ಬಂಡಿಗಣಿ 15:ಬೇರೆಯವರ ಸೀಮೆಯನ್ನು ಅನ್ಯಾಯವಾಗಿ ಒತ್ತುವರಿ ಮಾಡಬೇಡಿರಿ ನಿಮ್ಮ ನ್ಯಾಯವನ್ನು ಕೋರ್ಟು ಕಚೇರಿಗೆ ಹೋಗಿ ಹಣ ವ್ಯರ್ಥ ಮಾಡಿ ಜೀವನ ಹಾಳುಮಾಡಿಕೊಳ್ಳದೆ ಗ್ರಾಮದ ಸತ್ಯದಿಂದ ಹಿರಿತನ ಮಾಡುವರ ಸಮ್ಮುಖದಲ್ಲಿ ನ್ಯಾಯವನ್ನು ಬಗೆಹರಿಸಿಕೊಳ್ಳಿ.
 ಹಿಂದೆ ರಾಜರು ಸತ್ಯಕ್ಕೆ ನ್ಯಾಯವನ್ನು ಒದಗಿಸಿಕೊಡುತ್ತಿದ್ದರು. ನ್ಯಾಯ ಮಾಡುವಾಗ, ಹಣದ ಆಸೆ ಮಾಡದೆ ಜಾತಿ, ರಕ್ತ ಸಂಬಂಧ,ಅಧಿಕಾರ ಯಾವದನ್ನು ಹಿಡಿಯದೆ ಸತ್ಯ ಧರ್ಮದಿಂದ ಹಿರಿತನ ಮಾಡಿದವರಿಗೆ ದೇವರ ಒಲುಮೆಯಾಗಿ ತಮ್ಮ ಜೀವನ ಸುಖವಾಗಿರುತ್ತದೆ ಎಂದು ಬಂಡಿಗಣಿಯ ಚಕ್ರವರ್ತಿ ದಾನೇಶ್ವರ ಶ್ರೀಗಳು ಹೇಳಿದರು. ಅವರು ಹುಕ್ಕೇರಿ ತಾಲ್ಲೂಕಿನ ಅಮ್ಮನಗಿ ಹನುಮಾನ, ಹಾಗೂ ಬಸ್ತವಾಡ ಕಾಡಸಿದ್ದೇಶ್ವರ ದೇವಸ್ಥಾನ ಮತ್ತು ಇಂಗಳಗಿ ಹನುಮಾನ ದೇವಸ್ಥಾನದಲ್ಲಿ ನಡೆದ ಪಾರಮಾರ್ಥಿಕ ಸಪ್ತಾಹದಲ್ಲಿ ಮಾತನಾಡಿ ದೇವಸ್ಥಾನಗಳಲ್ಲಿ ಪೂಜೆ ಮಾಡುವ ಅರ್ಚಕರು ಅಖಂಡ ದೇವರ ನಾಮಸ್ಮರಣೆ ಮಾಡುತ್ತಾ ಆಸೆ ಭಾವನೆ ಬಿಟ್ಟು, ಶುದ್ಧ ಮನಸ್ಸಿನಿಂದಯಿದ್ದು ಯಾವದೇ ವ್ಯಸನವನ್ನು ಮಾಡದೆ ದೇವರನ್ನು ಭಕ್ತಿಯಿಂದ ಪೂಜಿಸಬೇಕು. ದುರ್ಮಾರ್ಗ ಬಿಟ್ಟು ಸನ್ಮಾರ್ಗದಲ್ಲಿ ಸಾಗಿ ಭಕ್ತಿ ಮಾಡುತ್ತಾ ಜೋಗಿ ಜಂಗಮರಿಗೆ ದಾನ ಧರ್ಮ ಮಾಡಿದರೆ ಮಾರ್ಕಂಡಯ್ಯನ ಆಯುಷ್ಯ ಹೆಚ್ಚಾದಂತೆ ನಿಮ್ಮ ಆಯುಷ್ಯ ವೃದ್ಧಿಯಾಗಿ ಮಾಟ ಮಂತ್ರ, ಭೂತ ಪಿಶಾಚಿ ಸನಿಹ ಬರುವದಿಲ್ಲ.ಮಹಾತ್ಮರ ದರ್ಶನ ಸ್ಪರ್ಶನದಿಂದ ಭವ ಬಂಧನ ಬಿಡುಗಡೆಯಾಗಿ ಶರೀರ ಮಾಂಸ ಪಿಂಡ ಹೋಗಿ ಮಂತ್ರಪಿಂಡವಾಗಿ ಮಾನವ ಜನ್ಮ ಸಪಲತೆಯಾಗುವುದು. ಶ್ರೀ ಕೃಷ್ಣ ಪರಮಾತ್ಮ ಸಾಕ್ಷಾತ ದೇವರಿದ್ದರೂ ಭಕ್ತರು ಊಟ ಮಾಡಿದ ಪತ್ರೊಳ್ಳಿ ತಗೆಯುವ ಸೇವೆ ಮಾಡುತ್ತಿದ್ದರು. ದೇಹದಲ್ಲಿ ಶಕ್ತಿ ಇದೆ ಅಂಥ ಬಲಹಿನರ, ಬಡವರ ಮೇಲೆ ದರ್ಪ ತೋರಿ ಅನ್ಯಾಯ ಮಾಡಬೇಡಿರಿ. ಶಕ್ತಿಯಿದ್ದಾಗ ದೇಶ,ಸೇವೆ ಧಾರ್ಮಿಕ ಕೆಲಸ ಕಾರ್ಯಗಳನ್ನು ಸಾದಾಕಾಲ ನಿಷ್ಠೆಯಿಂದ ಮಾಡಿ ಪುಣ್ಯ ಪಡೆದುಕೊಳ್ಳಿರಿ ಎಂದು ಹೇಳಿದರು. ಪವನ ರಮೇಶ ಕತ್ತಿ ಜಿಲ್ಲಾ ಪ ಸದಸ್ಯ ಮಾತನಾಡಿ ಆಸ್ತಿ ಅಧಿಕಾರವಿದ್ದರೂ ಜೀವನ ಸುಖವಾಗಿರಬೇಕಾದರೆ ಮಹಾತ್ಮರ ಮಾರ್ಗದರ್ಶನ ಅವಶ್ಯಕತೆಯಿದೆ. ದಾನೇಶ್ವರ ಪೂಜ್ಯರು ಹಳ್ಳಿಹಳ್ಳಿಗೆ ಸಪ್ತಾಹ ದಾಸೋಹ ನಡೆಸಿ ಭಕ್ತರನ್ನು ಉದ್ದಾರಮಾಡಿ ಲೋಕದ ಕಲ್ಯಾಣ ಮಾಡುವ ಶ್ರೀಗಳ ಕಾರ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ನಾವು ಕೂಡಾ ಸಹಾಯ ಸಹಕಾರ ನಿಡೋಣಾ ಎಂದು ಹೇಳಿದರು. ಇದೆ ಸಂದರ್ಭದಲ್ಲಿ ಸುರೇಶ ಕುಲಕರ್ಣಿ.ಭೀಮಪ್ಪ ನಾಗನೂರೆ. ಬಾಳಾಸಾಹೇಬ ಜಾದವ. ಶ್ರೀಶೈಲ ಪೂಜೇರಿ. ಬಸಯ್ಯ ಪೂಜೇರಿ. ಶ್ರೀಶೈಲ ಪೂಜೇರಿ. ಕಾಡಗೌಡ ಪಾಟೀಲ.ಮಲ್ಲಪ್ಪ ಗುಜನಾಳೆ. ದಸಿದಗೌಡ ಪಾಟೀಲ. ಭೀಮಪ್ಪ ಬಸರಗಿ ಸೇರಿದಂತೆ ಅಮ್ಮನಗಿ, ಬಸ್ತವಾಡ, ಇಂಗಳಗಿ, ಬಂಡಿಗಣಿ ಮಠದ ಸದ್ಭಕ್ತರಿದ್ದರು.