ಲಿ ಕ್ರಾಂತಿ ಮಾಡಿದ ನೂಲಿ ಚಂದಯ್ಯನವರ ತತ್ವ ಮತ್ತು ಆದರ್ಶ ಗುಣಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಪತ್ರಕರ್ತ ಹಾಗೂ ಸಾಹಿತಿ ಚಿದಾನಂದ ಐಹೊಳೆ ಬಸವಾದಿ ಪ್ರಮಥರ ಕಲ್ಯಾಣದ ಶರಣ ಪರಂಪರೆಯ ಎಲ್ಲ ಶರಣರು ಸಮಾನ ಮನಸ್ಕರರಾಗಿ ತಮ್ಮ ಜೀವನವನ್ನು ಸಾಗಿಸಿಕೊಂಡು ಹೋಗುವುದರೊಂದಿಗೆ ಅವರು ಇಂದಿಗೂ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದ್ದಾರೆ. ಬಸವಣ್ಣನವರನ್ನು ಸೇರಿದಂತೆ ಎಲ್ಲ ಶರಣರ ಜಯಂತಿಯನ್ನು ಏಕ ಕಾಲದಲ್ಲಿ ಆಚರಣೆ ಮಾಡುವುದರಿಂದ ಅಂದಿನ ಬಸವಣ್ಣನವರ ಕಲ್ಯಾಣದ ಅನುಭವ ಪಂಟದ ಕಳೆ ಇಂದು ನೋಡಲು ಸಾಧ್ಯ ಎಂದರು.
ಕಾರ್ಯಕ್ರಮದ ದಿವ್ಯ ಸಾನಧ್ಯವಹಿಸಿ ಮಾತನಾಡಿ ಬೆಂಗಳೂರಿನ ಮುತ್ತೇಶ್ವರ ಸ್ವಾಮೀಜಿ ಸಚ್ಚಾರಿತ್ರ್ಯವಂತರು ನಾವಾದರೆ ನಾವು ಸಹ ಪೂಜ್ಯನೀಯರಾಗಲೂ ಸಾಧ್ಯ. ಸಾಧಕನಿಗೆ ಸಧೃಡವಾದ ಶರೀರದೊಂದೊಗೆ ನಿಶ್ಚಲವಾದ ಮನಸ್ಸು ಇರಬೇಕು. ಮೌಢ್ಯ ಮುಕ್ತ ಸಮಾಜ ನಿರ್ಮಾಣ ಮಾಡಬೇಕಾದರೆ ಎಲ್ಲರೂ ಸುಶಿಕ್ಷಿತರಾಗಿ ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡಬೇಕು ಎಂದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕೊರಮ ಸಮಾಜದ ವತಿಯಿಂದ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮುಂಜಾನೆ ಕಾಯಕಯೋಗಿ ನೂಲಿ ಚಂದಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮವನ್ನು ಜ್ಯೋತಿ ಪ್ರಜ್ವಲನೆಯೊಂದಿಗೆ ಮುತ್ತೇಶ್ವರ ಸ್ವಾಮೀಜಿ ಚಾಲನೆ ನೀಡಿದರು. ದಾಸೋಹದ ಮಹಾಮನೆಯಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಮುಖ್ಯ ಅತಿಥಿಗಳಾಗಿ ಅನೀಲ ಕೊರವಿ, ನಿಂಗಪ್ಪ ಕಡಕಭಾವಿ, ಮಹಾದೇವ ಭಂಜತ್ರಿ, ಶಿವಲಿಂಗ ಯರಡತ್ತಿ, ಬಸು ಯರಡತ್ತಿ, ಯಲ್ಲಪ್ಪ ಭಂಜತ್ರಿ, ರಾಜು ನಾಯಕ, ಭೀಮಪ್ಪ ಭಜಂತ್ರ, ರಾಜಪ್ಪ ಶಿರಗುರ, ರಾಮಪ್ಪ ಭಜಂತ್ರಿ, ಸದಾಶಿವ ಭಜಂತ್ರಿ, ಹಣಮಂತ ಕಡಕಭಾವಿ, ಪ್ರವೀಣ ಭಜಂತ್ರಿ, ಬಸವಂತ ಭಜಂತ್ರಿ ಹಾಗೂ ಮಾರುತಿ ಭಜಂತ್ರಿ ಇದ್ದರು. ಕಾರ್ಯಕ್ರಮದ ನಿರೂಪಣೆಯನ್ನ ಶಿಕ್ಷಕ ಯಲ್ಲಪ್ಪ ಭಜಂತ್ರಿ ನೇರವೇರಿಸಿದರು. ಶಿಕ್ಷಕ ಷಣುಖ ನಾವಿ ಸ್ವಾಗತಿಸಿ ವಂದಿಸಿದರು.
ಜ್ಯೋತಿ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸುತ್ತಿರುವ ಪೂಜ್ಯರು ಹಾಗೂ ಗಣ್ಯರು.
-----------------------------------------------------

Social Plugin