ಬೆಳಗಾವಿ : ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹುಣಶಾಳ ಪಿಜಿ ಗ್ರಾಮದಲ್ಲಿ ಜಾತ್ರೆ ಮೇ ತಿಂಗಳಿನಲ್ಲಿ ನಡೆಯಬೇಕಿದ್ದ ಜಾತ್ರೆ. ಕೋವಿಡ್ 19 ಲಾಕ್ ಡೌನ್ ಇರುವುದರಿಂದ ನಿಂತುಹೋಗಿರುವ ರಾಮೇಶ್ವರ ಜಾತ್ರೆ ಹಾಗೂ ಹನುಮಂತ ದೇವರ ಓಕಳಿ ಈಗ ಜುಲೈ ತಿಂಗಳಿನಲ್ಲಿ ಪ್ರಾರಂಭವಾಗಿದೆ.


ವರದಿ : ಮಲ್ಲಿಕಾರ್ಜುನ ಘೋಸರವಾಡ.

 ಹುಣಶಾಳ ಪಿಜಿ ಗ್ರಾಮದ ಎಲ್ಲ ಹಿರಿಯರು ಕೂಡಿಕೊಂಡು ನಡೆಸುವ ಜಾತ್ರೆ 11/7/2021 ರಂದು ರವಿವಾರ ಸನ್ನ ಓಕಳಿ ಸೋಮವಾರ ದೊಡ್ಡ ಓಕಳಿ ಹಾಗೂ ಮಂಗಳವಾರ ಭಂಡಾರ ಹಾರಿಸುವುದು ಮತ್ತು ಕಲ್ಲುಎತ್ತುವುದು ಸ್ಪರ್ಧೆ ಹಾಗೂ ಕುಸ್ತಿ ಸ್ಪರ್ಧೆಗಳು ನಡೆಯುತ್ತವೆ.
 ಈ ಮೂರು ದಿನ ಅದ್ದೂರಿಯಿಂದ ನಡೆಯುವ ಜಾತ್ರೆಗೆ ಬೆಳಗಾವಿ ಜಿಲ್ಲೆಯ ಬೇರೆಬೇರೆ ತಾಲೂಕಿನ ಜನರು ಆಗಮಿಸುತ್ತಾರೆ.


ಈ ಕುಸ್ತಿಗಳನ್ನು ನಡೆಸಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಅಣ್ಣ ಜಾರಕಿಹೊಳಿ ಅವರು ಹಾಗೂ ಕೆಎಂಎಫ್ ಅಧ್ಯಕ್ಷರು ಬಾಲಚಂದ್ರ ಅಣ್ಣ ಜಾರಕಿಹೊಳಿ ಹಣದ ಸಹಾಯ ಮಾಡುತ್ತಾರೆ.