ತೇರದಾಳ ಸಮೀಪದ ತಮದಡ್ಡಿ ಗ್ರಾಮಕ್ಕೆ ಕೃಷ್ಣೆಯ ನೀರು ನುಗ್ಗಿ ಜನರ ಜೀವನ ಅಸ್ತವ್ಯಸ್ತವಾಗಿರುವುದನ್ನು ಶಾಸಕ ಸಿದ್ದು ಸವದಿ ವೀಕ್ಷಣೆ ಮಾಡಿದರು.
ತಮದಡ್ಡಿ ಗ್ರಾಮ ನುಗ್ಗಿದ ಕೃಷ್ಣಾ ನದಿ ನೀರು
ತೇರದಾಳ : ಮಹಾರಾಷ್ಟ್ರದಲ್ಲಿ ಅತೀವೃಷ್ಟಿ ಮಳೆಯಿಂದ ಕೃಷ್ಣಾ ನದಿ ಹಾಗೂ ಘಟಪ್ರಭಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ನದಿ ಪಾತ್ರದಲ್ಲಿರುವ ಜನರ ಜೀವನ ಅಸ್ತವ್ಯಸ್ತವಾಗುತ್ತಿದೆ. ಪ್ರಕೃತಿ ವಿಕೋಪದಿಂದ ಆಗಿರುವ ಘಟನೆಗೆ ಏನು ಮಾಡಲು ಆಗುವುದಿಲ್ಲ. ತಮದಡ್ಡಿ ಪುನರ್ವಸತಿ ಕೇಂದ್ರವನ್ನು ಕೊಡಲಾಗಿದೆ. ಈಗಾಗಲೇ ಟೆಂಡರ್ ಆಗಿದೆ ಕಾಮಗಾರಿಯು ಪ್ರಾರಂಭವಾಗಿದೆ. ತಮದಡ್ಡಿ ಹಾಗೂ ಹಳಿಂಗಳಿ ಗ್ರಾಮಗಳ ಜನರಿಗೆ ಕೆಲವೇ ದಿನಗಳಲ್ಲಿ ಹಕ್ಕು ಪತ್ರ ವಿತರಿಸಲಾಗುವುದು ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಸಮೀಪದ ತಮದಡ್ಡಿ ಗ್ರಾಮಕ್ಕೆ ಭೇಟಿ ನೀಡಿ ಕೃಷ್ಣಾ ನದಿ ನೀರು ಗ್ರಾಮಕ್ಕೆ ನುಗ್ಗಿರುವುದನ್ನು ಪರಿಶೀಲನೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ಘಟಪ್ರಭಾ ನದಿ ತಟದಲ್ಲಿರುವ ತೇರದಾಳ ಮತಕ್ಷೇತ್ರದ ನಂದಗಾಂವ ಗ್ರಾಮದ ಸುತ್ತಲೂ ನೀರು ಇರುವುದರಿಂದ ನಡುಗಡ್ಡೆಯಂತಾಗಿದೆ. ಮತ್ತು ಮಾರಾಪೂರ ಗ್ರಾಮದ ತೋಟದ ವಸತಿ ಮನೆಗಳನ್ನು ಈಗಾಗಲೇ ಸ್ಥಳಾಂತರ ಮಾಡಲಾಗಿದೆ. ಕೃಷ್ಣಾನದಿಯ ಪಾತ್ರದಲ್ಲಿನ ತಮದಡ್ಡಿ, ಹಳಿಂಗಳಿ ಹಾಗೂ ಆಸಂಗಿ, ಹಿಪ್ಪರಗಿ ನದಿ ದಂಡೆಯ ಮೇಲಿರುವ ಗ್ರಾಮಗಳಿಗೆ ಪ್ರವಾಹದ ಪರಿಣಾಮ ಬೀರುತ್ತದೆ. ಆದ್ದರಿಂದ ಪ್ರವಾಹ ಎದುರಿಸುತ್ತಿರುವ ಗ್ರಾಮಗಳಲ್ಲಿ ಈಗಾಗಲೇ ಜಾಗೃತೆ ಮೂಡಿಸಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಪ್ರವಾಹ ಕುರಿತು ಉಪವಿಭಾಗಾಧಿಕಾರಿಗಳು, ತಹಶೀಲ್ದಾರರ ನೇತೃತ್ವದಲ್ಲಿ ಎಲ್ಲ ಕಂದಾಯ ಅಧಿಕಾರಿಗಳ ಸಭೆಗಳನ್ನು ನಡೆಸುತ್ತಿದ್ದೇವೆ. ಸಂತ್ರಸ್ತರ ಸ್ಥಳಾಂತರ ಹಾಗೂ ದನಕರುಗಳ ಮೇವಿನ ವ್ಯವಸ್ಥೆಯನ್ನು ಮಾಡಲಾಗುವುದು. ನೊಡಲ್ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿಯೇ ಇದ್ದು ವರದಿ ಕೊಡಬೇಕು ಎಂಬ ಸೂಚನೆಯನ್ನು ಕೊಡಲಾಗಿದೆ. ಯಾರಿಗೂ ತೊಂದರಯಾಗದಂತೆ ನೋಡಲು ಸರಕಾರ ಎಲ್ಲ ದೃಷ್ಟಿಯಿಂದಲೂ ತಯಾರಿದೆ. ಸಂತ್ರಸ್ಥರ ಗ್ರಾಮಗಳಿಗೆ ಖುದ್ದಾಗಿ ಬೇಟಿ ನೀಡಿ ಅಲ್ಲಿರುವ ಸಮಸ್ಯೆಗಳನ್ನು ಪರೀಶೀಲನೆಯನ್ನು ಅಧಿಕಾರಿಗಳು ಹಾಗೂ ನಾನು ಸಹ ಮಾಡಲಾಗುವುದು. ಮುಂಜಾಗೃತೆಯಾಗಿ ಇಲ್ಲಿನ ಜನರು ಹಗೂ ದನಕರುಗಳು ಸಮೇತ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರವಾಗುವುದು ಒಳ್ಳೆಯದು ಅಲ್ಲಿ ಅಧಿಕಾರಿಗಳು ಎಲ್ಲ ವ್ಯವಸ್ಥೆಯನ್ನು ಮಾಡಿರುತ್ತಾರೆ. ಮಹಾರಾಷ್ಟ್ರದಲ್ಲಿಯೂ ಮಳೆಯು ಕಡಿಮೆಯಾಗಿದೆ. ಕೃಷ್ಣಾ ನದಿಗೆ ಬರುವ ನೀರು ಕಡಿಮೆಯಾಗಬಹುದು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಸಂಜಯ ಇಂಗಳೆ, ನೊಡಲ್ ಅಧಿಕಾರಿ ಅಶೋಕ ಗುಡಿಮನಿ, ಪಿಡಿಓ ಸುರೇಶ ಸನದಿ, ಗ್ರಾಮಲೆಕ್ಕಾಧಿಕಾರಿ ಎಮ್.ಎಸ್.ನೀಲನ್ನವರ, ಪಿಎಸ್‍ಐ ರಾಜು ಬೀಳಗಿ, ಮುಖಂಡರಾದ ಸುರೇಶ ಅಕ್ಕಿವಾಟ, ಬುಜಬಲಿ ವೆಂಕಟಾಪೂರ, ಮಧು ಕಾಂಬಳೆ ಸೇರಿದಂತೆ ಇನ್ನಿತರರು ಇದ್ದರು.
Social Plugin