ದೇವಸ್ಥಾನ ಗರ್ಭಗುಡಿಯಲ್ಲಿ ನೇಣುಬಿಗಿದು ಅರ್ಚಕ ಆತ್ಮಹತ್ಯೆ...
ವರದಿ : ಮಲ್ಲಿಕಾರ್ಜುನ ಘೋಸರವಾಡ.

ಬೆಳಗಾವಿ ಜಿಲ್ಲಾ :ಹುಕ್ಕೇರಿ ನಗರದ ಲಕ್ಕವ್ವಾ ದೇವಸ್ಥಾನದ ಗರ್ಭ ಗುಡಿಯಲ್ಲಿ ಅರ್ಚಕ ಓರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.
ಹುಕ್ಕೇರಿ ಪಟ್ಟಣದ ಹಳ್ಳದಕೇರಿ ಭಾಗದ ಲಕ್ಷ್ಮಿ, ಲಕ್ಕವ್ವಾ ದೇವಸ್ಥಾನದ ಪೂಜಾರಿ 35 ವರ್ಷದ ಅಶೋಕ ಪೂಜೇರಿ ಕುಡಿತದ ದಾಸನಾಗಿದ್ದನು, ಕುಡಿದ ಅಮಲಿನಲ್ಲಿ ದೇವಸ್ಥಾನದ ಗರ್ಭಗುಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಮೃತನಿಗೆ ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಇದ್ದಾರೆ.

ಸ್ಥಳಕ್ಕೆ ಹುಕ್ಕೇರಿ ಪಿಎಸ್‍ಆಯ್ ಸಿದ್ರಾಮಪ್ಪಾ ಉನ್ನದ, ಸಿಬ್ಬಂದಿಗಳಾದ ರವಿ ಢಂಗ, ಜಿ.ಬಿ.ನಾಗನ್ನವರ, ಮುಸಾ ಅತ್ತಾರ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.