ಬೆಳಗಾವಿ: ಅನಧಿಕೃತವಾಗಿ ಪಾನ್ ಶಾಪ್ ನಡೆಸುತ್ತಿದ್ದ ವ್ಯಕ್ತಿಯನ್ನ ಭಯ ಬೀಳಿಸಿ, ಹಣದ ಬೇಡಿಕೆಯಿಟ್ಟಿದ್ದ ಚಿಕ್ಕೋಡಿಯ ಸದಲಗಾ ಪೊಲೀಸ್ ಠಾಣೆಯ ಪಿಎಸ್ಐ ಆ್ಯಂಡ್ ಗ್ಯಾಂಗ್ ಎಸಿಬಿ ಬಲೆಗೆ ಬಿದ್ದಿದೆ.
ಸದಲಗಾ ಪೊಲೀಸ್ ಠಾಣೆಯ ಪಿಎಸ್ಐ ಕುಮಾರ ಹಿತ್ತಮನಿ ಮತ್ತು ಇಬ್ಬರು ಪೇದೆಗಳಾದ ಶ್ರೀಶೈಲ ಗಡ್ಡಿ ಮತ್ತು ಬಂಗಿ ಎನ್ನುವವರು ಹಣ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
ರಾಜು ಪಚ್ಚಾಪೂರೆ ಎಂಬುವವರೇ ಪಾನ್ ಶಾಪ್ ನ್ನ ಹೊಸದಾಗಿ ತೆಗೆದಿದ್ದರು. ಅನಧಿಕೃತವಾಗಿ ಅಂಗಡಿ ತೆಗೆಯಲಾಗಿದೆ ಎಂದು 50 ಸಾವಿರ ರೂಪಾಯಿ ಬೇಡಿಕೆಯಿಟ್ಟಿದ್ದ ಪಿಎಸ್ಐ ಗ್ಯಾಂಗ್, ತಾವೇ ಕಂಬಿ ಎಣಿಸುವಂತಾಗಿದೆ.
ಎಸಿಬಿ ಎಸ್ಪಿ ಬಿ.ಎಸ್.ನೇಮಗೌಡ, ಡಿಎಸ್ಪಿ ಜಿ.ಎಂ.ಕರುಣಾಕರಶೆಟ್ಟಿ ಮಾರ್ಗದರ್ಶನದಲ್ಲಿ ಸಿಪಿಐಗಳಾದ ಶೇಖ ಅಲಿ, ಅಡಿವೇಶ ಬೂದಿಗೊಪ್ಪ, ಪಿಎಸ್ಐ ಸುನೀಲ ನೇತೃತ್ವದಲ್ಲಿ ದಾಳಿ ಮಾಡಲಾಗಿತ್ತು.

Social Plugin