ತೇರದಾಳದ ಕಲೂತಿ ನರದಲ್ಲಿ ಮಹಿಳೆಯರಿಗೆ ಶೌಚ್ಚಾಲಯವಿದ್ದರು ಇಲ್ಲದಂತಾಗಿದೆ ಎಂದು ಅಲ್ಲಿನ ಮಹಿಳೆಯರು ಆರೋಪಿಸಿ ಚರಿಗೆ ಹಿಡಿದು ಪ್ರತಿಭಟನೆ ಮಾಡಿದರು.
ಮಹಿಳೆಯರ ಶೌಚ್ಚಾಲಯವಿದ್ದರೂ ಉಪಯೋಗಕ್ಕಿಲ್ಲ.
ತೇರದಾಳ : ಪಟ್ಟಣದ ಕಲೂತಿ ನಗರದಲ್ಲಿನ ಮಹಿಳಾ ಶೌಚ್ಚಾಲಯವಿದ್ದರೂ ಉಪಯೋಗಕ್ಕೆ ಬಾರದಂತಾಗಿದೆ ಎಂದು ಅಲ್ಲಿನ ಮಹಿಳೆಯರು ದೂರಿದ್ದಾರೆ.
2017-18ನೇ ಸಾಲಿನಲ್ಲಿ ಪ್ರದೇಶಾಭಿವೃದ್ಧಿ ಅನುದಾನದಡಿಯಲ್ಲಿ 5ಲಕ್ಷ ಹಣದಲ್ಲಿ ಶೌಚಾಲಯ ನಿರ್ಮಾಣ ಮಾಡಿದ್ದರು. ಅದಕ್ಕೆ ಮೂಲ ಸೌಕರ್ಯ ನೀರಿನ ಸೌಲಭ್ಯ ಕಲ್ಪಿಸದೆ ಶೌಚಾಲಯ ನಿರ್ಮಾಣ ಮಾಡಿದ್ದಾರೆ. ಇದಲ್ಲದೆ ಪುರಸಭೆಯವರು ಶೌಚಾಲಯಗಳಿಗೆ ಬೀಗ ಹಾಕಿ ಅವುಗಳನ್ನು ಸಾರ್ವಜನಿಕರು ಉಪಯೋಗಿಸದಂತೆ ಮಾಡಿರುವುದು ಸಾರ್ವಜನಿಕರ ಆಕ್ರೋಶಗೊಂಡು ಪುರಸಭೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದರಲ್ಲದೆ ಕೂಡಲೇ ಶೌಚಾಲಯಕ್ಕೆ ನೀರಿನ ಸೌಲಭ್ಯ ಕಲ್ಪಿಸಲು ಒತ್ತಾಯಿಸಿದ್ದಾರೆ. ಈ ವ್ಯವಸ್ಥೆ ಸರಿಯಾಗದಿದ್ದಲ್ಲಿ ಕಲೂತಿ ನಗರದ ಎಲ್ಲ ಮಹಿಳೆಯರು ಪುರಸಭೆಗೆ ಮುತ್ತಿಗೆ ಹಾಕಿ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಮಾಡುವವರೆಗೆ ಧರಣಿ ನಡೆಸಲಾಗುವುದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸುದಾ ಬಡಿಗೇರ, ಕಲಾವತಿ ಮಠಪತಿ, ಗಂಗವ್ವ ಬಂಡಾರಿ, ಶಾಂತವ್ವ ಸುನಾಳ, ವಸಂತ ಹಟ್ಟೆನ್ನವರ, ರೇಖಾ ಕಾಂಬಳೆ, ಸಾವಕ್ಕಾ ಮಚ್ಚೆನ್ನವರ, ಶಾಂತವ್ವ ನಾವಿ, ರೇಖಾ ಸಾವಂತ ಸೇರಿದಂತೆ ಇನ್ನಿತರರು ಇದ್ದರು.

Social Plugin