*ಹಿಪ್ಪರಗಿ ಗ್ರಾಮದಲ್ಲಿ ೨೦ ಕ್ಕೂ ಹೆಚ್ಚು ಮನೆಗಳ ಜಲಾವೃತ*

ಹಿಪ್ಪರಗಿ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಹೊರ ಬಿಟ್ಟ ಪರಿಣಾಮವಾಗಿ ಹಿಪ್ಪರಗಿ ಗ್ರಾಮದಲ್ಲಿ ನೀರು ನುಗ್ಗಿದೆ. 

ನೀರು ನುಗ್ಗಿದ ಪರಿಣಾಮವಾಗಿ ೨೦ ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ.
ಸ್ಥಳೀಯ ಶಾಲೆಯೊಂದು ಸಂಪೂರ್ಣವಾಗಿ ಜಲಾವೃತಗೊಂಡಿದೆ.
 ಜಲಾವೃತಗೊಂಡಿರುವ ಮನೆಗಳಲ್ಲಿ ವಾಸವಿರುವ ಜನರನ್ನು ತಾಲ್ಲೂಕು ಆಡಳಿತ ಬೇರೆ ಕಡೆಗೆ ಸ್ಥಳಾಂತರಿಸುತ್ತಿದೆ. 

ಹಿಪ್ಪರಗಿಯ ಸಂಗಮೇಶ್ವರ ದೇವಸ್ಥಾನದ ಕರ್ತು ಗದ್ದುಗೆಯ ನೀರಿನಿಂದ ಜಲಾವೃತಗೊಂಡಿದೆ. 



ವರದಿ
ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು
ಬಾಗಲಕೋಟೆ