*ರಬಕವಿ-ಬನಹಟ್ಟಿಯಲ್ಲಿ ಮತ್ತೆ ಶುರುವಾದ ಕೊರೊನಾ ೨ನೇ ಅಲೆ*
 ಕೊರೊನಾ ೨ನೇ ಅಲೆಯನ್ನು ಸಂಪೂರ್ಣ ನಿಯಂತ್ರಣಕ್ಕೆ ತಂದು ಕಳೆದ ೨೦ ದಿನಗಳಿಂದ ಒಂದೇ ಒಂದು ಪ್ರಕರಣ ದಾಖಲಾಗಿದ್ದಿಲ್ಲ. ಇದೀಗ ಕಳೆದ ಮೂರು ದಿನಗಳಿಂದ ತಾಲೂಕಿನಾದ್ಯಂತ ಎರಡು-ಮೂರು ಜನರಿಗೆ ಕೊರೊನಾ ಪಾಜಿಟಿವ್ ದೃಢವಾಗುತ್ತಿರುವದು ಆತಂಕಕ್ಕೆ ಕಾರಣವಾಗಿದೆ.

ಸರ್ಕಾರವು ಸೋಂಕಿತರ ಬಗ್ಗೆ ಹೆಚ್ಚಿನ ನಿಗಾ ವಹಿಸುತ್ತಿದ್ದು, ಸದ್ಯದ ಸ್ಥಿತಿಯಲ್ಲಿ ತಾಲೂಕಿನಾದ್ಯಂತ ಜನರು ಕಟ್ಟೆಚ್ಚರ ವಹಿಸಬೇಕಾದ ಅನಿವಾರ್ಯತೆಯಿದೆ. ಸೋಂಕಿತರನ್ನು ಜಮಖಂಡಿ ಕೋವಿಡ್ ಕಾಳಜಿ ಕೇಂದ್ರಕ್ಕೆ ಕಳಿಸಲಾಗುತ್ತಿದೆ. ಯಾವದೇ ಕಾರಣಕ್ಕೂ ಶಂಕಿತರು ವಿಳಂಬನೀತಿ ಎದುರಿಸದೆ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಬಂದು ಕೊರೊನಾ ಪರೀಕ್ಷೆ ನಡೆಸಬೇಕೆಂದು ವೈದ್ಯಾಧಿಕಾರಿ ಡಾ. ಎಂ.ಎನ್. ನದಾಫ್ ತಿಳಿಸಿದ್ದಾರೆ.


*ಮಾಸ್ಕ್ ಇಲ್ಲದೆ ಸಂಚಾರ*

 ಸದ್ಯ ಯಾವದೇ ಅಧಿಕಾರಿಗಳು ಕೋವಿಡ್ ನಿರ್ಮೂಲನೆ ಕಾರ್ಯಕ್ಕೆ ರಸ್ತೆಗಿಳಿಯದ ಕಾರಣ ಇದನ್ನೇ ಬಂಡವಾಳವಾಗಿಸಿಕೊಂಡಿರುವ ಜನತೆ ಸಾಮಾಜಿಕ ಅಂತರ ಹಾಗು ಮಾಸ್ಕ್ ಇಲ್ಲದೆ ಸಂಚರಿಸುತ್ತಿದ್ದಾರೆ. ಮಂಗಳವಾರ ಹಾಗು ಶನಿವಾರ ಸಂತೆಯಲ್ಲಿಯೂ ಯಾವದೇ ಜನತೆ ನಿರ್ಲಕ್ಷö್ಯ ಹಾಗು ಯಾವದೇ ಜಾಗೃತಿಯಲ್ಲದೆ ಸಂಚರಿಸುತ್ತಿದ್ದಾರೆ.



`ಬೇಕಾಬಿಟ್ಟಿ ಸಂಚಾರಬೇಡ, ಮೂರನೇ ಅಲೆ ಮುನ್ಸೂಚನೆಯಿದ್ದು ಸಂತೆ ಹಾಗು ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಹಾಗು ಮಾಸ್ಕ್ ಕಡ್ಡಾಯವಾಗಿರಲಿ’. ಎಂದು ತಹಶೀಲ್ದಾರ ಸಂಜಯ ಇಂಗಳೆ ಖಡಕ್ ಸಂದೇಶ ರವಾನಿಸಿದರು.


`ಇದೀಗ ಮರ‍್ನಾಲ್ಕು ಹೊಸ ಪ್ರಕರಣಗಳು ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಬಂದಿದ್ದು, ಕೋವಿಡ್ ಕಾಳಜಿ ಕೇಂದ್ರಕ್ಕೆ ಬೀಳಗಿ, ಜಮಖಂಡಿ, ರಬಕವಿ-ಬನಹಟ್ಟಿ ಹಾಗು ಮುಧೋಳ ತಾಲೂಕಿಗೆ ಜಮಖಂಡಿಯಲ್ಲಿಯೇ ವ್ಯವಸ್ಥೆ ಕಲ್ಪಿಸಲಾಗಿದೆ. ಕೋವಿಡ್ ನಿಯಮಾವಳಿಯಲ್ಲಿಯೇ ಜನತೆ ಕಾರ್ಯದಲ್ಲಿ ಮುಂದುವರೆಯಬೇಕೆಂದು ಜಮಖಂಡಿ ಉಪವಿಭಾಗಧಿಕಾರಿ
ಡಾ. ಸಿದ್ದು ಹುಲ್ಲೋಳ್ಳಿ ತಿಳಿಸಿದರು.


ವರದಿ
ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು
ಬಾಗಲಕೋಟೆ