ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆ : ಇತಿಹಾಸದಲ್ಲೇ ವಿಶೇಷ ರೀತಿ ಪರೀಕ್ಷೆ ನಡೆಸಲು ಮುಂದಾದ ಸರ್ಕಾರ.
ವರದಿ : ಮಲ್ಲಿಕಾರ್ಜುನ ಘೋಸರವಾಡ.

ಬೆಂಗಳೂರು: ರಾಜ್ಯಾದ್ಯಂತ ಇಂದು ಎಸ್ಸೆಸ್ಸೆಲ್ಸಿ ಮೊದಲ ಪರೀಕ್ಷೆ ಶುರುವಾಗಲಿದೆ. ಈವರೆಗೆ ಎಂದೂ ಕಾಣದ ವಿಶೇಷ ರೀತಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಈ ಬಾರಿ ನಡೆಯಲಿದೆ.

ಆರು ವಿಷಯಗಳ ಪರೀಕ್ಷೆಯನ್ನು ಎರಡು ದಿನಗಳಿಗೆ ಇಳಿಸಿ ಪರೀಕ್ಷೆ ನಡೆಸಲಾಗುತ್ತಿದೆ. ಸೋಮವಾರ ಅಂದರೆ ಮೊದಲ ದಿನ ಕೋರ್ ವಿಷಯಗಳಾದ ಗಣಿತ, ವಿಜ್ಞಾನ , ಹಾಗೂ ಸಮಾಜ ವಿಜ್ಜಾನ ಪರೀಕ್ಷೆ ನಡೆಯಲಿದೆ. ಮೂರು ವಿಷಯಗಳಿಗೆ 120 ಅಂಕಗಳ ಪರೀಕ್ಷೆ ಇದಾಗಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಈಗಾಗಲೇ ಅಣಕು ಪರೀಕ್ಷೆ ಪರಿಶೀಲನೆ ನಡೆಸಿ ಸಾಧಕ- ಬಾಧಕಗಳ ಕುರಿತು ಚರ್ಚಿಸಲಾಗಿದೆ. ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಅಂತಿಮ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಬೆಳಗ್ಗೆ 10.30ರಿಂದ 1.30 ರವರೆಗೆ ಜರುಗಲಿದೆ. ಒಟ್ಟು 8 ಲಕ್ಷದ 76 ಸಾವಿರ 581 ವಿದ್ಯಾರ್ಥಿಗಳ ನೊಂದಣಿ ಮಾಡಿಕೊಂಡಿದ್ದು, ಇದರಲ್ಲಿ 4,72,643 ಬಾಲಕರು, 4,03,938 ಬಾಲಕಿಯರು ಇದ್ದಾರೆ.