ಚರಂಡಿಯಲ್ಲಿ ಕಾಲಂ ಪ್ರಕರಣ ಬೇರೆ ತಿರುವು...!

ಕಾಣದ ಕೈಗಳು ಮುಖ್ಯಾಧಿಕಾರಿಯಿಂದ ದೂರುದಾರರನ್ನು ದಿಕ್ಕು ತಪ್ಪಿಸುತ್ತಿದ್ದಾರೆಯೇ ?

ತೇರದಾಳ : ಗುರುಕುಲ ರಸ್ತೆಯನ್ನು ಅತೀಕ್ರಮಣ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಮಹೇಶ ಕುಂಚಗನೂರ ಪುರಸಭೆ ಅಧಿಕಾರಿಗಳಿಗೆ ದೂರು ಕೊಟ್ಟಿದ್ದರು. ಆ ದೂರಿನನ್ವಯ ರವಿವಾರ ಬೆಳಿಗ್ಗೆ ಮುಖ್ಯಾಧಿಕಾರಿಗಳು ಆ ಸ್ಥಳಕ್ಕೆ ಹೋಗಿ ಗುರುಕುಲ ಗೇಟಿನಿಂದ ಚರಂಡಿ ತೆರವುಗೊಳಿಸುತ್ತಾ ಬಂದರು. ಮುಂದೆ ರಮೇಶ ಪೋತದಾರ ಮನೆಯ ಮುಂದಿನ ಚರಂಡಿಯನ್ನು ತೆರವುಗೊಳಿಸಿದರು. ಅರ್ಜಿದಾರರ ದೂರಿನಲ್ಲಿ ಬಸವರಾಜ ಪತ್ತಾರ ಹಾಗೂ ರಮೇಶ ಪೋತದಾರ ಇವರ ಅನಧಿಕೃತ ಕಟ್ಟಡ ತೆರವು ಮಾಡಲು ಮನವಿ ಸಲ್ಲಿಸಿದ್ದರೂ ಸ್ವಚ್ಚತೆ ಮಾಡಲು ಬಂದ ತಮ್ಮ ಸಿಬ್ಬಂದಿಯೊಂದಿಗೆ ಅಧಿಕಾರಿಗಳು ಅರ್ಜಿದಾರರ ದೂರಿನ ಪ್ರಕಾರ ಕ್ರಮ ಕೈಗೊಳ್ಳದೆ ಬರೀ ಮೇಲ್ನೋಟಕ್ಕೆ ಕಾಣುವ ಹಾಗೆ ಕ್ರಮ ಕೈಗೊಂಡಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ. ಅಲ್ಲದೆ ಬಸಪ್ಪ ಪತ್ತಾರ ಅವರ ಮನೆಯ ಗೇಟ ಈಗಲೂ ಸಹ ಚರಂಡಿ ಮೇಲೇಯೇ ಇದೆ ಅದರ ಮುಂದೇ ನಿಂತು ಮುಖ್ಯಾಧಿಕಾರಿಗಳು ಮಾತನಾಡಿರುವುದು ಈ ಕೆಳಗಿರುವ ವಿಡಿಯೋದಲ್ಲಿ ನೋಡಬಹುದು. 


ಮುಖ್ಯಾಧಿಕಾರಿಗಳ ಹೇಳಿಕೆಯ ಪ್ರಕಾರ ಈ ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರು ಹಾಜರಿದ್ದರು ಎಂದು ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ ಅಲ್ಲಿ ಅಧ್ಯಕ್ಷರು ಹಾಜರಿರಲಿಲ್ಲ ಎಂದು ಅರ್ಜಿದಾರರು ಹಾಗೂ ಸಾರ್ವಜನಿಕರು ದೂರಿದ್ದಾರೆ. ಈ ಕಾರ್ಯಾಚರಣೆಗೆ ಸಂಬಂದ ಪಡೆದೇ ಇರುವ ವ್ಯಕ್ತಿಗಳು ಇಲ್ಲಿ ಕಾರುಬಾರು ನಡೆಸಿರುವುದು ಕಾಣಬರುತ್ತದೆ ಎಂದು ಅರ್ಜಿದಾರರು ಹಾಗೂ ನಿಂಗಪ್ಪ ದುಂಡಪ್ಪ ಕುಂಬಾರ,ಸತ್ಯಪ್ಪ ಚವಜ,ನಿಲಕಂಠಯ್ಯ ಹೀರೆಮಠ,ಸಂಜು ಶಿಂಗೆ ಇನ್ನಿತರರು ದೂರಿದ್ದಾರೆ. ಚರಂಡಿ ಸ್ವಚ್ಚತೆ ನೆಪದಲ್ಲಿ ಚರಂಡಿ ತೆರವುಗೊಳಿಸಿದಾಗ ರಮೇಶ ಪೋತದಾರ ಅವರ ಮನೆಯ ಮುಂದೆ ಚರಂಡಿ ಚಿಕ್ಕದಾಗಿದ್ದು ಹಾಗೂ ಮೊದಲಿನ ತನ್ನ ಹಾದಿಯನ್ನು ಬದಲಾಯಿಸಿ ಬೇರೆ ಕಡೆಗೆ ಚರಂಡಿಗೆ ದಾರಿ ತೋರಿಸಿದ್ದು ಸ್ಪಷ್ಟವಾಗಿ ಕಾಣಿಸಿದರು ಮುಖ್ಯಾಧಿಕಾರಿ ಚರಂಡಿ ಅತೀಕ್ರಮಣವಾಗಿಲ್ಲ ಎಂದು ಹೇಳುತ್ತಾರೆ. ಈ ಕುರಿತು ಅರ್ಜಿದಾರ  ಹಾಗೂ ವರದಿಗಾರ ಮುಖ್ಯಾಧಿಕಾರಿಗಳಿಗೆ ಪ್ರಶ್ನಿಸಿದಾಗ ನಾನು ಇಲ್ಲಿಗೆ ಬಂದು ಕೆಲವುದಿನಗಳಾಗಿವೆ ಅಷ್ಟೇ. ಈಗ ನನಗೆ ಕಾಣಿಸಿರುವುದು ಇಷ್ಟು ಮಾತ್ರ ಗೊತ್ತು ಹಿಂದೆ ಏನು ಮಾಡಿದ್ದಾರೆ ಎಂದು ನನಗೆ ಗೊತ್ತಿಲ್ಲ ಎಂದು ಜಾರಿಕೊಂಡರು. ಈ ಪ್ರಕರಣದ ಕುರಿತು ಸ್ಪಷ್ಟನೆಯನ್ನು  ಮುಖ್ಯಾಧಿಕಾರಿಗಳು ನಮ್ಮ ಮಾಧ್ಯಮಕ್ಕೆ ಮಾತ್ರ ಮಾಹಿತಿ ನೀಡಿದ್ದಾರೆ.ಆದರೆ ಯಾವುದೊ ತಲೆ ಬುಡವಿಲ್ಲದ ಬ್ಲೊಗರ್ ಸುದ್ದಿಯಲ್ಲಿ ಅರ್ಜಿದಾರರು ದಿಕ್ಕು ತಪ್ಪಿಸಿದ್ದಾರೆ ಎಂದು ಸುಳ್ಳು ಸುದ್ದಿ ನಿನ್ನೆ WhatsApp ಗಳಲ್ಲಿ ವರದಿ ಹರಿದಾಡಿದ್ದು ಎಷ್ಟು ಸರಿ? ಎಂದು ಅರ್ಜಿದಾರ ಮಹೇಶ ಕುಂಚಕನೂರ ದೂರಿದ್ದಾರೆ, ಇದರಿಂದ ಅರ್ಜಿದಾರರು ಮೇಲಾಧಿಕಾರಿಗಳಿಗೆ ಪ್ರಕರಣವನ್ನು ತನಿಕೆ ಮಾಡಲು ಹಿಂದೆಯು ಅರ್ಜಿ ಸಲ್ಲಿಸಿದ್ದಾರೆ ಮತ್ತೇ ಈಗಲೂ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ ಎಂದು ಅರ್ಜಿದಾರ ಮಹೇಶ ಕುಂಚಗನೂರ ತಮ್ಮ ಮುಂದಿನ ನಡೆಯನ್ನು ಮನ ಬಿಚ್ಚಿ ಪತ್ರಿಕೆಗೆ ಹೇಳಿದ್ದಾರೆ ಅಲ್ಲದೆ ಈ ಪ್ರಕರಣದಲ್ಲಿ ವಿಶೇಷ ಸಂಗತಿಗಳನ್ನು ಇಲ್ಲಿ ಸಾರ್ವಜನಿಕರು ಕಾದು ನೋಡಬೇಕಾಗುತ್ತದೆ. ಒಬ್ಬ ಪತ್ರಕರ್ತ ಕಳ್ಳನಾಗಿರುವ ಉದಾಹರಣೆಯನ್ನು ಕೇಳಿದ್ದೇವೆ. ಆದರೆ ಕಳ್ಳನೆ ಪತ್ರಕರ್ತನಾದರೆ ಏನು ಆಗಬಹದು ಎಂದು ಮುಂದೆ ನೋಡಬಹುದು....!



ವರದಿ : ವಿಜಯ ವಾಜಂತ್ರಿ