*ಬಾಗಲಕೋಟೆ*
      *ರಬಕವಿ ಕೃಷ್ಣಾ ನದಿ*
 ರಬಕವಿ ಕೃಷ್ಣಾ ನದಿ ಅಪಾರ ಪ್ರಮಾಣದ ನೀರು ಹರಿದು ಜನರ ಜೀವನ ಅಸ್ತವ್ಯಸ್ತವಾದ ಸ್ಥಳಗಳಿಗೆ ಭೇಟಿ ನೀಡಿದ:: ಕಾಂಗ್ರೆಸ್ ಮುಖಂಡ ಡಾ. ಪದ್ಮಜೀತ ನಾಡಗೌಡ ಪಾಟೀಲ
ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಕೊಯ್ನಾ ಡ್ಯಾಮಿನಿಂದ ದಿನನಿತ್ಯ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಕೃಷ್ಣಾ ನದಿಗೆ ಅಂಟಿಕೊಂಡಿರುವ ಗ್ರಾಮಗಳು ತಮದಡ್ಡಿ. ಹಳಿಂಗಳಿ. ಆಸಂಗಿ. ಅಸ್ಕಿ. ಹಿಪ್ಪರಗಿ. ಗ್ರಾಮಗಳು ಪ್ರವಾಹಕ್ಕೆ ತುತ್ತು ಆಗುವ ಎಲ್ಲಾ ಸಂದರ್ಭವೂ ಬಂದು ನಿಂತಿದೆ. ಈಗಾಗಲೇ ಪ್ರಮುಖ ರಸ್ತೆ ಮತ್ತು ಸಂಪೂರ್ಣ ಜಲಾವೃತಗೊಂಡಿರುವ ಭೂಮಿಗಳ. ಅಂತ ಗ್ರಾಮಗಳಿಗೆ ಇಂದು ಕಾಂಗ್ರೆಸ ರಾಜ್ಯ ಕಿಸಾನ ಘಟಕದ ಸಂಚಾಲಕರಾದ ಡಾ ಪದ್ಮಜೀತ ನಾಡಗೌಡ ಪಾಟೀಲ ಭೇಟಿಯಾಗಿ ಸಂಕಷ್ಟಕ್ಕೆ ಈಡಾಗಿದ್ದಾದ ಸಂತ್ರಸ್ತರಿಗೆ ಸಹಾಯಹಸ್ತ ಚಾಚಿದರು. 
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಕೃಷ್ಣಾ ನದಿ ಅಕ್ಕಪಕ್ಕದಲ್ಲಿರುವ ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರ ಕಷ್ಟಗಳನ್ನು ಆಲಿಸಿದ್ದರು. 

ಬೆಳಗಾವಿ ತಾಲೂಕಿನ ಕುಡಚಿ ಮತ್ತು ಅಥಣಿ ತಾಲೂಕಿನ ದರೂರು ಸೇತುವೆಗಳು ಜಲಾವೃತವಾಗಿವೆ.
ಕೋಹಿನಾ ಡ್ಯಾಂನಿಂದ ಮತ್ತೆ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿ ಅಪಾಯದ ಮಟ್ಟಕ್ಕೆ ಬಂದು ತಲುಪಿದೆ

ವರದಿ : ಪ್ರಕಾಶ ಕುಂಬಾರ 
 ಬಾಗಲಕೋಟೆ