*ರಾಷ್ಟ್ರೀಯ ಅಭಿವೃದ್ಧಿ ಶಾಲಾ ಕೋಣೆಗಳಲ್ಲಿದೆ : ಶಾಸಕ ಸಿದ್ದು ಸವದಿ*
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ
ರಬಕವಿ-ಹೊಸೂರನ ಪದ್ಮಾವತಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ಸನ್ ೨೦೨೦-೨೧ನೇ ಸಾಲಿನ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಗಳಲ್ಲಿ ಬಾಗಲಕೋಟ ಜಿಲ್ಲೆಯಲ್ಲಿ ಸಾಧನೆ ಮೆರೆದ ೧೮೩ ಮಕ್ಕಳಲ್ಲಿ ರಬಕವಿ-ಬನಹಟ್ಟಿ ಮತ್ತು ಜಮಖಂಡಿ ತಾಲೂಕಿನ ೧೧೬ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗಮನಾರ್ಹ ಸಾಧನೆ ಮೆರೆದಿದ್ದಾರೆ.ಅದರಲ್ಲಿಯೂ ನೂತನ ತಾಲೂಕು ರಬಕವಿ-ಬನಹಟ್ಟಿ ವ್ಯಾಪ್ತಿಯ ೬೫ ಮಕ್ಕಳು ದಾಖಲೆಯ ಸಾಧನೆ ಮೆರೆದಿರುವುದು ಪ್ರಶಂಸಾರ್ಹ.ರಾಷ್ಟದ ಅಭಿವೃದ್ಧಿ ಶಾಲಾ ಕೋಣೆಗಳಲ್ಲಿದೆ ಎಂಬುದನ್ನು ನಮ್ಮ ತಾಲೂಕಿನ ಮಕ್ಕಳು ನಿರೂಪಿಸಿದ್ದಾರೆಂದು ಶಾಸಕ ಸಿದ್ದು ಸವದಿ ಪ್ರಶಂಸಿಸಿದರು.
ಈ ಸಾಧನೆಗೆ ಶಿಕ್ಷಣ ದಾಸೋಹ ಭಗವಂತನ ಸೇವೆ ಎಂದು ಅಹರ್ನಿಶಿ ಶ್ರಮಿಸಿದ ಶಿಕ್ಷಕರು,ಪಾಲಕರು ಮತ್ತು ಶೃದ್ದಾಳುಗಳಾದ ಮಕ್ಕಳು ಹೆಮ್ಮೆಗೆ ಭಾಜನರು.ಮಕ್ಕಳೇ ದೇವರು,ಶಿಕ್ಷಕರು ಪೂಜಾರಿಗಳು ದಕ್ಷತೆಯ ಶಿಕ್ಷಣ ನೀಡಿಕೆಯಿಂದ ಪೂಜಾರಿಗಳು ದೇವರನ್ನು ಶೃಂಗರಿಸಿದಂತಾಗಿದೆಯೆಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ,ಜಿಲ್ಲಾ ಪಂಚಾಯತ,ಬಾಗಲಕೋಟ,ಕ್ಷೇತ್ರ ಶಿಕ್ಷಣಾದಿಕಾರಿಗಳ ಹಾಗೂ ಸಮನ್ವಯಾದಿಕಾರಿಗಳ ಕಾರ್ಯಾಲಯ ಮತ್ತು ಹಜಾರೆ ಫೌಂಡೇಶನ್ ರಬಕವಿ ಸಂಯುಕ್ತವಾಗಿ ಆಯೋಜಿಸಿದ್ದ ಅವಿಭಜಿತ ಜಮಖಂಡಿ ತಾಲೂಕಿನ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ಗುರುತರ ಸಾಧನೆ ಮೆರೆದ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಸಸಿಗೆ ನೀರುಣಿಸಿ ಚಾಲನೆ ನೀಡಿ ಮಾತನಾಡಿದ ಶಾಸಕ ಸವದಿ ಕಳೆದ ದಶಕದಲ್ಲಿ ರಾಷ್ಟç ಸಾಕಷ್ಟು ಪ್ರಗತಿ ಹೊಂದಿದೆ,ಆದರೆ ಇನ್ನೂ ಪ್ರಗತಿ ಶಿಖರ ತಲುಪಬೇಕಿದೆ.ತೊಂದರೆ, ತಪ್ಪು ತಿಳುವಳಿಕೆಗಳ ದಾಟಿ ಜಾಗತಿಕವಾಗಿ ಭಾರತ ಸರ್ವಶಕ್ತವಾಗಬೇಕಿದೆ.ಇದನ್ನು ಅನಾವರಣಗೊಳಿಸುವ ಜವಾಬ್ದಾರಿ ಇಂದಿನ ಮಕ್ಕಳ ಮೇಲಿದೆ. ಕರೊನಾ ರಕ್ಕಸನ ಅಟ್ಟಹಾಸದ ನಡುವೆಯೂ ಖಾಸಗಿ,ಸರ್ಕಾರಿ ಶಾಲೆಗಳು ಇಂದು ಸಾಧನೆಯ ಪೈಪೋಟಿಯಲ್ಲಿದ್ದಾರೆ.ಶಿಕ್ಷಕರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಕ್ಕಳನ್ನು ಸಜ್ಜುಗೊಳಿಸಲು ಬದ್ಧರಾಗಿದ್ದಾರೆ ಎಂಬುದನ್ನು ಈ ಪ್ರಗತಿ ಪ್ರತಿಬಿಂಬಿಸುತ್ತದೆ ಎಂದರು.
ಬಿಇಓ ಸಿ.ಎಂ ನ್ಯಾಮಗೌಡ ಐಎಎಸ್,ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಕ್ಕಳ ಮೂಲ ವೇದಿಕೆಯಾಗಿ ಎನ್‌ಎಮ್‌ಎಮ್‌ಎಸ್ ಪರೀಕ್ಷೆಗಳನ್ನು ರೂಪಿಸಲಾಗಿದೆ.ನಮ್ಮ ಶಿಕ್ಷಕರು ಮತ್ತು ಮಕ್ಕಳು ದಾಖಲೆಯ ಫಲಿತಾಂಶ ಮೆರೆದಿದ್ದು ಮುಂದಿನ ವರ್ಷ ಸಂಖ್ಯೆಯನ್ನು ೨೦೦ಕ್ಕೇರಿಸಲು ಎಲ್ಲರೂ ಶ್ರಮಿಸಬೇಕಿದೆಯೆಂದರು.
ಇದೇ ಸಂದರ್ಭದಲ್ಲಿ
ಅಧ್ಯಕ್ಷತೆಯನ್ನು ಸಾ.ಶಿ.ಇ.ನಿವೃತ್ತ ಆಯುಕ್ತ ಸಿದ್ಧರಾಮ ಮನಹಳ್ಳಿ,ಸಾ.ಶಿ.ಇ.ಬಾಗಲಕೋಟ ಉಪನಿರ್ದೇಶಕ(ಅಭಿವೃದ್ಧಿ) ಬಿ.ಕೆ.ನಂದನೂರ,ಹಜಾರೆ ಫೌಂಡೇಶನ್ ಕಾರ್ಯಾಧ್ಯಕ್ಷ ಸತೀಶ ಹಜಾರೆ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎನ್.ಬಿ. ಬಿರಾದಾರ,ಪದ್ಮಾವತಿ ಪಿಯೂ ಕಾಲೇಜು ಪ್ರಾಚಾರ್ಯ ಶ್ರೀಶೈಲ ಕುಂಬಾರ, ಹಜಾರೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಭಾರತಿ ತಾಳಿಕೋಟಿ,ಪದ್ಮಾವತಿ ಇಂಟರ್‌ನ್ಯಾಶನಲ್ ಸ್ಕೂಲ್ ಪ್ರಾಚಾರ್ಯ ಬಸವರಾಜ ಕಲಾದಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ ವಿಜೇತ ೧೮೩ ಮಕ್ಕಳನ್ನು ಸನ್ಮಾನಿಸಲಾಯಿತು.ಗುರುಮಾತೆ ಗೀತಾ. ಬಿಆರ್‌ಸಿ ಅಧಿಕಾರಿ ವಿಜಯಕುಮಾರ ವಂದಾಲ. ಮಲ್ಲಿಕಾರ್ಜುನ ಗಡೆಣ್ಣವರ,ಶ್ರೀಮತಿ ಎಸ್.ಪಿ.ರಾಮದುರ್ಗ.ಸಿಆರ್‌ಸಿ ಬಿ.ಎಂ.ಯಲ್ಲಟ್ಟಿ. ಪಾಲಕರು,ಆರ್‌ಟಿಸಿ ಅಧಿಕಾರಿ,ಶಿಕ್ಷ್ಷಣ ಸಂಯೋಜಕ ರವೀಂದ್ರ ಸಂಪಗಾವಿ,ಶ್ರೀಶೈಲ ಬುರ್ಲಿ,ತಾಲೂಕು ಶಿಕ್ಷಕ ಸಂಘದ ಅಧ್ಯಕ್ಷ ಸಿ.ಎಸ್.ಕಡಕೋಳ,ಉಪಾಧ್ಯಕ್ಷ ಬಿ.ಡಿ.ನೇಮೇಗೌಡ, ಸಿಆರ್‌ಸಿಗಳಾದ ಎಸ್.ಬಿ.ಮೋಮಿನ,ಪ್ರಶಾಂತ ಹೊಸಮನಿ,ಎಂ.ಎಂ.ಜಗಲಿ,ಜಗದೀಶ ಕುಳ್ಳೊಳ್ಳಿ ಸೇರಿದಂತೆ ಅನೇಕರಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ

Social Plugin