ತೇರದಾಳ : ಆಲ್ ಇಂಡಿಯಾ ಕಾಂಗ್ರೆಸ್ ಕಮೀಟಿ ಮಾನವ ಹಕ್ಕುಗಳ ವಿಭಾಗ ರಬಕವಿ-ಬನಹಟ್ಟಿ ತಾಲೂಕಿನ ಅಧ್ಯಕ್ಷರಾಗಿ ಪಟ್ಟಣದ ಸಲೀಮ ತಾಂಬೋಳಿ ನೇಮಕಗೊಂಡಿದ್ದಾರೆ. ಆಲ್ ಇಂಡಿಯಾ ಕಾಂಗ್ರೆಸ್ ಕಮೀಟಿಯ ಮಾನವ ಹಕ್ಕುಗಳ ವಿಭಾಗದ ರಾಜ್ಯಾಧ್ಯಕ್ಷರಾದ ಗಿರೀಶ ಎಂ.ಜೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಎಂ. ಶ್ರೀನಿವಾಸ ಹಾಗೂ ಉತ್ತರ ಕನಾಟಕದ ಜಿಲ್ಲಾ ಉಸ್ತುವಾರಿ ಅಧ್ಯಕ್ಷ ಚಂದ್ರಕಾಂತ ನಾಯಕ ಅವರು ನೇಮಕಾತಿ ಆದೇಶ ಹೊರಡಿಸಿದ್ದಾರೆ.