ಆರೋಗ್ಯವಂತ ಬದುಕಿಗೆ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಲು ಪ್ರತಿಯೊಬ್ಬರೂ ಮುಂದಾಗಬೇಕೆಂದು ಭಾರತ ಗ್ಯಾಸ್ ವಿತರಕ ಸೋಮಶೇಖರ ಕೊಟ್ರಶೆಟ್ಟಿ ತಿಳಿಸಿದರು.
ರಬಕವಿ ಹೊಸ್ ಬಸ್ ನಿಲ್ದಾಣದ ಆವರಣದಲ್ಲಿ ಸ್ವಚ್ಛಗೊಳಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಲಾಕ್‌ಡೌನ್ ಸಂದರ್ಭದಲ್ಲಿ ಬಸ್‌ಗಳ ಸಂಚಾರ ಇಲ್ಲದೆ ನಿಲ್ದಾಣದ ಆವರಣದಲ್ಲಿ ಗಿಡಗಂಟಿ ಕಸ ಕಡ್ಡಿ ಬಿದ್ದಿದ್ದು, ಅದನ್ನು ಭಾರತ ಗ್ಯಾಸ್ ಸಿಬ್ಬಂದಿ ಸ್ವಚ್ಛ ಗೊಳಿಸಿದರು.
ಸಂಗಮೇಶ ಗುಣಕಿ, ನಿರಂಜನ ಜುಗಳಿ, ಲಕ್ಷಿ ಬಡಿಗೇರ, ಆಶಾ ಗದಿಗೆಪ್ಪನ್ನವರ, ರಂಗಪ್ಪ ಬೆಟಗೇರಿ, ಪ್ರಭು ಮಳಗಲಿ, ರಾಮದಾಸ ಬನ್ನೂರ, ಶಂಭು ಗುಣಕಿ ಸೇರಿದಂತೆ ಅನೇಕರಿದ್ದರು.
ವರದಿ
ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು
ಬಾಗಲಕೋಟೆ

Social Plugin